ಕಳೆದ ವಾರ ಕಡಲ್ಗಳ್ಳರ ಆಕ್ರಮಣಕ್ಕೆ ಒಳಗಾಗಿದ್ದ ಇರಾನ್ನ ಮೀನುಗಾರಿಕಾ ದೋಣಿಯನ್ನು ಭಾರತದ ನೌಕಾಪಡೆ ರಕ್ಷಣೆ ಮಾಡಿತ್ತು. ಯೆಮೆನ್ನ ಸೊಕೋತ್ರ ದ್ವೀಪದ ಸಮುದ್ರದ ಭಾಗದಲ್ಲಿ ಈ ಘಟನೆ ನಡೆದಿತ್ತು. ಭಾರತದ ನೌಕಾಪಡೆಯ ಐಎನ್ಎಸ್ ಸುಮೇಧಾ ಮಾರ್ಚ್ 29ರಂದು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಈ ದೋಣಿಯನ್ನು ಕಡಲ್ಗಳ್ಳರಿಂದ ರಕ್ಷಿಸಿತ್ತು.
ಮೀನುಗಾರಿಕ ದೋಣಿಯಲ್ಲಿ 23 ಮಂದಿ ಪಾಕಿಸ್ತಾನಿ ಮೀನುಗಾರರಿದ್ದು 12 ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಅವರನ್ನು ರಕ್ಷಿಸಲಾಗಿದೆ.
ಭಾರತದ ನೌಕಾಪಡೆಯ ಕಾರ್ಯಾಚರಣೆ ಬಳಿಕ ಈ ಪಾಕಿಸ್ತಾನೀಯರು ಭಾರತಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಭಾರತ ಜಿಂದಾಬಾದ್ ಎಂದು ಹೇಳಿ ತಮ್ಮ ಕೃತಜ್ಞತೆ ತೋರ್ಪಡಿಸಿದ್ದಾರೆ. ದೋಣಿಯ ಮುಖ್ಯಸ್ಥರಾದ ಆಮೀರ್ ಖಾನ್ ವಿಡಿಯೋ ರೆಕಾರ್ಡ್ನಲ್ಲಿ ಮೆಸೇಜ್ ಬಿಡುಗಡೆ ಮಾಡಿದ್ದಾರೆ.