ಬೆಂಗಳೂರು:- ಏಪ್ರಿಲ್ 1 ರಿಂದ ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್ ದರ ಹೆಚ್ಚಳವಾಗಲಿದೆ.
ಸಗಟು ಬೆಲೆ ಸೂಚ್ಯಂಕ ಪ್ರಕಾರ ಟೋಲ್ ಶುಲ್ಕ ಶೇಕಡಾ 3 ರಿಂದ 14 ರಷ್ಟು ಹೆಚ್ಚಾಗಿದೆ. ಈ ಶುಲ್ಕ 2025ರ ಮಾರ್ಚ್ 31ರವರೆಗೆ ಜಾರಿಯಲ್ಲಿರುತ್ತದೆ. ಆದರೆ ಬೆಂಗಳೂರು-ಮೈಸೂರು ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿ 7 (ಬೆಂಗಳೂರು-ಹೈದರಾಬಾದ್) ಟೋಲ್ ಶುಲ್ಕಗಳು 3% ಹೆಚ್ಚಿಸಲಾಗಿದೆ, STRR ಬಳಸುವ ವಾಹನಗಳು 14% ಹೆಚ್ಚು ಪಾವತಿಸಬೇಕಾಗುತ್ತದೆ.
2023ರ ನವೆಂಬರ್ 17 ರಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನ 39.6-ಕಿಮೀ ದೊಡ್ಡಬಳ್ಳಾಪುರ-ಹೊಸಕೋಟೆ ವಿಭಾಗಕ್ಕೆ ಟೋಲ್ ಸಂಗ್ರಹಿಸಲು ಪ್ರಾರಂಭಿಸಿದ ಕೇವಲ ಆರು ತಿಂಗಳ ಒಳಗೆಯೇ ಶುಲ್ಕ ಹೆಚ್ಚಳವಾಗಿದೆ. ಈ ಬಗ್ಗೆ ಯ ಬೆಂಗಳೂರು ಪ್ರಾದೇಶಿಕ ಅಧಿಕಾರಿ ವಿಲಾಸ್ ಪಿ ಬ್ರಹ್ಮಂಕರ್ ಪ್ರತಿಕ್ರಿಯೆ ನೀಡಿದ್ದು, ಟೋಲ್ ಪರಿಷ್ಕರಣೆಯು “ವಾರ್ಷಿಕ, ರಾಷ್ಟ್ರವ್ಯಾಪಿ” ವ್ಯಾಯಾಮವಾಗಿದೆ ಎಂದು ತಿಳಿಸಿದ್ದಾರೆ.
ಎಸ್ಟಿಆರ್ಆರ್ನ ದಾಬಾಸ್ ಪೇಟೆ-ದೊಡ್ಡಬಳ್ಳಾಪುರ ವಿಭಾಗದಲ್ಲಿ (42 ಕಿಮೀ) ಟೋಲ್ ಶುಲ್ಕವನ್ನು ಏಪ್ರಿಲ್ನಲ್ಲಿ ಪರಿಚಯಿಸಲಾಗುವುದು ಎಂದು ಅವರು ಹೇಳಿದರು.
ಹೆದ್ದಾರಿಯ 55.63-ಕಿಮೀ ಬೆಂಗಳೂರು-ನಿಡಘಟ್ಟ ವಿಭಾಗವನ್ನು ಬಳಸುವ ಕಾರುಗಳು/ವ್ಯಾನ್ಗಳು/ಜೀಪ್ಗಳು ಏಕಮುಖ ಪ್ರಯಾಣಕ್ಕೆ ರೂ 170 ಮತ್ತು 24 ಗಂಟೆಗಳ ಒಳಗೆ ಹಿಂದಿರುಗಲು ರೂ 255 ಪಾವತಿಸಬೇಕಾಗುತ್ತದೆ. ಪ್ರಸ್ತುತ ದರಗಳು ಕ್ರಮವಾಗಿ 165 ಮತ್ತು 250 ರೂ. ಇದೆ.
ಲಘು ವಾಣಿಜ್ಯ ವಾಹನಗಳು, ಲಘು ಸರಕು ವಾಹನಗಳು ಮತ್ತು ಮಿನಿ ಬಸ್ಗಳು ಕ್ರಮವಾಗಿ ರೂ 270 ಮತ್ತು ರೂ 405 ಇದೆ. ಏಪ್ರಿಲ್.01ರಿಂದ ಏಕಮುಖ ಪ್ರಯಾಣಕ್ಕೆ ರೂ 275 ಮತ್ತು ದ್ವಿಮುಖ ಪ್ರಯಾಣಕ್ಕೆ ರೂ 415 ಪಾವತಿಸಬೇಕಾಗುತ್ತೆ.
ಟ್ರಕ್ಗಳು ಮತ್ತು ಬಸ್ಗಳು (ಎರಡು ಆಕ್ಸಲ್ಗಳು) ಏಕಮುಖ ಪ್ರಯಾಣಕ್ಕೆ ರೂ 580 ಮತ್ತು ದ್ವಿಮುಖ ಪ್ರಯಾಣಕ್ಕೆ ರೂ 870 ಪಾವತಿಸಬೇಕಾಗುತ್ತೆ. ಟೋಲ್ ಪ್ಲಾಜಾದಿಂದ 20 ಕಿಮೀ ವ್ಯಾಪ್ತಿಯಲ್ಲಿರುವ ವಾಣಿಜ್ಯೇತರ ವಾಹನಗಳಿಗೆ ಮಾಸಿಕ ಪಾಸ್ 340 ರೂ.ನಿಂದ 330 ರೂ. ಕಣಿಮಿಣಿಕೆ ಮತ್ತು ಶೇಷಗಿರಿಹಳ್ಳಿ ಟೋಲ್ ಪ್ಲಾಜಾಗಳಲ್ಲಿ ಟೋಲ್ ಸಂಗ್ರಹಿಸಲಾಗುವುದು.