ಇಸ್ಲಾಮಾಬಾದ್: 2023ರ ಏಕದಿನ ವಿಶ್ವಕಪ್ ಟೂರ್ನಿ ಬಳಿಕ ನಾಯಕತ್ವದಿಂದ ಕೆಳಗಿಳಿದಿದ್ದ ಪಾಕ್ ಕ್ರಿಕೆಟಿಗ ಬಾಬರ್ ಆಜಂ (Babar Azam) ಅವರಿಗೆ ಮತ್ತೆ ವೈಟ್ಬಾಲ್ ಕ್ರಿಕೆಟ್ ನಾಯಕತ್ವದ ಹೊಣೆ ನೀಡಲಾಗಿದೆ.
ಕಳೆದೆ ಬಾರಿ ಲಾಹೋರ್ ಕಲಂದರ್ಸ್ ತಂಡಕ್ಕೆ ಪಾಕಿಸ್ತಾನ್ ಸೂಪರ್ ಲೀಗ್ ಕಿರೀಟ ಗೆದ್ದುಕೊಟ್ಟಿದ್ದ ಶಾಹೀನ್ ಶಾ ಅಫ್ರಿದಿ ಈ ಬಾರಿ ಅಂಥದ್ದೇ ಫಲಿತಾಂಶ ತರಲು ಸಂಪೂರ್ಣ ವಿಫಲರಾದರು. ಪಿಎಸ್ಎಲ್ 2024 ಟೂರ್ನಿಯಲ್ಲಿ ಲಾಹೋರ್ ಕಲಂದರ್ಸ್ ತಂಡ ಆಡಿದ 10 ಪಂದ್ಯಗಳಲ್ಲಿ ಕೇವಲ 1 ಪಂದ್ಯ ಮಾತ್ರವೇ ಗೆಲ್ಲಲು ಶಕ್ತವಾಯಿತು. ಪರಿಣಾಮ ಶಾಹೀನ್ ಶಾ ಅಫ್ರಿದಿ ಪಾಕಿಸ್ತಾನ ತಂಡದ ಕ್ಯಾಪ್ಟನ್ಸಿ ಕಳೆದುಕೊಂಡಿದ್ದಾರೆ.
ಕಳಪೆ ಪ್ರದರ್ಶನದಿಂದ ತಲೆದಂಡ:
ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಬಾಬರ್ ಆಜಂ ನಾಯಕತ್ವದ ಪಾಕ್ ತಂಡ ಲೀಗ್ ಸುತ್ತಿನಲ್ಲೇ ಹೊರಬಿದ್ದಿತ್ತು. ಬಾಬರ್ ಆಜಂ 9 ಪಂದ್ಯಗಳಲ್ಲಿ 40 ಸರಾಸರಿಯೊಂದಿಗೆ 82.90 ಸ್ಟ್ರೈಕ್ರೇಟ್ನಲ್ಲಿ 320 ರನ್ ಗಳಿಸಿದ್ದರು. ಇದಕ್ಕೆ ತಲೆದಂಡವಾಗಿ ಬಾಬರ್ ಅವರನ್ನ ನಾಯಕ ಸ್ಥಾನದಿಂದ ಕಿತ್ತೊಗೆಯಲಾಗಿತ್ತು.