ಬೆಂಗಳೂರು: ರಾಜ್ಯದಲ್ಲಿ ಯಡಿಯೂರಪ್ಪ ಕುಟುಂಬ ರಾಜಕಾರಣ ಕೊನೆಯಾಗಬೇಕು ಎಂದು ಶಿವಮೊಗ್ಗ ಪಕ್ಷೇತರ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. ಕೆಂಪೇಗೌಡ ಏರ್ಪೋಟ್ನಲ್ಲಿ ಮಾತನಾಡಿದ ಅವರು, ಅಮಿತ್ ಷಾ ದೆಹಲಿಯಲ್ಲಿ ಬಂದು ಭೇಟಿಯಾಗಿ ಎಂದು ಕರೆದಿದ್ದರು. ಅವರ ಕರೆ ಮೇರೆಗೆ ಹೋಗಿ ಭೇಟಿ ಸಾಧ್ಯವಾಗದೆ ವಾಪಸ್ ಬಂದೆ.ಕರೆದು ಈ ರೀತಿ ಅವಮಾನ ಮಾಡಿದ್ದಾರೆ ಎಂದು ನಾನು ಭಾವಿಸಲ್ಲ. ರಾಜ್ಯ ಬಿಜೆಪಿಯ ಕುಟುಂಬ ರಾಜಕಾರಣವನ್ನು ಪ್ರಶ್ನೆ ಮಾಡಿದ್ದೆ ಹಾಗಾಗಿ ನಮಗೆ ಲೋಕಸಭೆ ಟಿಕೆಟ್ ಸಿಕ್ಕಿಲ್ಲ ಎಂದರು.
ಪಕ್ಷೇತರವಾಗಿ ನಿಂತ ನನಗೆ ಶಿವಮೊಗ್ಗದಲ್ಲಿ ಭಾರಿ ಬೆಂಬಲ ವ್ಯಕ್ತವಾಗ್ತಿದೆ.ದೆಹಲಿಯಲ್ಲಿ ಅಮಿತ್ ಷಾ ಭೇಟಿಗೆ ಸಿಗದೇ ಇದ್ದದ್ದು ನನಗೆ ವರವಾಗಿದೆ. ಭೇಟಿಯಾಗಿ ಸ್ಪರ್ದೆ ವಾಪಸ್ ಪಡೆಯಿರಿ ಎಂದಿದ್ದರೆ ನನಗೆ ಹಿನ್ನಡೆ ಆಗ್ತಿತ್ತು.ಈಗ ಪರೋಕ್ಷವಾಗಿ ನೀವು ಸ್ಪರ್ದೆ ಮಾಡಿ ಎಂಬ ಸಂದೇಶ ಕೊಟ್ಟಂಗಿದೆ.ಆದ್ದರಿಂದ ನಾನು ಶಿವಮೊಗ್ಗದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ತೇನೆ ಎಂದರು.
ರಾಜ್ಯದಲ್ಲಿ ಬಿಜೆಪಿ ಬಹುಸಂಖ್ಯೆಯಲ್ಲಿ ಗೆಲ್ಲಲಿ,ನಾನು ಶಿವಮೊಗ್ಗದಲ್ಲಿ ಗೆದ್ದು ಹಿಂದುತ್ವದ ರಕ್ಷಣೆಗಾಗಿ ಮೋದಿ ಕೈ ಬಲಪಡಿಸುತ್ತೇನೆ.ರಾಜ್ಯದಲ್ಲಿ ಯಡಿಯೂರಪ್ಪ ಕುಟುಂಬ ರಾಜಕಾರಣ ಕೊನೆಯಾಗಬೇಕು.ದೇಶದಲ್ಲಿ ನರೇಂದ್ರ ಮೊದಿಯವರ ಕೈ ಬಲಗೊಳ್ಳಬೇಕು,ರಾಯಣ್ಣ ಬ್ರಿಗೇಡ್ ಇದ್ದಿದ್ದರೆ ಇವತ್ತಿನ ದಿನ ದೊಡ್ಡಮಟ್ಟದ ಶಕ್ತಿ ಇರ್ತಿತ್ತು,ಕುರುಬರನ್ನು ತುಳಿಯುವ ಕೆಲಸ ಹಾಗ್ತಿದೆ ಎಂದರು.