ಆತ ಪ್ರೀತಿಸಿದವಳು ದೂರ ಮಾಡಿದ್ಲು ಅಂತ ನಡುರಸ್ತೆಯಲ್ಲೇ ಪ್ರೇಯಸಿಯ ರಕ್ತ ಹರಿಸಿದ್ದ. ಬರೋಬ್ಬರಿ 16 ಬಾರಿ ಭೀಕರವಾಗಿ ಚಾಕುವಿನಿಂದ ಇರಿದು ಕೊಲೆಗೈದಿದ್ದ. ಪ್ರೀತಿ ಪ್ರೇಮ ಅಂತ ಸುತ್ತಿದ್ದ ಜೋಡಿಗೆ ಜಾತಿ ಅಡ್ಡ ಬಂದಿತ್ತು. ಸಹಿಸದ ಪಾಗಲ್ ಪ್ರೇಮಿ ತನ್ನ ಹುಡುಗಿಯ ಕತ್ತು ಸೀಳಿದ್ದ.. ತಾನೇ ಕೊಲೆಗೈದ ಪ್ರೇಯಸಿಯ ಶವದ ಮುಂದೆ ಬಿಕ್ಕಿ ಬಿಕ್ಕಿ ಅಳ್ತಿರೋ ಈ ಪಾಗಲ್ ಪ್ರೇಮಿಯ ಹೆಸರು ದಿನಕರ ಬನಾಲಾ.
ಆಂದ್ರಪ್ರದೇಶದ ಶ್ರೀಕಾಕುಲಂ ನ ನಿವಾಸಿಯಾಗಿರೋ ದಿನಕರ ಇದೇ ಲೀಲಾ ಪವಿತ್ರ ಎಂಬಾಕೆಯನ್ನ ಕಳೆದ ಐದು ವರ್ಷದಿಂದ ಪ್ರೀತಿಸ್ತಿದ್ದ. ನಿನ್ನೆ ಬೆಂಗಳೂರಿನ ಮುರುಗೇಶ್ ಪಾಳ್ಯದಲ್ಲಿ ಪ್ರೇಯಸಿ ಲೀಲಾಳನ್ನ 16 ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಲೆಗೈದಿದ್ದ. ತನ್ನ ಜೀವದ ಜೀವ ಲೀಲಾಳನ್ನ ಕೊಂದ್ನಲ್ಲಾ ಅನ್ನೋ ಫೀಲಿಂಗ್ ನಲ್ಲೇ ಪ್ರೇಯಸಿಯ ಶವದ ಮುಂದೆಯೇ ಬಿಕ್ಕಿಬಿಕ್ಕಿ ಅಳ್ತಾ ಕೂತಿದ್ದ. ಸ್ಥಳಕ್ಕೆ ಬಂದ ಜೀವನ್ ಭೀಮಾನಗರ ಪೊಲೀಸ್ರು ಪ್ರೀತಿಯ ಕೊಲೆಗಾರನನ್ನು ಬಂಧಿಸಿ ವಿಚಾರಣೆ ಶುರುಹಚ್ಚಿಕೊಂಡಿದ್ರು.
ಆರೋಪಿ ದಿನಕರ ಹಾಗೂ ಲೀಲಾ ಆಂದ್ರಪ್ರದೇಶ ಮೂಲದವರು ವೈಜಾಕ್ ನ ಬುಲ್ಲಯ್ಯ ಕಾಲೇಜಿನಲ್ಲಿ ಎಂಎಸ್ಸಿ ಮಾಡೋ ಟೈಮಲ್ಲೇ ಲವ್ ಆಗಿತ್ತು. ಅದಾದ ಬಳಿಕ ಲೀಲಾಳ ಮನೆಯವರ ಬಳಿ ಮದುವೆಮಾಡಿಸಿ ಕೊಡಿ ಅಂತ ದುಂಬಾಲುಬಿದ್ದಿದ್ದನಂತೆ ದಿನಕರ. ಆದ್ರೆ, ಇಬ್ಬರ ಜಾತಿಯೂ ಬೇರೆಬೇರೆಯಾಗಿದ್ದರಿಂದ ಮದುವೆಗೆ ನಕಾರ ವ್ಯಕ್ತಪಡಿಸಿದ್ದರು. ಇದರಿಂದ ದಿನಕರ ಮಾನಸಿಕವಾಗಿ ಕುಂದಿಹೋಗಿದ್ದ. ಕಳೆದ 10 ತಿಂಗಳ ಹಿಂದೆ ಲೀಲಾ ಮುರುಗೇಶ್ ಪಾಳ್ಯದ ಇದೇ ಒಮೆಗಾ ಹೆಲ್ತ್ ಕೇರ್ ನಲ್ಲಿ ಡಾಟಾ ಅನಲಿಸ್ಟ್ ಆಗಿ ಕೆಲಸ ಮಾಡಿಕೊಂಡು ದಿನಕರನನ್ನ ಕಂಪ್ಲೀಟ್ ಆಗಿ ಮರೆತೇ ಬಿಟ್ಟಿದ್ದಳು.
ದಿನಕರ ಲೀಲಾಳ ನೆನಪಲ್ಲೇ ಕಳೆದ 10 ದಿನಗಳ ಹಿಂದೆ ಬೆಂಗಳೂರಿಗೆ ಬಂದು ಲಾಜಿಸ್ ಹೆಲ್ತ್ ಕೇರ್ ಎಂಬ ಕಂಪೆನಿಗೆ ಕೆಲಸಕ್ಕೆ ಸೇರಿದ್ದ. ಲೀಲಾಳ ನೆನಪಾಗಿ ಫೆಬ್ರವರಿ 27 ರಂದು ಫೋನಾಯಿಸಿ ಮಾತನಾಡಿದ್ದ ದಿನಕರನನ್ನ ಬೈದು ಬ್ಲಾಕ್ ಲೀಸ್ಟ್ ಗೆ ಹಾಕಿದ್ದಳು ಲೀಲಾ. ಇದ್ರಿಂದ ಕೋಪಗೊಂಡ ದಿನಕರ್ ಸೀದ ಚಾಕು ಹಿಡಿದು ಬಂದು ಇರಿದು ಕೊಂದೆಬಿಟ್ಟ. ಸದ್ಯ ಆರೋಪಿಯನ್ನ ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಮುದ್ದೆ ಮುರಿಯಲು ಕಳ್ಸಿದ್ದಾರೆ. ಇತ್ತಾ ಬದುಕಿ ಬಾಳಬೇಕಿದ್ದ ಯುವತಿ ಬಾರದ ಲೊಕಕ್ಕೆ ಪಯಣ ಬೆಳಸಿದ್ದಾಳೆ.