ಬೆಂಗಳೂರು: 2023-24ನೇ ಸಾಲಿನ ಬಿಬಿಎಂಪಿ ಆಯವ್ಯಯ (BBMP Budget 2023) ಇಂದು(ಮಾರ್ಚ್ 02) ಮಂಡನೆಯಾಗುತ್ತಿದೆ. ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯ್ಪುರ ಅವರು ಬೆಂಗಳೂರಿನ ಸರ್.ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಬಜೆಟ್ ಮಂಡನೆ ಮಾಡುತ್ತಿದ್ದು, ಬಜೆಟ್ನ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ಯಾವುದಕ್ಕೆ ಎಷ್ಟು ಹಣ ಹಂಚಿಕೆ ಮಾಡಲಾಗಿದೆ:
- ಕಟ್ಟಡ ನಕ್ಷೆಗಳ ಡಿಜಟಲೀಕರಣ ರೂ.2 ಕೋಟಿಗಳು
- ಒತ್ತುವರಿ ತೆರವುಗೊಳಿಸಲು ವಲಯಕ್ಕೆ ಒಂದು ಕೋಟಿಯಂತೆ ರೂ.8 ಕೋಟಿಗಳು
- ಅನಧಿಕೃತ ಕಟ್ಟಡ ತೆರವುಗೊಳಿಸಲು ಒಟ್ಟು ರೂ.10 ಕೋಟಿಗಳು
- ಕಸಾಯಿಖಾನೆಗಳ ನಿರ್ವಹಣೆಗಾಗಿ ರೂ.1 ಕೋಟಿಗಳು
- ಚಿತಾಗಾರಗಳ/ರುದ್ರಭೂಮಿ ನಿರ್ವಹಣೆಗಾಗಿ ರೂ.7.74 ಕೋಟಿಗಳು
- ಬೃಹತ್ ಮಳೆ ನೀರುಗಾಲುವೆಗಳ ನಿರ್ವಹಣೆಗಾಗಿ 70.20 ಕೋಟಿಗಳು
- ಹೊಸ ವಲಯಗಳಿಗೆ ರೂ.2 ಕೋಟಿ
- ಬೀದಿ ದೀಪಗಳ ನಿರ್ವಹಣೆಗಾಗಿ ರೂ.38 ಕೋಟಿಗಳು
- ವಿವಿದ್ಯುದ್ದೇಶ ಇಂಜಿನಿಯರಿಂಗ್ ವಿಭಾಗದ ಕಾಮಗಾರಿಗಳಿಗೆ ರೂ.25 ಕೋಟಿ
- ಆರ್ಟಿರಿಯಲ್/ ಸಬ್ ಆರ್ಟಿರಿಯಲ್ ರಸ್ತೆಗಳ ನಿರ್ವಹಣೆಗಾಗಿ 60.10 ಕೋಟಿ ರೂ.
- ರೈಲ್ವೆ ಮೇಲು ಸೇತುವೆ ಮತ್ತು ಕೆಳ ಸೇತುವೆಗಳ ನಿರ್ವಹಣೆಗಾಗಿ ರೂ.23.11 ಕೋಟಿ ರೂ.
ಬೆಂಗಳೂರಿನ 243 ವಾರ್ಡ್ಗಳ ನಿರ್ವಹಣೆ ಕೆಲಸಗಳಿಗಾಗಿ ಪ್ರತಿ ವಾರ್ಡಗೆ ರೂ.75 ಲಕ್ಷದಂತೆ ಒಟ್ಟಾರೆ ರೂ.182.25 ಕೋಟಿಗಳು
1. ಪ್ರತಿ ವಾರ್ಡ್ ಗೆ ಹೂಳೆತ್ತುವ ಕಾಮಗಾರಿಗಳಿಗೆ ರೂ.30 ಲಕ್ಷಗಳು
2. ಪ್ರತಿ ವಾರ್ಡ್ ಗೆ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗಳಿಗೆ ರೂ.15 ಲಕ್ಷಗಳು
3. ಪ್ರತಿ ವಾರ್ಡ್ ಗೆ ಪಾದವಾರಿ ಮಾರ್ಗಗಳ ದುರಸ್ತಿ ಕಾಮಗಾರಿಗಳಿಗೆ ರೂ.25 ಲಕ್ಷಗಳು
4. ಮಳೆಗಾಲ ನಿರ್ವಹಣೆಗಾಗಿ ರೂ.5 ಲಕ್ಷಗಳು.
ಬೃಹತ್ ಮಳೆನೀರುಗಾಲುವೆಗಳ ನಿರ್ವಹಣೆಗೆ 70.20 ಕೋಟಿ ರೂ. ಮೀಸಲು
ತುರ್ತು ಮಳೆಗಾಲ ಕಾಮಗಾರಿಗಳಿಗಾಗಿ ರೂ.15 ಕೋಟಿ
ಈ ಪೈಕಿ ಹೊಸ ವಲಯಗಳಿಗೆ ತಲಾ 2 ಕೋಟಿ ರೂ. ಹಾಗೂ ಹಳೆ ವಲಯಗಳಿಗೆ ರೂ.1 ಕೋಟಿ ಮೀಸಲು ಇಡಲಾಗಿದೆ.
