ಬೆಂಗಳೂರು: ಕೋಲಾರ ಟಿಕೆಟ್ ಫೈಟ್ ಗೆ ತೆರೆ ಎಳೆದ ಕಂಗ್ರೆಸ್ ಹೈ ಕಮಾಂಡ್ ಕೋಲಾರ ಅಭ್ಯರ್ಥಿಯಾಗಿ ಕೆ.ವಿ ಗೌತಮ್ ಅವರನ್ನ ಘೋಷಣೆ ಮಾಡಿದೆ. ಆ ನಂತರ ಉಭಯ ಬಣಗಳಿಗೂ ಸ್ಪಷ್ಟ ಎಚ್ಚರಿಕೆ ನೀಡಿದ ಡಿಸಿಎಂ ಡಿ.ಕೆ ಶಿವಕುಮಾರ್
ನಗರದಲ್ಲಿ ಮಾತನಾಡಿದ ಅವರು, ಮುನಿಯಪ್ಪ, ರಮೇಶ್ ಕುಮಾರ್ ಜೊತೆ ಮಾತನ್ನಾಡಿದ್ದೇನೆ ಅವರವರ ಅಭಿಪ್ರಾಯಯನ್ನ ಹೇಳಿದ್ದಾರೆ ಎರಡೂ ಬಣಗಳಿಗೂ ಟಿಕೆಟ್ ಕೊಟ್ಟಿಲ್ಲ ಗುಂಪು ರಾಜಕಾರಣ ನಮ್ಮಲ್ಲಿ ಇಲ್ಲ ಯಾರೇ ಆದರೂ ಲಕ್ಷ್ಮಣ ರೇಖೆ ದಾಟಲು ಸಾಧ್ಯವಿಲ್ಲ ಸೀಟು ಗೆಲ್ಲೋದು ಬಿಡೋದು ನಂತರದ್ದು ಪಕ್ಷದಲ್ಲಿ ಶಿಸ್ತು ಬಹಳ ಮುಖ್ಯಅಂತಿಮವಾಗಿ ಯಾರೇ ಶಿಸ್ತು ಉಲ್ಲಂಘಿಸಿದರೂ ಕ್ರಮ ಕೈಗೊಳ್ತೇವೆ
ಶಿಸ್ತು ಉಲ್ಲಂಘನೆ ಮಾಡಿದವರೆಲ್ಲೆ ಈಗಾಗಲೇ ಕ್ಷಮೆ ಕೇಳಿದ್ದಾರೆ ಶಾಸಕರು, ಸಚಿವರು ಯಾರೇ ಆದರೂ ಎಲ್ಲರೂ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರಬೇಕು ಎಲ್ಲರೂ ಅಭ್ಯರ್ಥಿಯನ್ನ ಗೆಲ್ಲಿಸಿಕೊಂಡು ಬರುವುದಾಗಿ ಹೇಳಿದ್ದಾರೆ
ಗೌತಮ್ ಪಕ್ಷದ ಸಾಮಾನ್ಯ ಕಾರ್ಯಕರ್ತ,ಮಾಜಿ ಮೇಯರ್ ಪುತ್ರ ಹೊಸ ಮುಖ ಗೌತಮ್ ಗೆ ಅವಕಾಶ ನೀಡಿದ್ದೇವೆ ಯಾವ ಒಳ ಏಟು ಇಲ್ಲದೇ ಕಾಂಗ್ರೆಸ್ ಪಕ್ಷಕ್ಕೆ ಕೆಲಸ ಮಾಡುತ್ತಾರೆ ದಲಿತ ಬಲ ಸಮುದಾಯಕ್ಕೆ ಟಿಕೆಟ್ ನೀಡುವಂತೆ ಕೇಳಿದ್ದರು ಸುಮಾರು ಕ್ಷೇತ್ರದಲ್ಲಿ ಎಡ+ ದಲಿತ ಸಮುದಾಯದ ಹೆಚ್ಚಾಗಿದೆ ಬಿಜೆಪಿ ಎರಡು ಸೀಟ್ ಕೊಟ್ಟಿದೆ ಹಾಗಾಗಿ ನಾವೂ ಕೂಡ ಎರಡು ಸೀಟು ಕೊಟ್ಟಿದೆ ಎಂದು ತಿಳಿಸಿದರು.