ಭಾರತೀಯ ರಿಸರ್ವ್ ಬ್ಯಾಂಕ್ ಸಾರ್ವಜನಿಕರಿಗೆ ಮುಖ್ಯಮಾಹಿತಿಯೊಂದನ್ನು ನೀಡಿದೆ. ಹೌದು ಕೇಂದ್ರೀಯ ಬ್ಯಾಂಕಿನ 19 ಶಾಖೆಗಳಲ್ಲಿ ಏಪ್ರಿಲ್ 1ರಂದು 2000ರೂ. ಮುಖಬೆಲೆಯ ನೋಟುಗಳ ವಿನಿಮಯ ಅಥವಾ ಠೇವಣಿ ಸೌಲಭ್ಯ ಲಭ್ಯವಿರೋದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ತಿಳಿಸಿದೆ. ಖಾತೆಗಳ ವಾರ್ಷಿಕ ಕ್ಲೋಸಿಂಗ್ ಹಿನ್ನೆಲೆಯಲ್ಲಿ ಈ ಸೌಲಭ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಆರ್ ಬಿಐ ತಿಳಿಸಿದೆ.

ಅಲ್ಲದೆ, ಏಪ್ರಿಲ್ 2ರಿಂದ ಈ ಸೌಲಭ್ಯ ಮತ್ತೆ ಪ್ರಾರಂಭವಾಗಲಿದೆ ಎಂದು ಅದು ತಿಳಿಸಿದೆ. ಬ್ಯಾಂಕುಗಳಲ್ಲಿ 2000ರೂ. ಮುಖಬೆಲೆಯ ನೋಟುಗಳ ವಿನಿಮಯ ಅಥವಾ ಠೇವಣಿಗೆ ಆರ್ ಬಿಐ 2023ರ ಅಕ್ಟೋಬರ್ 7ರ ತನಕ ಅವಕಾಶ ಕಲ್ಪಿಸಿತ್ತು. ಆ ಬಳಿಕ ಬ್ಯಾಂಕುಗಳಲ್ಲಿ ಈ ಸೌಲಭ್ಯ ಸ್ಥಗಿತಗೊಳಿಸಿತ್ತು. ವ್ಯಕ್ತಿಗಳು ಅಥವಾ ಸಂಸ್ಥೆಗಳಿಗೆ ಆರ್ ಬಿಐ 19 ವಿತರಣಾ ಕಚೇರಿಗಳಲ್ಲಿ ಮಾತ್ರ 2000ರೂ. ಮುಖಬೆಲೆಯ ನೋಟುಗಳ ವಿನಿಮಯ ಅಥವಾ ಠೇವಣಿಗೆ ಅವಕಾಶ ಕಲ್ಪಿಸಿತ್ತು.
2000ರೂ. ಎಷ್ಟು ನೋಟುಗಳು ಹಿಂತಿರುಗಿವೆ?
2024ರ ಮಾ.1ಕ್ಕೆ ಅನ್ವಯಿಸುವಂತೆ ಚಲಾವಣೆಯಲ್ಲಿದ್ದ ಶೇ.97.62ರಷ್ಟು 2000ರೂ. ಮುಖಬೆಲೆಯ ನೋಟುಗಳು ಹಿಂತಿರುಗಿವೆ ಎಂದು ಆರ್ ಬಿಐ ಮಾಹಿತಿ ನೀಡಿದೆ. 2024ರ ಫೆ.29ಕ್ಕೆ ದೊರೆತ ಮಾಹಿತಿ ಅನ್ವಯ ಚಲಾವಣೆಯಲ್ಲಿರುವ 2000ರೂ. ಮುಖಬೆಲೆಯ ನೋಟುಗಳ ಒಟ್ಟು ಮೌಲ್ಯ 8,470 ಕೋಟಿ ರೂ.ಗೆ ಇಳಿಕೆಯಾಗಿದೆ. ಇದು 2023ರ ಮೇ 19ರಂದು 3.56 ಲಕ್ಷ ಕೋಟಿ ರೂ. ಇತ್ತು ಎಂದು ಆರ್ ಬಿಐ ತಿಳಿಸಿದೆ.
ದಿನಕ್ಕೆ ಎಷ್ಟು ಮೊತ್ತದ ನೋಟು ವಿನಿಮಯ ಮಾಡಬಹುದು?
2,000ರೂ. ನೋಟುಗಳನ್ನು ವ್ಯಕ್ತಿಗಳು ಅಥವಾ ಸಂಸ್ಥೆಗಳು 19 ಆರ್ ಬಿಐ ವಿತರಣಾ ಕಚೇರಿಗಳಲ್ಲಿ ಒಮ್ಮೆಗೆ 20,000ರೂ. ತನಕ ವಿನಿಮಯ ಮಾಡಬಹುದು. ವ್ಯಕ್ತಿಗಳು ಅಥವಾ ಸಂಸ್ಥೆಗಳು 2,000ರೂ. ನೋಟುಗಳನ್ನು 19 ಆರ್ ಬಿಐ ವಿತರಣಾ ಕಚೇರಿಗಳಲ್ಲಿ ಭಾರತದಲ್ಲಿನ ತಮ್ಮ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುವಂತೆ ಕೋರಬಹುದು. ಇದಕ್ಕೆ ಯಾವುದೇ ಮಿತಿಯಿಲ್ಲ.
ದೇಶದೊಳಗಿನ ವ್ಯಕ್ತಿಗಳು ಅಥವಾ ಸಂಸ್ಥೆಗಳು 2,000ರೂ. ನೋಟುಗಳನ್ನು ಭಾರತೀಯ ಅಂಚೆ ಮೂಲಕ 19 ಆರ್ ಬಿಐ ವಿತರಣಾ ಕಚೇರಿಗಳಲ್ಲಿ ಯಾವುದಕ್ಕೆ ಬೇಕಾದರೂ ಕಳುಹಿಸಬಹುದು ಹಾಗೂ ಭಾರತದಲ್ಲಿನ ತಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡುವಂತೆ ಕೋರಬಹುದು. ಈ ರೀತಿಯ ವಿನಿಮಯ ಅಥವಾ ಕ್ರೆಡಿಟ್ ಆರ್ ಬಿಐ ಅಥವಾ ಸರ್ಕಾರದ ಸಂಬಂಧಪಟ್ಟ ನಿಯಮಗಳಿಗೊಳಪಡುತ್ತವೆ. ಹಾಗೆಯೇ ಈ ಸಮಯದಲ್ಲಿ ಅರ್ಹ ಗುರುತು ದಾಖಲೆಗಳನ್ನು ಒದಗಿಸೋದು ಅಗತ್ಯ