ಬೆಂಗಳೂರು : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಆರ್ಸಿಬಿ ತನ್ನ ಆರಂಭಿಕ ಪಂದ್ಯದಲ್ಲಿ ಚೆನ್ನೈ ವಿರುದ್ಧ 6 ವಿಕೆಟ್ಗಳಿಂದ ಸೋತರೆ, ಪಂಜಾಬ್ ಕಿಂಗ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 4 ವಿಕೆಟ್ಗಳಿಂದ ಜಯ ಸಾಧಿಸಿತು. ಇಂದು ಐಪಿಎಲ್ 2024ರಲ್ಲಿ ಈ ಎರಡು ತಂಡಗಳು ಗೆಲುವಿಗಾಗಿ ಕಾದಾಡಲಿವೆ.
IPL 2024: ತವರಿನಲ್ಲಿ ಇಂದು RCB Vs ಪಂಜಾಬ್ ಕಿಂಗ್ಸ್: ಯಾರ ಮುಡಿಗೆ ಗೆಲುವು?
ಇಂದಿನಿಂದ ಚಿನ್ನಸ್ವಾಮಿ ಮೈದಾನದಲ್ಲಿ ಐಪಿಎಲ್ ಪಂದ್ಯಾವಳಿ ಶುರುವಾಗಲಿದೆ. ಹೀಗಾಗಿ ಪೊಲೀಸರು ಅಲರ್ಟ್ ಆಗಿದ್ದಾರೆ. ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಬೆನ್ನಲ್ಲೆ ಖಾಕಿ ಅಲರ್ಟ್ ಆಗಿದ್ದು ಕಳೆದ ಒಂದು ವಾರದಿಂದಲೇ ಸ್ಟೇಡಿಯಂ ಇಂಚಿಂಚೂ ತಪಾಸಣೆ ನಡೆಸಿದ್ದಾರೆ. ಬಂದೋಬಸ್ತ್ಗಾಗಿ ಒಂದು ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದೆ. ಪ್ರತಿ ಭಾರಿಗಿಂತ ಈ ಭಾರಿ ದುಪ್ಪಟ್ಟು ಭದ್ರತೆ ಕಲ್ಪಿಸಲಾಗಿದೆ.
ಸಾರ್ವಜನಿಕರ ತಪಾಸಣೆಗಾಗಿ 300 ಮಂದಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಸ್ಟೇಡಿಯಂಗೆ ಬರುವ ಪ್ರತಿಯೊಬ್ಬರನ್ನ ತಪಾಸಣೆ ನಡೆಸಿ ಒಳ ಬಿಡಲಾಗುತ್ತೆ. ಈಗಾಗಲೇ ಬಿಡಿಟಿಎಸ್ ಟೀಂನಿಂದ ಸಂಪೂರ್ಣ ಪರಿಶೀಲನೆ ನಡೆದಿದೆ. ಬಂದೋಬಸ್ತ್ ಗಾಗಿ ಡಿ ಸ್ವಾಟ್, ಸಿ ಸ್ವಾಟ್ ಟೀಂ ನಿಯೋಜನೆ ಮಾಡಲಾಗಿದೆ. ಹಾಗೂ ಮೊಬೈಲ್ ಕಮಾಂಡ್ ಸೆಂಟರ್ ವೆಹಿಕಲ್, ನಾಲ್ಕು ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಅಗತ್ಯ ಬಿದ್ದಲ್ಲಿ ಡ್ರೋಣ್ ಮೂಲಕವೂ ಹದ್ದಿನ ಕಣ್ಣಿಡಲು ಪೊಲೀಸ್ ಪಡೆ ಸಜ್ಜಾಗಿದೆ.