ಯಲಹಂಕ:- ಚಿಕ್ಕಬಳ್ಳಾಪುರ ಲೋಕಸಭಾ ಬಿಜೆಪಿ ಟಿಕೆಟ್ ಸುಧಾಕರ್ ಪಾಲಾಗಿದೆ.. ಮಗನಿಗೆ ಟಿಕೆಟ್ ಕೊಡಿಸುವ ದಾವಂತದಲ್ಲಿದ್ದ ವಿಶ್ವನಾಥ್ ಅಂದಿನಿಂದ ತೀವ್ರ ಬೇಸರಗೊಂಡಿದ್ದರು..ಮೋದಿ ಪರ ಮತ ಕೇಳ್ತೇನೆ ಸುಧಾಕರ್ ಜೊತೆ ವೀದಿಕೆ ಹಂಚಿಕೊಳ್ಳಲ್ಲ ಎಂದು ವಿಶ್ವನಾಥ್ ಗುಡುಗಿದ್ರು. ಇಂದು ಖುದ್ದು ಸುಧಾಕರ್ ಸಿಂಗನಾಯಕನಹಳ್ಳಿ ಮನೆ ಬಳಿ ಭೇಟಿಗೆ ಬಂದಿದ್ದಾಗ ವಿಶ್ವನಾಥ್ ಮನೆಯಲ್ಲಿರಲಿಲ್ಲ.. ಇದರಿಂದ ಡಾ.ಕೆ.ಸುಧಾಕರ್ ಬರಿಗೈಲಿ ವಾಪಸ್ ಆಗಿದ್ದಾರೆ..
ಚಿಕ್ಕಬಳ್ಳಾಪುರ ಲೊಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಮೇಲೆ ಡಾ.ಕೆ.ಸುಧಾಕರ್ ಮತ್ತು ಯಲಹಂಕ ಶಾಸಕ ವಿಶ್ವನಾಥ್ ರ ಮಗ ಅಲೋಕ್ ವಿಶ್ವನಾಥ್ ಇಬ್ಬರು ಕಣ್ಣಿಟ್ಟಿದ್ದರು.. ಇಬ್ಬರ ಪರ ವಿರೋಧ ಅಂಶಗಳನ್ನೆಲ್ಲಾ ಅಳೆದು ತೂಗಿದ ಬಿಜೆಪಿ ನಾಯಕರು, ಯಾರಿಗೆ ಟಿಕೆಟ್ ಕೊಟ್ಟರೆ ಲಾಭ.. ಟಿಕೆಟ್ ಕೊಡದಿದ್ದರೆ ಯಾರು ಬಂಡಾಯ ಎದ್ದೇಳ್ತಾರೆ.. ಯಾರನ್ನು ಸುಲಭವಾಗಿ ಒಪ್ಪಿಸಬಹುದೆಂದು ನಿರ್ಧರಿಸಿತ್ತು.. ನಂತರ ಚಿಕ್ಕಬಳ್ಳಾಪುರದ ಮಾಜಿ ಶಾಸಕ ಮತ್ತು ಮಂತ್ರಿಯಾಗಿದ್ದ ಡಾ.ಕೆ.ಸುಧಾಕರ್ ಗೆ ಟಿಕೆಟ್ ಘೋಷಿಸಿತ್ತು.. ಮಗನಿಗೆ ಸಿಗದಿದ್ದರೂ ಪರ್ವಾಗಿಲ್ಲ, ಡಾ.ಕೆ.ಸುಧಾಕರ್ ಗೆ ಟಿಕೆಟ್ ಸಿಕ್ಕಿದ್ದಕ್ಕೆ ಯಲಹಂಕ ಶಾಸಕ ವಿಶ್ವನಾಥ್ ತೀವ್ರ ಬೇಸರ ವ್ಯಕ್ತಪಡಿಸಿದ್ದರು.. ಇದಕ್ಕೆ ಕಾರಣ ಎಸ್.ಆರ್.ವಿಶ್ವನಾಥ್ ವಿರುದ್ಧವಾಗಿ ಡಾ.ಕೆ.ಸುಧಾಕರ್ ಕೊಟ್ಟಿದ್ದ ಹೇಳಿಕೆಗಳು.. ಬಿರಿಯಾನಿ ಕೊಟ್ಟು ರಾಜಕಾರಣ ಮಾಡಿಲ್ಲ.. ತಿರುಪತಿ ದೇವರ ದರ್ಶನ ಮಾಡಿಸಿ ನಾನು ರಾಜಕೀಯ ಮಾಡಿಲ್ಲ ಎಂದು ಲೇವಡಿ ಮಾಡಿದ್ದರು ಡಾ.ಕೆ.ಸುಧಾಕರ್.. ಇದರಿಂದ ಕುಪಿತಗೊಂಡಿದ್ದ ಎಸ್.ಆರ್.ವಿಶ್ವನಾಥ್ ಕರೋನಾ ವೇಳೆ ಡಾ.ಕೆ.ಸುಧಾಕರ್ ಆರೋಗ್ಯ ಸಚಿವರಾಗಿದ್ದ ವೇಳೆ ನಡೆದಿದ್ದ ಕೋಟ್ಯಾಂತರ ಅವ್ಯವಹರಾದ ಆರೋಪಗಳ ಬಗ್ಗೆ ಮಾತು ಕೇಳಿಬಂತು.. ಟಿಕೆಟ್ ಡಾ.ಕೆ.ಸುಧಾಕರ್ ಗೆ ಸಿಕ್ಕಿದ ನಂತರ ಯಲಹಂಕ ಬಿಜೆಪಿ ಕಾರ್ಯಕರ್ತರ ಸಭೆ ನಡೆಸಲಾಯ್ತು.. ಈ ವೇಳೆ ನಾನು ಮೋದಿ ಪರ ಮತ ಕೇಳ್ತೇನೆ.. ಸುಧಾಕರ್ ಪರ ಮತಯಾಚನೆ ಮಾಡಲ್ಲ.. ಒಂದೇ ವೇದಿಕೆ ಹಂಚಿಕೊಳ್ಳಲ್ಲ ಎಂದು ಅಸಮಾಧಾನ ಹೊರಹಾಕಿದ್ದರು.. ಈ ಅಸಮಾಧಾನ ಈ ಅಸಮಾಧಾನ ನಿವಾರಣೆಗೆ ಇಂದು ಬೆಳಗ್ಗೆ 9-30ಕ್ಕೆ ಡಾ.ಕೆ.ಸುಧಾಕರ್ ನೇರವಾಗಿ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ರವರ ಸಿಂಗನಾಯಕನಹಳ್ಳಿ ಮನೆ ಬಳಿ ಬಂದಿದ್ದರು.. ಈ ವೇಳೆ ಸಿಬ್ಬಂದಿ ವಿಶ್ವನಾಥ್ ರು ಮನೆಲಿಲ್ಲ ಎಂದಾಗ ಬರಿಗೈಲಿ ವಾಪಸ್ ಆದರು..