ಬಿಬಿಎಂಪಿ ನಿರ್ವಹಣಾ ಕಾರ್ಯಗಳಿಗೆ ಅನುದಾನ ಹಂಚಿಕೆ:
- ಬೀದಿ ದೀಪಗಳ ನಿರ್ವಹಣೆಗೆ 38 ಕೋಟಿ ರೂ.
- ಕರಗಳ ನಿರ್ವಹಣೆಗಾಗಿ ರೂ.35 ಕೋಟಿಗಳು
- ಭೂಸ್ವಾಧೀನ ಪ್ರಕ್ರಿಯೆಗಾಗಿ ರೂ.100 ಕೋಟಿಗಳು
- ಕೆರೆ ಮತ್ತು ಇತರೆ ಖಾಲಿ ಜಾಗಗಳ ಸಂರಕ್ಷಣೆಗಾಗಿ ರೂ.40 ಕೋಟಿಗಳು
- ಹೊಸದಾಗಿ ರಚನೆಯಾದ ವಾರ್ಡ್ ಗಳ ಕಛೇರಿ ನಿಮಾಣಕ್ಕಾಗಿ ರೂ.12 ಕೋಟಿಗಳು
- ವಲಯ ಕಟ್ಟಡಗಳಿಗಾಗಿ ರೂ.10 ಕೋಟಿಗಳು
- ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸ್ಥಾಪನೆಗಾಗಿ ರೂ.5 ಕೋಟೆಗಳು ಅಂಗನವಾಡಿಗಳ ನಿರ್ಮಾಣಕ್ಕಾಗಿ ರೂ.4.50 ಕೋಟಿಗಳು
- ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕಾಗಿ ರೂ.10 ಕೋಟಿಗಳು
- ಬೊಮ್ಮನಹಳ್ಳಿ ಮತ್ತು ಮಹದೇವಪುರ ವಲಯದಲ್ಲಿ ಆಂಟಿ ರೇಬಿಸ್ ಕೇಂದ್ರ ಸ್ಥಾಪನೆಗಾಗಿ ರೂ.5 ಕೋಟಿ
- ಹಾರೋಹಳ್ಳಿಯಲ್ಲಿ ಕಸಾಯಿಖಾನ ಅಭಿವೃದ್ಧಿ ಕಾಮಗಾರಿಗಳಿಗಾಗಿ ರೂ.2.5 ಕೋಟಿಗಳು
- ಹೊಸ ಉದ್ಯಾನವನಗಳ ಅಭಿವೃದ್ಧಿಗಾಗಿ ರೂ. 15 ಕೋಟಿ ಮೀಸಲು ಇಡಲಾಗಿದೆ.
- ಹೊಸ ಚಿತಗಾರಗಳ ನಿರ್ಮಾಣಕ್ಕಾಗಿ ರೂ.30 ಕೋಟಿಗಳು
- ಪ್ರಾಣಿಗಳ ಹೊಸ ಚಿತಗಾರಗಳ ನಿರ್ಮಾಣಕ್ಕಾಗಿ ರೂ.5 ಕೋಟಿಗಳು
- ಕೆರೆಗಳ ಅಭಿವೃದ್ಧಿಗಾಗಿ ರೂ.50 ಕೋಟಿಗಳು
- ಅಂಡರ್ ಗೌಂಡ್ ಪಾರ್ಕಿಂಗ್ ನಿರ್ಮಾಣಕ್ಕಾಗಿ ರೂ. 5 ಕೋಟಿಗಳು
- 75 ಜಂಕ್ಷನ್ಗಳ ಅಭಿವೃದ್ಧಿಗಾಗಿ ರೂ.150 ಕೋಟಿಗಳು
- ಪ್ರತಿ ವಾರ್ಡಗೆ ರೂ.1.50 ಕೋಟಿಗಳಂತೆ ವಾರ್ಡ್ ಕಾಮಗಾರಿಗಳಿಗಾಗಿ ಒಟ್ಟು ರೂ.303.75 ಕೋಟಿ ಮೀಸಲು ಇಡಲಾಗಿದೆ.
- ದಾಸರಹಳ್ಳಿ ವಲಯದಲ್ಲಿ ಬೃಹತ್ ಮಳೆ ನೀರುಗಾಲುವೆ ತಡೆಗೋಡೆ ನಿರ್ಮಾಣಕ್ಕಾಗಿ ರೂ.5 ಕೋಟಿಗಳು
- ಹೆಚ್ಚುವರಿ ವಿದ್ಯುತ್ ಫಿಟ್ಟಿಂಗ್ ಗಳಿಗಾಗಿ ಒಟ್ಟು ರೂ.17.25 ಕೋಟಿ ಮೀಸಲಿಟ್ಟಿದ್ದು, ಈ ಪೈಕಿ ಹೊಸ ವಲಯದ ಪ್ರತಿ ವಾರ್ಡಗೆ ರೂ.10 ಲಕ್ಷ ಹಾಗೂ ಹಳೆ ವಲಯದ ಪ್ರತಿ ವಾರ್ಡಗೆ ರೂ.5 ಲಕ್ಷ ರೂ. ಹಂಚಿಕೆ ಮಾಡಲಾಗಿದೆ.