ಇತ್ತೀಚೆಗೆ ಬಿಸಿಲ ಬೇಗೆಗೆ ಹೊರಗಡೆ ಹೋಗೋದೇ ಬೇಡ ಅನಿಸಿ ಬಿಡುತ್ತದೆ ಯಾಕಂದರೆ ಎಷ್ಟೇ ಚೆನ್ನಾಗಿ ಮೇಕಪ್ ಮಾಡಿಕೊಂಡು ಹೋದ್ರೂ ಈ ಬಿಸಿಲಿಗೆ ಮುಖದ ಕಾಂತಿ ಮಾಯವಾಗಿ ಹೋಗುತ್ತದೆ ಅದರಲ್ಲೂ ಹುಡುಗಿಯರಂತೂ ತ್ವಚೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ತ್ವಚೆ ಹಾಳಗದಂತೆ ಎಚ್ಚರವಹಿಸುತ್ತಾರೆ ಹಾಗಾದ್ರೆ ಬಿಸಿಲಿನ ನಡುವೆಯೂ ಮುಖದ ಕಾಂತಿ ಹೆಚ್ಚಿಸಬೇಕೆ ಇಲ್ಲಿದೆ ನೋಡಿ ಮನೆ ಮದ್ದು
ಇದು ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಹಾಗೇ ಇದರಿಂದ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು. ಇದನ್ನು ಮುಖಕ್ಕೆ ಹಚ್ಚಿದರೆ ಮುಖದ ಹೊಳಪು ಹೆಚ್ಚಾಗುತ್ತದೆ.
ಕಡಲೆ ಹಿಟ್ಟು
ಕಡಲೆ ಹಿಟ್ಟಿಗೆ 2 ಚಮಚ ಮೊಸರು ಬೆರೆಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ನಂತರ ಒಣಗಿದ ಬಳಿಕ ಮುಖ ತೊಳೆಯಿರಿ. ಹೀಗೆ 20 ಡೇಸ್ ಮಾಡಿದರೆ ತ್ವಚೆಯ ಕಾಂತಿಯನ್ನು ಕಾಪಾಡಬಹುದು.
ನಿಂಬೆ ರಸ
2 ಚಮಚ ಜೇನುತುಪ್ಪದೊಂದಿಗೆ ನಿಂಬೆ ರಸ ಮಿಶ್ರಣ ಮಾಡಿ ಬಳಿಕ ಮುಖಕ್ಕೆ ಹಚ್ಚಿ. 15ರಿಂದ 20 ನಿಮಿಷ ಹಾಗೆಯೇ ಬಿಡಿ. ನಂತರ ಮುಖವನ್ನು ಹದ ನೀರಿನಲ್ಲಿ ತೊಳೆಯಿರಿ. ಈ ರೀತಿ 20 ದಿನ ಮಾಡುವುದಿಂದ ಮುಖ ಕಾಂತಿಯನ್ನು ಹೆಚ್ಚಿಸುವುದರ ಜೊತೆಗೆ ತ್ವಚೆಯನ್ನ ಕಾಪಾಡಿಕೊಂಡು ಬರಬಹುದಾಗಿದೆ.
ಆಲೂಗೆಡ್ಡೆ
ಆಲೂಗಡ್ಡೆಯನ್ನು ಮಿಕ್ಸಿಗೆ ಹಾಕಿ ರಸ ತೆಗೆಯಬೇಕು. ಈ ರಸವನ್ನು ಫ್ರಿಜ್ಡ್ನಲ್ಲಿ ಇರಿಸಬೇಕು. ಬಿಸಿಲಿನಿಂದ ಚರ್ಮ ಸುಟ್ಟಂತಾದಾಗ ಈ ರಸವನ್ನು ಚರ್ಮದ ಮೇಲೆ ಹಚ್ಚಿಕೊಂಡು ನಯವಾಗಿ ಮಸಾಜ್ ಮಾಡಬೇಕು. 15 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಬೇಕು.