ಬೆಂಗಳೂರು: ಪ್ರಧಾನಿ ಮೋದಿ ಗ್ಯಾರಂಟಿ ಟಿವಿಯಲ್ಲಿದೆ, ನಮ್ಮ ಗ್ಯಾರಂಟಿ ‘ಕೈ’ಯಲ್ಲಿದೆ. ಮೋದಿ ಸುನಾಮಿ ದಕ್ಷಿಣದಲ್ಲಿ ಎಲ್ಲಿಯೂ ಇಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕುಟುಕಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಕರ್ನಾಟಕಕ್ಕೆ ಬಂದಾಗೆಲ್ಲಾ ಶ್ಯಾಡೋ ಸಿಎಂ ಅಂತ ಹೇಳ್ತಿರಲ್ಲ.. ನಮ್ಮಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅಂತ ಸ್ಪಷ್ಟವಾಗಿದೆ ಎಂದು ತಿರುಗೇಟು ನೀಡಿದರು.
ವಿಜಯೇಂದ್ರ ನಾಯಕತ್ವವನ್ನು ಅವರ ಪಕ್ಷದವರೇ ಒಪ್ಪಿಕೊಳ್ಳತ್ತಿಲ್ಲ. ಕಾಂಗ್ರೆಸ್ಗಿಂತ ಹೆಚ್ಚಿನ ಕುಟುಂಬ ರಾಜಕಾರಣ ಬಿಜೆಪಿಯಲ್ಲಿದೆ. ಡಿಎನ್ಎ ಟೆಸ್ಟ್ ಮಾಡಿಸೋಣ, ಯಾರ್ಯಾರು ಯಾರ ಕುಟಂಬದವರು ಅಂತ ಗೊತ್ತಾಗುತ್ತೆ. ವಿತ್ ಡಿಎನ್ಎ ಕಿಟ್ ಇಟ್ಟು ಚರ್ಚೆ ಮಾಡೋಣ ಬನ್ನಿ ಎಂದು ಸವಾಲ್ ಹಾಕಿದರು.