ನನಗೂ ಯಲಹಂಕ ಶಾಸಕ ವಿಶ್ವನಾಥ್ ರವರಿಗೆ ವೈಯಕ್ತಿಕವಾಗಿ ಯಾವ ಅಸಮಾಧಾನಗಳು ಇಲ್ಲ.. ರಾಜಕೀಯದಲ್ಲಿ ಬೇಸರ ಕೋಪ ಇದ್ದದ್ದೆ.. ಮಗನಿಗೆ ಟಿಕೆಟ್ ಕೈತಪ್ಪಿದ್ದಕ್ಕೆ ವಿಶ್ವನಾಥ್ ನನ್ನ ಮೇಲೆ ಬೇಸರಗೊಂಡಿದ್ದಾರೆ.. ಮೊಬೈಲ್ ಕಾಲ್ ಮಾಡಿ ಮೆಸೇಜ್ ಮಾಡಿದ್ದೆ.. ರಿಪ್ಲೆ ಬಂದಿಲ್ಲ.. ಯಡಿಯೂರಪ್ಪ ಮೂಲಕ ಅಸಮಾಧಾನ ಬಗೆಹರಿಸಿಕೊಳ್ತೇವೆ.. ಇನ್ನು ಎರಡು ಮೂರು ಸಲ ನಾನು ವಿಶ್ವನಾಥ್ ಭೇಟಿಗೆ ಪ್ರಯತ್ನಿಸುತ್ತೇನೆ.. ರಾಜಕೀಯ ಮುಳ್ಳಿನ ನಡೆಗೆ, ರೆಡ್ ಕಾರ್ಪೆಟ್ ಮೆರವಣಿಗೆಯಲ್ಲ.. ಅಮಿತ್ ಷಾ ಭೇಟಿಯೊಳಗೆ ಕೂತು ಮಾತನಾಡಿ ಅಸಮಾಧಾನ ಹೊಗಲಾಡಿಸುತ್ತೇವೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಕೆ.ಸುಧಾಕರ್ ಸಿಂಗನಾಯಕನಹಳ್ಳಿ ವಿಶ್ವನಾಥ್ ರ ಭೇಟಿಗೆ ಬಂದು ವಾಪಸ್ ಆಗೋ ವೇಳೆ ಪ್ರತಿಕ್ರಿಯಿಸಿದರು..
ಇಬ್ಬರ ಜಗಳ ಮೂರನೆ ವ್ಯಕ್ತಿಗೆ ಲಾಭ ಎಂಬಂತೆ ಬಿಜೆಪಿ ನಾಯಕರಿಬ್ಬರ ಒಳ ಜಗಳ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಲಾಭವಾಗುತ್ತಾ.. ಅಥವಾ ಟಿಕೆಟ್ ಹಂಚಿಕೆ ವೇಳೆ ಆರೋಪ ಪ್ರತ್ಯಾರೋಪದ ಮಾತುಗಳು ಡಾ.ಸುಧಾಕರ್ ಮತ್ತು ವಿಶ್ವನಾಥ್ ನಡುವೆ ಶಮನ ಆಗ್ತಾವಾ.. ಬಿಜೆಪಿಯ ಇವರಿಬ್ಬರ ಅಸಮಾಧಾನದ ಜಗಳ ಕಾಂಗ್ರೆಸ್ ಗೆ ಲಾಭವಾಗದಿರಲಿ ಎಂದು ಬಿಜೆಪಿ ಮತದಾರ ಮತ್ತು ಕಾರ್ಯಕರ್ತ ಬೇಸರಗೊಂಡಿದ್ದಾರೆ.. ಇವರಿಬ್ಬರ ಅಸಮಾಧಾನ ಬಗೆಹರಿಯದಿದ್ದರೆ ಅದು ಚಿಕ್ಕಬಳ್ಳಾಪುರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾರಾಮಯ್ಯ ವರಧಾನಾ ಆಗಲಿದೆ..