ಬೆಂಗಳೂರು/ ದೆಹಲಿ: ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಎರಡನೇ ಅವಧಿಗೆ ಸರ್ಕಾರ ರಚನೆ ತಯಾರಿಯಲ್ಲಿದೆ. ಲೋಕಸಭಾ ಚುನಾವಣೆಯಲ್ಲಿ ಗ್ರಾಮೀಣ ಭಾಗದ ಜನರು ಹೆಚ್ಚಿನ ಪ್ರಮಾಣದಲ್ಲಿ ಮೋದಿಯವರಿಗೆ ಮತ ಹಾಕಿರುವುದರಿಂದ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಈ ಯೋಜನೆಯನ್ನು ಭಾರತ ಸರ್ಕಾರವು 2016 ರಲ್ಲಿ ಪ್ರಾರಂಭಿಸಿತು.
ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ ಗ್ಯಾಸ್ ಕನೆಕ್ಷನ್ ನೀಡಲಾಗುತ್ತಿದೆ. ಎಲ್ಪಿಜಿ ಗ್ಯಾಸ್ ಸಂಪರ್ಕವನ್ನು ಕುಟುಂಬದ ಮಹಿಳೆಯರ ಹೆಸರಿನಲ್ಲಿಯೇ ನೀಡಲಾಗುತ್ತಿದೆ. 5 ಕೆ.ಜಿ. ತೂಕದ ಎಲ್ಪಿಜಿ ಸಿಲಿಂಡರ್ ಉಚಿತವಾಗಿ ಸಿಕ್ಕರೆ ಬಡ ಮಹಿಳೆಯರಿಗೆ ಮತ್ತಷ್ಟು ಸಹಾಯವಾಗಲಿದೆ.
ಉಜ್ವಲ ಯೋಜನೆ 2.0 ಎಂದರೇನು? ಉಜ್ವಲ ಯೋಜನೆ 2.0 ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರವು ಸುಮಾರು ಒಂದು ಕೋಟಿಗೂ ಅಧಿಕ ಕುಟುಂಬಕ್ಕೆ ಎಲ್ಪಿಜಿ ಸಂಪರ್ಕ ಕಲ್ಪಿಸುವ ಗುರಿಯನ್ನು ಹೊಂದಿದೆ. ಹಾಗೆಯೇ ಉಚಿತ ಎಲ್ಪಿಜಿ ಸಿಲಿಂಡರ್ ಹಾಗೂ ಸ್ಟವ್ ನೀಡುವುದು ಕೂಡ ಈ ಯೋಜನೆಯ ಭಾಗವಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಒಂದು ಕೋಟಿ ಫಲಾನುಭವಿಗಳಿಗೆ ಎಲ್ಪಿಜಿ ವ್ಯವಸ್ಥೆ ಕಲ್ಪಿಸುವ ಗುರಿಯನ್ನು ಸರ್ಕಾರ ಹೊಂದಿದ್ದವು. ಈ ಯೋಜನೆಯ ಮೂಲಕ ಈಗಾಗಲೇ ಸುಮಾರು ಎಂಟು ಕೋಟಿಗೂ ಅಧಿಕ ಮಂದಿಗೆ ಉಚಿತ ಎಲ್ಪಿಜಿ ಸಂಪರ್ಕ ಲಭ್ಯವಾಗಿದೆ.
ಇನ್ನು ಅರ್ಜಿ ಸಲ್ಲಿಕೆ ಮಾಡುವವರು ಮಹಿಳೆಯರು ಆಗಿರಬೇಕು ಹಾಗೂ ಅವರ ವಯಸ್ಸು ಹದಿನೆಂಟು ವರ್ಷ ಮೇಲ್ಪಟ್ಟಿರಬೇಕು. ಅವರ ಕುಟುಂಬ ಸದಸ್ಯರ ಹೆಸರಿನಲ್ಲಿ ಬೇರೆ ಎಲ್ಪಿಜಿ ಬುಕ್ಕಿಂಗ್ ಇರಬಾರದು. ಹಾಗೆಯೇ ಬಿಪಿಎಲ್ ಕಾರ್ಡ್ ಹೊಂದಿರಬೇಕು. ನಾವು ಸ್ಥಳೋಯ ಎಲ್ಪಿಜಿ ವಿತರಣಾ ಸಂಸ್ಥೆಗಳಿಗೆ ಭೇಟಿ ನಡುವ ಮೂಲಕ ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು. ಇನ್ನು ಆನ್ಲೈನ್ನಲ್ಲಿಯಾದರೆ ಅರ್ಜಿ ಸಲ್ಲಿಕೆದಾರರು ಗೆ ಭೇಟಿ ನೀಡಬಹುದು. ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಬಹುದು. ಆ ಬಳಿಕ ಆ ಅರ್ಜಿಯನ್ನು ಸಮೀಪದ ಎಲ್ಪಿಜಿ ಸೆಂಟರ್ನಲ್ಲಿ ನೀಡಬೇಕಾಗುತ್ತದೆ.
ಮೊದಲನೆಯದಾಗಿ, ಬಿಪಿಎಲ್ ಕುಟುಂಬಗಳಿಗೆ ಸೇರಿದ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದು. ಇದರಲ್ಲಿ ಆಧಾರ್ ಕಾರ್ಡ್, ಪಡಿತರ ಚೀಟಿ, ಬಿಪಿಎಲ್ ಕಾರ್ಡ್, ಬಿಪಿಎಲ್ ಪಟ್ಟಿಯಲ್ಲಿ ಹೆಸರು ಮುದ್ರಣ, ಪಾಸ್ಪೋರ್ಟ್ ಗಾತ್ರದ ಫೋಟೋ, ಬ್ಯಾಂಕ್ ಫೋಟೋಕಾಪಿ, ವಯಸ್ಸಿನ ಪ್ರಮಾಣಪತ್ರ, ಮೊಬೈಲ್ ಸಂಖ್ಯೆ ಮುಂತಾದ ದಾಖಲೆಗಳು ಬೇಕಾಗುತ್ತವೆ. ಅದೇ ಸಮಯದಲ್ಲಿ, ಈ ಯೋಜನೆಯ ಲಾಭವನ್ನು ಪಡೆಯಲು ಬ್ಯಾಂಕ್ ಖಾತೆಯೂ ಇರಬೇಕು. ಇದರೊಂದಿಗೆ, ಬ್ಯಾಂಕ್ ಖಾತೆಯನ್ನು ಆಧಾರ್ಗೆ ಲಿಂಕ್ ಮಾಡಬೇಕು. ಈ ಯೋಜನೆಗೆ ಸೇರಲು ನೀವು ಸುಲಭವಾಗಿ ಅರ್ಜಿ ಸಲ್ಲಿಸಬಹುದು.