ಅಂತಿಮ ಎಸೆತದವರೆಗೂ ರೋಚಕತೆ ಮೂಡಿಸಿದ್ದ ಪಂದ್ಯದ ಕೊನೆಯ ಓವರ್ ಎಸೆಯಲು ಯುವ ವೇಗಿ ಹರ್ಷಿತ್ ರಾಣಾ ಮಾನಸಿಕ ಒತ್ತಡಕ್ಕೆ ಆದರೆ ನಾವು ಆತನಲ್ಲಿ ಆತ್ಮವಿಶ್ವಾಸ ತುಂಬಿದ್ದೆವು ಎಂದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಹೇಳಿದ್ದಾರೆ. ಶನಿವಾರ (ಮಾರ್ಚ್ 23) ನಡೆದ ಹೈ ಸ್ಕೋರಿಂಗ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕೆಕೆಆರ್ 4 ರನ್ ಗಳ ರೋಚಕ ಗೆಲುವು ಸಾಧಿಸಿದೆ
ಪಂದ್ಯ ಮುಗಿದ ನಂತರ ನಡೆದ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಕೊನೆಯ ಓವರ್ ಎಸೆಯಲು ಹರ್ಷಿತ್ ರಾಣಾ ಮಾನಸಿಕ ಒತ್ತಡಕ್ಕೆ ಸಿಲುಕಿದ್ದರು ಆದರೆ ಅವರನ್ನು ಸಮಾಧಾನ ಪಡಿಸಿದ ನಂತರ ಉತ್ತಮ ಪ್ರದರ್ಶನ ತೋರಿ ತಂಡಕ್ಕೆ ಗೆಲುವು ತಂದುಕೊಟ್ಟರು ಎಂದು ಹೇಳಿದರು.
ಪಂದ್ಯದ 17ನೇ ಓವರ್ ನಿಂದಲೂ ನನಗೆ ಸೋಲುವ ಭೀತಿ ಉಂಟಾಗಿತ್ತು. ಆದರೆ ಅಂತಿಮ ಓವರ್ ನಲ್ಲಿ ಏನಾದರೂ ಆಗಬಹುದು ಎಂಬ ಭರವಸೆ ನನಗಿತ್ತು. ಕೊನೆಯ ಓವರ್ ನಲ್ಲಿ ಪಂದ್ಯ ಗೆಲ್ಲಲು ಎದುರಾಳಿ ತಂಡಕ್ಕೆ 13 ರನ್ ಗಳ ಅವಶ್ಯಕತೆ ಇತ್ತು. ಈ ಸಮಯದಲ್ಲಿ ಬೌಲ್ ಮಾಡಲು ಅನುಭವಿ ಬೌಲರ್ ಗಳ ಕೊರತೆ ತಂಡಕ್ಕಿತ್ತು. ಆದರೆ ನಾನು ಆತನನ್ನು (ಹರ್ಷಿತ್ ರಾಣಾ) ನಂಬಿ ನಿನ್ನ ನೈಜ ಪ್ರದರ್ಶನ ನೀಡುವಂತೆ ಉತ್ತೇಜಿಸಿದ್ದೆ,” ಎಂದು ಕೆಕೆಆರ್ ನಾಯಕ ಹೇಳಿದ್ದಾರೆ.
ಕೊನೆಯ ಓವರ್ ಎಸೆಯಲು ಬಂದಾಗ ನಾನು ಆತನ ಕಣ್ಣುಗಳನ್ನು ನೋಡುವಾಗ ಆತ ನಿಜಕ್ಕೂ ಮಾನಸಿಕ ಒತ್ತಡಕ್ಕೆ ಸಿಲುಕಿದ್ದು ನನಗೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ನಾನು ಆತನಿಗೆ ನಿನ್ನ ನೈಜ ಆಟ ಪ್ರದರ್ಶಿಸು, ನಾವು ಪಂದ್ಯ ಸೋತರೂ ಒಳ್ಳೆಯದೆ. ಆದರೆ ನೀನು ಧೈರ್ಯ ತಂದುಕೊಂಡು ನಾನು ಹೇಳಿದ್ದನ್ನು ಮಾಡು ಮತ್ತು ಡ್ರೆಸಿಂಗ್ ರೂಮ್ ನಲ್ಲಿ ನಮಗೆ ನೀಡಿದ ಸಲಹೆ ಗಮನದಲ್ಲಿಡು ಎಂದು ಹೇಳುವ ಮೂಲಕ ನಾನು ಆತನನ್ನು ಸಮಾಧಾನಗೊಳಿಸಲು ಪ್ರಯತ್ನಿಸಿದ್ದೆ,” ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.