ಬೆಂಗಳೂರು: ನನ್ನ ಸ್ಪರ್ಧೆ ಬಗ್ಗೆ ಹೆಚ್ಡಿಕೆ ಬಳಿ ಏನು ಚರ್ಚೆ ಮಾಡಿಲ್ಲ ಎಂದು ಸುಮಲತಾ ಅಂಬರೀಶ್ ಹೇಳಿದ್ದರೆ. ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಜೊತೆ ಮಾತುಕತೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ಬರ ಮಧ್ಯೆ ಆರೋಗ್ಯಕರ ಚರ್ಚೆ ನಡೆದಿದೆ.
ಭಿನ್ನಾಭಿಪ್ರಾಯ ಇತ್ತು, ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ ಎಂದಿದ್ದಾರೆ. ಹಿತೈಷಿಗಳ ಒಪ್ಪಿಗೆ ಪಡೆಯದೆ ತೀರ್ಮಾನ ಮಾಡಲು ಸಾಧ್ಯವಿಲ್ಲ ಎಂದಿದ್ದೇನೆ. ಇದಕ್ಕೆ ಅವರು ಒಪ್ಪಿದ್ದಾರೆ ಎಂದರು.
ಏಪ್ರಿಲ್ 3ರಂದು ನನ್ನೊಂದಿಗೆ ದರ್ಶನ್, ಅಭಿಷೇಕ್ ಇರಲಿದ್ದಾರೆ. ಅವರೊಂದಿಗೆ ಚರ್ಚಿಸಿ, ಮಂಡ್ಯ ಬೆಂಬಲಿಗರ ಮುಂದೆ ನಾನು ಮಂಡ್ಯದಲ್ಲಿ ನನ್ನ ತೀರ್ಮಾನ ತಿಳಿಸುತ್ತೇನೆ. ಮಂಡ್ಯದ ಜನರಿಗೆ ಒಳ್ಳೆಯದು ಆಗೋ ತೀರ್ಮಾನ ಮಾಡುತ್ತೇನೆ ಎಂದರು.