ಭಾರತೀಯ ಚಿತ್ರರಂಗದ ಅತ್ಯುತ್ತಮ ನಟ ಪ್ರಕಾಶ್ ರಾಜ್ ಇಂದು ಹುಟ್ಟುಹಬ್ಬದ ಲಡಾಕ್ ನಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ತಮ್ಮ ಅದ್ಬುತ ನಟನೆಯ ಜೊತೆಗೆ ಪ್ರಕಾಶ್ ರಾಜ್ ವಿವಾದಗಳಿಂದಲೂ ಭಾರೀ ಸದ್ದು ಮಾಡುತ್ತಿರುತ್ತಾರೆ.
ತಮಗೆ ತಮ್ಮ ಅನಿಸಿದ್ದನ್ನು ನೇರಾ ನೇರವಾಗಿ ಹೇಳುವ ಮೂಲಕ ಪ್ರಕಾಶ್ ರಾಜ್ ಸಾಕಷ್ಟು ಭಾರಿ ವಿವಾದಕ್ಕೆ ಈಡಾಗಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಪ್ರಕಾಶ್ ರಾಜ್, ಹಣಕ್ಕಾಗಿಯೇ ಕೆಲವು ಸ್ಟುಪಿಡ್ ಸಿನಿಮಾ ಮಾಡಿದ್ದಾಗಿ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಫಿಲ್ಮ್ ಕಂಪಾನಿಯನ್ ಸೌತ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಪ್ರಕಾಶ್ ರಾಜ್, ಹಣಕ್ಕಾಗಿ ಸ್ಟುಪಿಡ್ ಸಿನಿಮಾಗಳನ್ನೂ ಕೂಡ ಮಾಡಿದ್ದೇನೆ ಎಂದು ಹೇಳಿದ್ದಾರೆ. ಈ ಸಿನಿಮಾ ಮಾಡಿದ್ರೆ ನನಗೆ ಹೆಚ್ಚು ಸಿಗುತ್ತೆ ಅಂತ ಯಾವಾಗಲಾದ್ರೂ ಯೋಚನೆ ಮಾಡಿದ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಕಾಶ್ ರಾಜ್, ನಾನು ಹಣಕ್ಕಾಗಿ ಸ್ಟುಪಿಡ್ ಸಿನಿಮಾಗಳನ್ನು ಮಾಡಿದ್ದೂ ಇದೆ. ನನಗೆ ಬ್ಯಾಲೆನ್ಸ್ ಮಾಡುವ ಅಗತ್ಯವಿಲ್ಲ. ಕಮರ್ಷಿಯಲ್ ಚಿತ್ರಗಳನ್ನು ನಾನು ಹೇಟ್ ಮಾಡೋದಿಲ್ಲ. ಅವುಗಳಿಗೂ ದೊಡ್ಡ ಪ್ರೇಕ್ಷಕ ವರ್ಗ ಇದೆ. ಎಲ್ಲರೂ ಎಷ್ಟು ಶ್ರಮ ಹಾಕುತ್ತಾರೋ ಅಷ್ಟೇ ಶ್ರಮವನ್ನು ಅವರೂ ಹಾಕುತ್ತಾರೆ ಎಂದ್ರು. ಕೆಲ ಸಿನಿಮಾಗಳಲ್ಲಿ ನನ್ನನ್ನು ವಿಲನ್ ಆಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ನನ್ನ ಮನಸ್ಸು ಎಂಥಾ ಸಿನಿಮಾ ಮಾಡ್ತೀಯಾ ಎನ್ನುತ್ತದೆ. ನನಗೂ ಹಣ ಬೇಕಲ್ಲಾ ಎಂದು ಪ್ರಕಾಶ್ ರಾಜ್ ಹೇಳಿದ್ರು.
ಹಣಕ್ಕಾಗಿ ಮಾತ್ರವಲ್ಲ ಕಥೆ ಇಷ್ಟವಾಗಿದ್ರೆ ಪ್ರಕಾಶ್ ರೈ ಸಿನಿಮಾ ಫ್ರೀ ಆಗಿ ಮಾಡಿರೋದಾಗಿ ಹೇಳಿದ್ರು. ಸಿನಿಮಾನ ಉಚಿತವಾಗಿ ಏಕೆ ಮಾಡ್ತೀಯಾ ಎಂದು ಅನೇಕರು ನನ್ನನ್ನು ಕೇಳಿದ್ದಾರೆ. ಒಂದು ಸಿನಿಮಾ ಮಾಡುವುದರಿಂದ ಸಿಗುವ ರಿವಾರ್ಡ್ಗಳು ಅವರಿಗೆ ಕಾಣುವುದಿಲ್ಲ ಎಂದು ಪ್ರಕಾಶ್ ರೈ ಹೇಳಿದ್ದಾರೆ. ಮರದ ಸುತ್ತುತ್ತಾ ಡ್ಯಾನ್ಸ್ ಮಾಡೋದನ್ನು ಮಿಸ್ ಮಾಡಿಕೊಳ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಕಾಶ್ ರಾಜ್, ಅದು ಇಷ್ಟ ಆಗುವುದಿಲ್ಲ ಎಂದರ್ಥವಲ್ಲ. ನನಗೆ ಕಂಫರ್ಟ್ ಇಲ್ಲ ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ ಇಂಡಸ್ಟ್ರಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಪ್ರಕಾಶ್ ರಾಜ್ ಹೆಚ್ಚಿನ ಮನ್ನಣೆ ಗಳಿಸಿದ್ದು, ತಮಿಳು, ತೆಲುಗು ಸಿನಿಮಾಗಳಿಂದ ಹಿಂದಿಯಲ್ಲೂ ತಮ್ಮದೇ ಚಾಪು ಮೂಡಿಸಿದ್ದಾರೆ. 90ರ ದಶಕದಲ್ಲಿ ಸಿನಿ ಪ್ರಿಯರಿಗೆ ವಿಲನ್ ಪಾತ್ರ ಅಂದ್ರೆ ಪ್ರಕಾಶ್ ರಾಜ್ ಅವರೇ ಸೂಕ್ತ ಎನ್ನುತ್ತಿದ್ದರು. ಅಷ್ಟೇ ಅಲ್ಲದೇ ಅನೇಕ ಒಳ್ಳೆಯ ಅಪ್ಪನಾಗಿ ತೆರೆ ಮೇಲೆ ಕಾಣಿಸಿಕೊಂಡು ಅಭಿಮಾನಿಗಳ ಮನಗೆದ್ದರು. ಹೀರೋ ಆಗಲು ಸೈ, ಪೋಷಕ ಪಾತ್ರಗಳಿಗೂ ಜೈ ಎಂದ ಪ್ರಕಾಶ್ ರಾಜ್, ದುಡ್ಡಿಗಾಗಿಯೂ ಕೆಲ ಸಿನಿಮಾಗಳನ್ನು ಮಾಡಿದ್ದಾಗಿ ಓಪನ್ ಆಗಿ ಹೇಳಿಕೊಂಡಿದ್ದಾರೆ.