ಬೆಂಗಳೂರು: ವಾಹನ ಸವಾರರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಬೆಂಗಳೂರು – ಮೈಸೂರು ಹೆದ್ದಾರಿ ಟೋಲ್ ದರ ಸಧ್ಯಕ್ಕೆ ಏರಿಕೆ ಇಲ್ಲ ಎನ್ನಲಾಗಿದೆ.ಹೆದ್ದಾರಿಯಲ್ಲಿ ವಾಹನ ಚಲಾಯಿಸುವವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಏಪ್ರಿಲ್ 1 ರಿಂದ ಏರಿಕೆ ಆಗಬೇಕಿದ್ದ ಟೋಲ್ ದರ ಮುಂದಿನ 2 ತಿಂಗಳ ಕಾಲ ತಾತ್ಕಾಲಿಕ ಮುಂದೂಡಿಕೆ ಆಗಿದೆ.
ಟೋಲ್ ದರ ಏರಿಕೆಯನ್ನು ತಾತ್ಕಾಲಿಕವಾಗಿ ತಡೆಯುವ ಸಂಬಂಧ ಕಳೆದ ವಾರವಷ್ಟೆ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಕೇಂದ್ರ ಚುನಾವಣಾ ಆಯೋಗದ ಅನುಮತಿ ಕೇಳಿತ್ತು. ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿ ಇರುವ ಕಾರಣ, ರಸ್ತೆ ಸಾರಿಗೆ ಸಚಿವಾಲಯವು 2 ತಿಂಗಳ ಕಾಲ ಟೋಲ್ ದರ ಏರಿಕೆಗೆ ತಡೆ ನೀಡುವ ಸಂಬಂಧ ಏಕಾಏಕಿ ನಿರ್ಧಾರ ಕೈಗೊಳ್ಳುವಂತಿಲ್ಲ. ಹೀಗಾಗಿ, ಚುನಾವಣ ಆಯೋಗದ ಅನುಮತಿ ಕೇಳಲಾಗಿತ್ತು. ಆಯೋಗ ಗ್ರೀನ್ ಸಿಗ್ನಲ್ ನೀಡಿದ ಬಳಿಕ ಈ ಕುರಿತಾಗಿ ಆದೇಶ ಹೊರಡಿಸಿರುವ ರಸ್ತೆ ಸಾರಿಗೆ ಸಚಿವಾಲಯ, ಟೋಲ್ ದರ ಏರಿಕೆಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಿದೆ ಎಂದು ಹೇಳಲಾಗಿದೆ