ಬೆಂಗಳೂರು: ಥೈಲ್ಯಾಂಡ್ ನಲ್ಲಿ ಆಯೋಜಿಸಿದ 6ನೇ ಅಂತಾರಾಷ್ಟ್ರೀಯ ತೈ ಮಾರ್ಷಲ್ ಆರ್ಟ್ಸ್ ಗೇಮ್ಸ್ ನಲ್ಲಿ ಬೆಂಗಳೂರಿನ ಮಾರತ್ತಹಳ್ಳಿಯ ಬಡ ಕುಟುಂಬದ 7 ವರ್ಷದ ರಿಕ್ಷಿಕ್ ಶಿವ ಎಂಬ ಬಾಲಕ ಕಿಕ್ ಬಾಕ್ಸಿಂಗ್ ಕ್ಷೇತ್ರದಲ್ಲಿ ಮೈಲಿಗಲ್ಲು ಸಾಧಿಸಿ ಭಾರತಕ್ಕೆ ಕೀರ್ತಿ ತಂದಿದ್ದಾರೆ.
ಮಾರತ್ತಹಳ್ಳಿಯ ಇನ್ಸ್ಟಿಟ್ಯೂಟ್ ಆಫ್ ಏಟ್ ಲಿಮ್ಸ್ ಫಿಟ್ನೆಸ್ ಸೆಂಟರ್ ಸಂಸ್ಥೆಯ ಸೇರಿದಂತೆ ಒಟ್ಟು ಮೂರು ಕ್ರೀಡಾ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು.
7 ವರ್ಷದ ಬಾಲಕ ಸುಮಾರು 4 ವರ್ಷದಿಂದ ಸತತ ಪ್ರಯತ್ನ ಹಾಗೂ ತರಬೇತಿ ಪಡೆದು, ಅಂತರಾಷ್ಟ್ರೀಯ ಮಟ್ಟದಲ್ಲಿ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಕಂಚಿನ ಪದಕ ಗೆದ್ದು ಭಾರತ ದೇಶಕ್ಕೆ ಹಾಗೂ ಕನ್ನಡ ನಾಡಿಗೆ ಕೀರ್ತಿ ತಂದಿದ್ದಾನೆ.
ಈ ಸ್ಪರ್ಧೆಯಲ್ಲಿ ಸುಮಾರು 52 ದೇಶಗಳು ಪ್ರತಿನಿಧಿಸಿದ್ದು ಇದೆ ಮೊದಲ ಬಾರಿಗೆ ಅತೀ ಸಣ್ಣ ವಯಸ್ಸಿನ ರಿಕ್ಷಕ್ ಶಿವ ಮೊದಲ ಬಾರಿಗೆ ಸ್ಪರ್ಧೆಯಲ್ಲಿ ಭಾಗಿಯಾಗಿ, ಕಂಚಿನ ಪದಕವನ್ನು ಗೆದ್ದಿರುವುದು ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ.
ಬಡಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಿ ಅವರ ಪ್ರತಿಭೆ ಅನಾವರಣ ಮಾಡಲು ನಮ್ಮ ಸಂಸ್ಥೆ ವೇದಿಕೆ ಕಲ್ಪಿಸಿದೆ ಇದಕ್ಕೆ ಸ್ಥಳೀಯ ಮುಖಂಡರ ಸಹಕಾರದಿಂದ ಮಾಡಲು ಸಾಧ್ಯವಾಗಿದೆ ಎಂದು ಇನ್ಸ್ಟಿಟ್ಯೂಟ್ ಆಫ್ ಏಡ್ ಲಿಂಕ್ಸ್ ಫಿಟ್ನೆಸ್ ಸೆಂಟರ್ ಮುಖ್ಯಸ್ಥ ಪುನೀತ್ ರೆಡ್ಡಿ ತಿಳಿಸಿದರು.