ನವದೆಹಲಿ: ಮದ್ಯ ಹಗರಣದಲ್ಲಿ ಬಂಧನಕ್ಕೆ ಒಳಗಾಗಿರುವ ಅರವಿಂದ್ ಕೇಜ್ರಿವಾಲ್ ಅವರು ಖಲಿಸ್ತಾನಿ ಗುಂಪುಗಳಿಂದ 16 ಮಿಲಿಯನ್ ಡಾಲರ್ (ಅಂದಾಜು 133.54 ಕೋಟಿ ರೂ.) ಪಡೆದಿರುವ ಗಂಭೀರ ಆರೋಪ ಕೇಳಿ ಬಂದಿದೆ. ಭಾರತಕ್ಕೆ ಬೇಕಾಗಿರುವ ಖಾಲಿಸ್ತಾನಿ ಉಗ್ರ ಗುರ್ಪತ್ವಂತ್ ಸಿಂಗ್ ಪನ್ನುನ್ ಮಾತನಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ಆತ ಆಪ್ ಪಕ್ಷಕ್ಕೆ 2014 ಮತ್ತು 2022 ರ ನಡುವೆ ಹಣ ಸಂದಾಯವಾಗಿದೆ ಎಂದು ಹೇಳಿದ್ದಾನೆ.
1993ರ ದೆಹಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಖಲಿಸ್ತಾನಿ ಉಗ್ರ ದೇವೇಂದರ್ ಪಾಲ್ ಸಿಂಗ್ ಭುಲ್ಲಾರ್ನನ್ನು ಬಿಡುಗಡೆ ಮಾಡಿಸುತ್ತೇನೆ ಎಂದು ನಂಬಿಸಿ ನಮ್ಮಿಂದ ಕೇಜ್ರಿವಾಲ್ ಹಣ ಪಡೆದಿದ್ದಾರೆ ಎಂದು ಪನ್ನು ಆರೋಪಿಸಿದ್ಧಾನೆ. 1993ರ ದೆಹಲಿ ಬಾಂಬ್ ಸ್ಫೋಟದಲ್ಲಿ 9 ಮಂದಿ ಮೃತಪಟ್ಟು 31 ಮಂದಿ ಗಾಯಗೊಂಡಿದ್ದರು. 2014ರಲ್ಲಿ ನ್ಯೂಯಾರ್ಕ್ನಲ್ಲಿರುವ ಗುರುದ್ವಾರದಲ್ಲಿ ಕೇಜ್ರಿವಾಲ್ ಅವರನ್ನು ನಾನು ಭೇಟಿಯಾಗಿ ಮಾತುಕತೆ ನಡೆಸಿದ್ದೆ. ಈ ವೇಳೆ ದೇವೇಂದರ್ ಪಾಲ್ ಸಿಂಗ್ ಭುಲ್ಲಾರ್ ಬಿಡುಗಡೆಗೊಳಿಸಿವ ವಾಗ್ದಾನ ನೀಡಿದ್ದರು ಎಂದು ಆರೋಪಿಸಿದ್ದಾನೆ.
ಆಪ್ ಖಲಿಸ್ತಾನಿ ಗುಂಪುಗಳಿಂದ ಹಣವನ್ನು ಪಡೆಯುತ್ತಿದೆ ಎಂದು ಪನ್ನುನ್ ಆರೋಪಿಸಿದ್ದು ಇದೇ ಮೊದಲಲ್ಲ. ಜನವರಿಯಲ್ಲಿ ದೆಹಲಿ ಮುಖ್ಯಮಂತ್ರಿ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಅಮೆರಿಕ ಮತ್ತು ಕೆನಡಾದಲ್ಲಿನ ಖಲಿಸ್ತಾನ್ ಬೆಂಬಲಿಗರಿಂದ 6 ಮಿಲಿಯನ್ ಡಾಲರ್ ಪಡೆದಿದ್ದಾರೆ ಎಂದು ಹೇಳಿದ್ದ. ಪನ್ನುನ್ ಭಾರತದಲ್ಲಿ ನಿಷೇಧಿಸಲ್ಪಟ್ಟಿರುವ ಅಮೆರಿಕ ಮೂಲದ ಸಿಖ್ ಫಾರಿ ಜಸ್ಟಿಸ್ನ (ಎಸ್ಎಫ್ಜೆ) ಮುಖ್ಯಸ್ಥನಾಗಿದ್ದಾನೆ. ಮಾತ್ರವಲ್ಲದೇ ಭಾರತೀಯ ತನಿಖಾ ಸಂಸ್ಥೆಗಳಿಗೆ ಬೇಕಾಗಿರುವ ಮೋಸ್ಟ್ ವಾಂಟೆಡ್ ವ್ಯಕ್ತಿಯಾಗಿದ್ದಾನೆ.