ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮೈನಾ ಮೂವಿ ಕತೆಯಂತೆ ಬೆಳಕಿಗೆ ಒಂದು ಪ್ರಕರಣ ಬಂದಿದೆ. ಆದರೆ ಇಲ್ಲಿ ಹೀರೋ ಹಣ ಪಡೆದು ವಿಲನ್ ಆಗಿರುವ ಕಥೆಯನ್ನು ನಾವಿಲ್ಲಿ ನೋಡಬಹಹುದು
ವಿಶೇಷ ಚೇತನಳನ್ನ ಮದುವೆ ಆಗುವುದಾಗಿ ಹಣ ಪಡೆದು ವಂಚಿಸಿದ ಘಟನೆಯೊಂದು ನಗರದಲ್ಲಿ ಬೆಳಕಿಗೆ ಬಂದಿದೆ. ಸುರೇಂದ್ರ ಮೂರ್ತಿ ಎಂಬಾತ ವಂಚನೆ ಮಾಡಿದ ವ್ಯಕ್ತಿ.
ಮೊದಲು ಪರಿಚಯವಾಗಿ ಪರಿಚಯ ಪ್ರೀತಿಗೆ ತಿರುಗಿತ್ತು ಇದಾದ ಬಳಿಕ ಬ್ಯುಸಿನೆಸ್ ಮಾಡಲು ಹಣ ಬೇಕೆಂದು ಕೇಳಿದ್ದ ಸುರೇಂದ್ರ ಮೂರ್ತಿ ಸಾಲಮಾಡಿ, ತನ್ನ ಬಳಿಯಿದ್ದ ಚಿನ್ನ ಅಡವಿಟ್ಟು ಹಣ ನೀಡಿದ್ದ ವಿಶೇಷ ಚೇತನ ಯುವತಿ ಆದರೆ ಹಣವೆಲ್ಲ ಪಡೆದ ಬಳಿಕ ಮದುವೆಯಾಗದೆ ವಂಚನೆ
ಈ ವೇಳೆ ಲೈಂಗಿಕವಾಗಿಯೂ ಬಳಸಿಕೊಂಡಿರುವ ಆರೋಪ ಹೀಗಾಗಿ ಸದ್ಯ ವಿಶೇಷ ಚೇತನ ಯುವತಿ ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಎಫ್ ಐ ಆರ್ ದಾಖಲಾಗಿದೆ.