ಬೆಂಗಳೂರು: ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿಕೆ ಸುರೇಶ್ ಇಂದು ನಾಮಪತ್ರ ಸಲ್ಲಿಸಿದ್ದಾರೆ.ಈ ವೇಳೆ ಅವರು ನಮ್ಮ ಬಳಿ ಇರುವ ಆಸ್ತಿ ಚರಾಸ್ತಿ ಎಷ್ಟು ಎಂದು ಅವರು ಹೇಳಿಕೊಂಡಿದ್ದಾರೆ.
ಹೌದು, ಬರೋಬ್ಬರಿ 593.04 ಕೋಟಿ ರೂ. ನನ್ನ ಬಳಿ ಇದೆ ಎಂದು ಡಿ.ಕೆ ಸುರೇಶ್ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ.
106.71 ಕೋಟಿ ರೂಪಾಯಿ ಚರಾಸ್ತಿ, 486.33 ಕೋಟಿ ರೂಪಾಯಿ ಸ್ಥಿರಾಸ್ತಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಹಾಲಿ ಸಂಸದ ಡಿ.ಕೆ ಸುರೇಶ್ ಅವರು ತಮ್ಮ ಆಸ್ತಿ ವಿವರ ಘೋಷಿಸಿಕೊಂಡಿದ್ದಾರೆ. ಇಂದು ಕನಕಪುರದಲ್ಲಿ ಚುನಾವಣೆಗೆ ತಮ್ಮ ನಾಮಪತ್ರ ಸಲ್ಲಿಸಿದ ಡಿ.ಕೆ ಸುರೇಶ್ ಅವರು ತಮ್ಮ ಆಸ್ತಿ ವಿವರವನ್ನು ಬಹಿರಂಗಪಡಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ಅವರು ಬರೋಬ್ಬರಿ 593.04 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. 106.71 ಕೋಟಿ ರೂಪಾಯಿ ಚರಾಸ್ತಿ, 486.33 ಕೋಟಿ ರೂಪಾಯಿ ಸ್ಥಿರಾಸ್ತಿಯಲ್ಲಿ ಸಂಸದರು ಹೊಂದಿದ್ದಾರೆ.
ಅಣ್ಣನಿಗೆ ಡಿ.ಕೆ ಸುರೇಶ್ ಸಾಲ!
ಸಂಸದ ಡಿ.ಕೆ ಸುರೇಶ್ ಅವರ ಬಳಿ 21 ಕೃಷಿ ಭೂಮಿ, 27 ಕೃಷಿಯೇತರ ಭೂಮಿ ಇದೆ. ಕೃಷಿಕ, ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ಸಂಸದರು ಅಫಿಡವಿಟ್ನಲ್ಲಿ ಹೇಳಲಾಗಿದೆ. ಅಣ್ಣ ಡಿ.ಕೆ ಶಿವಕುಮಾರ್ಗೆ ಡಿ.ಕೆ ಸುರೇಶ್ ಅವರು 30.08 ಕೋಟಿ ರೂ. ಸಾಲ, ಡಿಕೆಶಿ ಪುತ್ರಿ ಐಶ್ವರ್ಯಾಗೆ 7.94 ಕೋಟಿ ರೂಪಾಯಿ, ಡಿಕೆಶಿ ಪುತ್ರ ಆಕಾಶ್ಗೆ 1.06 ಕೋಟಿ ರೂ., ತಾಯಿ ಗೌರಮ್ಮಗೆ 4.75 ಕೋಟಿ ರೂ., ಕುಣಿಗಲ್ ಶಾಸಕ ರಂಗನಾಥ್ ಪತ್ನಿ ಡಾ. ಸುಮಾ ರಂಗನಾಥ್ಗೆ 30 ಲಕ್ಷ ರೂ. ಸಾಲ ಕೊಟ್ಟಿದ್ದಾರೆ ಎನ್ನಲಾಗಿದೆ.
ಸಂಸದ ಡಿ.ಕೆ ಸುರೇಶ್ ಕೈಯಲ್ಲಿ 4.77 ಲಕ್ಷ ರೂ. ಹಣವಿದ್ದರೆ, ಒಟ್ಟು 106.71 ಕೋಟಿ ರೂ. ಚರಾಸ್ತಿ ಹೊಂದಿದ್ದಾರೆ. ಬ್ಯಾಂಕ್ ಖಾತೆಯಲ್ಲಿ 16.61 ಕೋಟಿ ರೂಪಾಯಿ ಹಾಗೂ ವಿವಿಧ ಹೂಡಿಕೆಗಳಲ್ಲಿ 2.14 ಕೋಟಿ ರೂಪಾಯಿ ಎನ್ನಲಾಗಿದೆ.
