ಪುಷ್ಪ ಸಿನಿಮಾದ ಮೂಲಕ ಖ್ಯಾತಿ ಘಳಿಸಿರುವ ತೆಲುಗು ನಟಿ ಕಂ ನಿರೂಪಕಿ ಅನಸೂಯ ಭಾರದ್ವಾಜ್ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಈ ಹಿಂದೆ ತಮಗೂ ರಾಜಕೀಯಕ್ಕೂ ಆಗಲ್ಲ ಎಂದಿದ್ದ ನಟಿ ಇದೀಗ ದಿಢೀರ್ ಎಂದು ಉಲ್ಟ್ ಹೊಡೆದಿದ್ದಾರೆ.
ನನಗೆ ರಾಜಕೀಯಕ್ಕೆ ಬರಲು ಇಷ್ಟವಿದೆ ಎಂದು ನಟಿ ಹೇಳಿದ್ದು ನಟಿಯ ಹೇಳಿಕೆ ನಾನಾ ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ.
ಕೆಲವು ನಟಿಯರನ್ನು ನಟ ಪವನ್ ಕಲ್ಯಾಣ್ ಸಂಪರ್ಕಿಸಿದ್ದು, ಮುಂದಿನ ಆಂಧ್ರದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡುವುದಾಗಿ ಹೇಳಿದ್ದಾರಂತೆ. ಅಲ್ಲದೇ, ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಿ ಎಂದು ತಿಳಿಸಿದ್ದಾರಂತೆ. ಅಂತೆಯೇ ನಟಿ ಅನಸೂಯ ಅವರನ್ನೂ ಪವನ್ ಸಂಪರ್ಕಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಇದೀಗ ಅನಸೂಯ ರಾಜಕೀಯಕ್ಕೆ ಎಂಟ್ರಿಕೊಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ನಾನಾ ಕಾರಣಗಳಿಂದ ಅನಸೂಯ ಸುದ್ದಿ ಆಗುತ್ತಲೇ ಇರುತ್ತಾರೆ. ಅತೀ ಹೆಚ್ಚು ಟ್ರೋಲ್ ಆಗುವ ವ್ಯಕ್ತಿಗಳ ಸಾಲಿನಲ್ಲಿ ಸದಾ ಕಾಣಿಸಿಕೊಳ್ಳುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲೊಂದು ಪೋಸ್ಟ್ ಹಾಕುತ್ತಾ, ತಮ್ಮ ಹಿಂಬಾಲಕರಿಗೆ ಮನರಂಜನೆ ನೀಡುವ ಅನಸೂಯ, ತಮ್ಮ ವಿರುದ್ಧ ಕೆಟ್ಟದಾಗಿ ಕಾಮೆಂಟ್ ಮಾಡುವವರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಳ್ಳುತ್ತಾರೆ.