ಬೆಂಗಳೂರು: ಮಾಜಿ ಮುಖ್ಯಮಂತ್ರಿ ವಿರುದ್ಧ ಸಿಡಿದೆದ್ದಿರುವ ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಅವರು ಬಿವೈ ರಾಘವೇಂದ್ರ ವಿರುದ್ಧ ಶಿವಮೊಗ್ಗದಲ್ಲಿ ಪಕ್ಷೇತರವಾಗಿ ಕಣಕ್ಕಿಯಲು ತೀರ್ಮಾನಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅಮಿತ್ ಶಾ ದೆಹಲಿಯಲ್ಲಿ ಬಂದು ಭೇಟಿಯಾಗಿ ಎಂದು ಕರೆದಿದ್ದರು ಆದರೆ ಅಮಿತ್ ಶಾ ಕರೆ ಮೇರೆಗೆ ಹೋಗಿ ಭೇಟಿ ಸಾಧ್ಯವಾಗದೆ ವಾಪಸ್ ಬಂದಿರುವ ಕೆಎಸ್ ಈಶ್ವರಪ್ಪ
ದೆಹಲಿಗೆ ಕರೆದು ಅಮಿತ್ ಶಾ ಭೇಟಿಯಾಗಿಲ್ಲ ಕರೆದು ಈ ರೀತಿ ಅವಮಾನ ಮಾಡಿದ್ದಾರೆ ಎಂದು ನಾನು ಭಾವಿಸಲ್ಲ ರಾಜ್ಯ ಬಿಜೆಪಿಯ ಕುಟುಂಬ ರಾಜಕಾರಣವನ್ನು ಪ್ರಶ್ನೆ ಮಾಡಿದ್ದೆ ಹಾಗಾಗಿ ನಮಗೆ ಲೋಕಸಭೆ ಟಿಕೆಟ್ ಸಿಕ್ಕಿಲ್ಲ ಪಕ್ಷೇತರವಾಗಿ ನಿಂತ ನನಗೆ ಶಿವಮೊಗ್ಗದಲ್ಲಿ ಭಾರಿ ಬೆಂಬಲ ವ್ಯಕ್ತವಾಗ್ತಿದೆ
ದೆಹಲಿಯಲ್ಲಿ ಅಮಿತ್ ಶಾ ಭೇಟಿಗೆ ಸಿಗದೇ ಇದ್ದದ್ದು ನನಗೆ ವರವಾಗಿದೆ ಭೇಟಿಯಾಗಿ ಸ್ಪರ್ದೆ ವಾಪಸ್ ಪಡೆಯಿರಿ ಎಂದಿದ್ದರೆ ನನಗೆ ಹಿನ್ನಡೆ ಆಗ್ತಿತ್ತು ಈಗ ಪರೋಕ್ಷವಾಗಿ ನೀವು ಸ್ಪರ್ದೆ ಮಾಡಿ ಎಂಬ ಸಂದೇಶ ಕೊಟ್ಟಂಗಿದೆ ಆದ್ದರಿಂದ ನಾನು ಶಿವಮೊಗ್ಗದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ತೇನೆ ಗೆದ್ದು ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆಂಬಲ ಸೂಚಿಸುತ್ತೇನೆ
ರಾಜ್ಯದಲ್ಲಿ ಬಿಜೆಪಿ ಬಹುಸಂಖ್ಯೆಯಲ್ಲಿ ಗೆಲ್ಲಲಿ ನಾನು ಶಿವಮೊಗ್ಗದಲ್ಲಿ ಗೆದ್ದು ಹಿಂದುತ್ವದ ರಕ್ಷಣೆಗಾಗಿ ಮೋದಿ ಕೈ ಬಲಪಡಿಸುತ್ತೇನೆ ರಾಜ್ಯದಲ್ಲಿ ಯಡಿಯೂರಪ್ಪ ಕುಟುಂಬ ರಾಜಕಾರಣ ಕೊನೆಯಾಗಬೇಕು ದೇಶದಲ್ಲಿ ನರೇಂದ್ರ ಮೊದಿಯವರ ಕೈ ಬಲಗೊಳ್ಳಬೇಕು ಏರ್ಪೋರ್ಟ್ ನಲ್ಲಿ ಕೆ.ಎಸ್ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.