ಡಿ.ಕೆ ಸುರೇಶ್ ಸಂಪತ್ತಿನ ವಿವರ
ಸದ್ಯ ಏಕಾಂಗಿಯಾಗಿರುವ ಡಿಕೆ ಸುರೇಶ್ ಬಳಿ ಯಾವುದೇ ವಾಹನಗಳಿಲ್ಲ ತಮ್ಮ ಮೇಲೆ ಮೂರು ಕ್ರಿಮಿನಲ್ ಪ್ರಕರಣಗಳಿದ್ದು, ದ್ವಿತೀಯ ಪಿಯುಸಿ ವ್ಯಾಸಂಗ
23.45 ಲಕ್ಷ ರೂಪಾಯಿ ಮೌಲ್ಯದ 4.8 ಕೆಜಿ ಬೆಳ್ಳಿ, 1.26 ಕೆಜಿ ಚಿನ್ನ 73.58 ಲಕ್ಷ ರೂ. ಮೊತ್ತದ ಪೀಠೋಪಕರಣಗಳಿವೆ
9.96 ಕೋಟಿ ರೂ. ಆಸ್ತಿ ಪಿತ್ರಾರ್ಜಿತ, 276.37 ಕೋಟಿ ರೂ.ನನ್ನ ಗಳಿಕೆ ಖರೀದಿಸಿದ ಆಸ್ತಿಯ ಖರೀದಿ ಬೆಲೆ 56.06 ಕೋಟಿ ರೂ. ಸದ್ಯದ ಮಾರುಕಟ್ಟೆ ಮೌಲ್ಯ 276.37 ಕೋಟಿ ರೂ. ಕೃಷಿ ಭೂಮಿಯ ಈಗಿನ ಮೌಲ್ಯ 32.75 ಕೋಟಿ ರೂ. ಕೃಷಿಯೇತರ ಭೂಮಿ ಮೌಲ್ಯ 210.47 ಕೋಟಿ ರೂ. 9 ವಾಣಿಜ್ಯ ಸಂಕೀರ್ಣ ಮೌಲ್ಯ 211.91 ಕೋಟಿ ರೂ. ಆಗಿದ್ದು, ಮೈಸೂರು ರಸ್ತೆಯಲ್ಲಿರುವ ಗ್ಲೋಬಲ್ ಮಾಲ್ ಇದರಲ್ಲಿ ಸೇರಿದೆ.
ಸದಾಶಿವನಗರದಲ್ಲಿ 25.82 ಕೋಟಿ ರೂ. ಮೌಲ್ಯದ ಮನೆ ಸೇರಿ ಒಟ್ಟು ಮೂರು ಮನೆಗಳಿವೆ. ಇದರ ಒಟ್ಟು ಮೌಲ್ಯ 27.13 ಕೋಟಿ ರೂ.
150.06 ಕೋಟಿ ರೂ. ಸಾಲ ಇರುವುದಾಗಿಯೂ ಡಿಕೆ ಸುರೇಶ್ ಹೇಳಿಕೊಂಡಿದ್ದಾರೆ. 57.27 ಕೋಟಿ ರೂ. ಮೊತ್ತದ ಸಾಲಕ್ಕೆ ಸಂಬಂಧಿಸಿದಂತೆ ವಿವಾದವೂ ಜಾರಿಯಲ್ಲಿದೆ ಬ್ಯಾಂಕ್ನಿಂದ ಅವರು 20.04 ಕೋಟಿ ರೂ. ಸಾಲ ಪಡೆದಿರುವ ಡಿಕೆ ಸುರೇಶ್
ಶೋಭಾ ಡೆವಲಪರ್ಸ್ಗೆ 99.19 ಕೋಟಿ ರೂ. ಸಿಎಂಆರ್ ಟ್ರಸ್ಟ್ಗೆ 15 ಕೋಟಿ ರೂ. ಲುಲು ಮಾಲ್ಗೆ 3 ಕೋಟಿ ರೂ.ಗಳನ್ನು ನೀಡಬೇಕಿದೆ
.