ನವದೆಹಲಿ: ಒಬ್ಬ ವ್ಯಕ್ತಿ ತನ್ನ ಕನಸಿನ ಕಂಪನಿಯನ್ನು ನಿರ್ಮಿಸಬೇಕಾದರೆ ಆ ವ್ಯವಹಾರ ನಿಮ್ಮ ಮನಸಿಗೆ ಹತ್ತಿರ ಇರಬೇಕು. ಪ್ಯಾಶನ್ ಬೇಕು. ಹಣ ಮಾಡುವ ಉದ್ದೇಶ ಮಾತ್ರವೇ ಇದ್ದರೆ ಕೆಟ್ಟ ಆಡಳಿತ ನಿರ್ಧಾರಗಳಿಗೆ ಎಡೆಯಾಗುತ್ತದೆ ಎಂದು ದೀಪಿಂದರ್ ಗೋಯಲ್ ಹೇಳಿದ್ದಾರೆ. ಸ್ಟಾರ್ಟಪ್ ಮಹಾಕುಂಬ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಗೋಯಲ್, ‘ಬಹಳಷ್ಟು ಜನರು ಕಂಪನಿಗಳನ್ನು ಸ್ಥಾಪಿಸುತ್ತಿರುವುದನ್ನು ನಾನು ಕಾಣುತ್ತಿದ್ದೇನೆ.
ಯಾಕೆ ಬಿಸಿನೆಸ್ ಆರಂಭಿಸಿದಿರಿ ಎಂದು ಅವರನ್ನು ಕೇಳಿದ್ದೇನೆ. ನಾನು ಬಹಳಷ್ಟು ಹಣ ಮಾಡಬೇಕು ಎಂಬ ಉತ್ತರ ಬರುತ್ತದೆ. ಹೀಗಾದರೆ ಪ್ರಯೋಜನಕ್ಕೆ ಬಾರುವುದಿಲ್ಲ. ಕೆಟ್ಟ ಆಡಳಿತ ನಿರ್ಧಾರಕ್ಕೆ ಎಡೆಯಾಗುತ್ತದೆ. ನೀವು ಒಂದು ಆರಂಭಿಸಲು ಅದು ಉದ್ದೇಶವಾಗಿರಬಾರದು. ‘ಒಂದು ಕೆಲಸದಲ್ಲಿ ನೀವು ಎಷ್ಟು ಉತ್ಕಟತೆ ಹೊಂದಿರಬೇಕೆಂದರೆ, ಅದರಲ್ಲಿ ನಿಮ್ಮ ಜೀವವನ್ನೇ ಪಣಕ್ಕಿಡಲು ಸಿದ್ದರಿರಬೇಕು.
ಆಗ ಮಾತ್ರವೇ ನಿಮ್ಮ ಕನಸಿನ ಸಂಸ್ಥೆಯನ್ನು ಕಟ್ಟಲು ಸಾಧ್ಯ. ಪ್ಯಾಶನ್ ಇಟ್ಟುಕೊಂಡು ಮಾಡಬೇಕೆ ಹೊರತು ಹಣಕ್ಕಾಗಿ ಮಾಡಬೇಡಿ ಎಂಬುದೊಂದು ಸಲಹೆ ನೀಡಲು ಬಯಸುತ್ತೇನೆ,’ ಎಂದಿದ್ದಾರೆ ಕೆಲವೇ ವರ್ಷಗಳಲ್ಲಿ ಯೂನಿಕಾರ್ನ್ ಆಗಿರುವ ಸ್ಟಾರ್ಟಪ್ಗಳೂ ಉಂಟು. ಹಾಗೆಯೇ ಆರಂಭಗೊಂಡ ಭರಾಟೆಯಲ್ಲೇ ಮುರುಟಿಹೋದ ಸ್ಟಾರ್ಟಪ್ಗಳೂ ಹಲವುಂಟು. ಸ್ವಂತ ಉದ್ದಿಮೆ ಸ್ಥಾಪಿಸಬೇಕೆಂದ ಆಸೆ ಎಲ್ಲರಿಗೂ ಇರುತ್ತದೆ.
ಆದರೆ, ಹಣ ಮಾಡುವ ಉದ್ದೇಶವೇ ನಿಮ್ಮನ್ನು ಹೊಸ ಕಂಪನಿ ಸ್ಥಾಪನೆಗೆ ಪ್ರೇರೇಪಿಸುತ್ತಿದೆ ಎಂದರೆ ಅದು ಸೋಲಿಗೆ ಸೋಪಾನ ಹಾಕಿದಂತೆ ಎಂಬುದು ತಜ್ಞರ ಅನಿಸಿಕೆ. ಜೊಮಾಟೊ ಸಿಇಒ ದೀಪಿಂದರ್ ಗೋಯಲ್ ಈ ಮಾತನ್ನು ಅನುಮೋದಿಸುತ್ತಾರೆ. ಒಬ್ಬ ವ್ಯಕ್ತಿ ತನ್ನ ಕನಸಿನ ಕಂಪನಿಯನ್ನು ನಿರ್ಮಿಸಬೇಕಾದರೆ ಆ ವ್ಯವಹಾರ ನಿಮ್ಮ ಮನಸಿಗೆ ಹತ್ತಿರ ಇರಬೇಕು. ಪ್ಯಾಶನ್ ಬೇಕು. ಹಣ ಮಾಡುವ ಉದ್ದೇಶ ಮಾತ್ರವೇ ಇದ್ದರೆ ಕೆಟ್ಟ ಆಡಳಿತ ನಿರ್ಧಾರಗಳಿಗೆ ಎಡೆಯಾಗುತ್ತದೆ ಎಂದು ದೀಪಿಂದರ್ ಗೋಯಲ್ ಹೇಳಿದ್ದಾರೆ.