ವಿಶಾಖಪಟ್ಟಣಂ: ಸುನೀಲ್ ನರೇನ್, ರಘುವಂಶಿ, ರಿಂಕು, ರಸೆಲ್ ಸ್ಫೋಟಕ ಬ್ಯಾಟಿಂಗ್ ಹಾಗೂ ಸಂಘಟಿತ ಬೌಲಿಂಗ್ ದಾಳಿ ನೆರವಿನಿಂದ ಕೋಲ್ಕತ್ತಾ ನೈಟ್ರೈಡರ್ಸ್ (Kolkata Knight Riders) ತಂಡವು ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ 106 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. ಅಲ್ಲದೇ ಅಧಿಕ ರನ್ರೇಟ್ನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಇಲ್ಲಿನ ಡಾ.ವೈ.ಎಸ್. ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಬರೋಬ್ಬರಿ 272 ರನ್ ಸಿಡಿಸಿತ್ತು. ಈ ಗುರಿ ಡೆಲ್ಲಿ ಕ್ಯಾಪಿಟಲ್ಸ್ 17.2 ಓವರ್ಗಳಲ್ಲೇ 166 ರನ್ಗಳಿಗೆ ಸರ್ವಪತನ ಕಂಡು ಸೋಲೊಪ್ಪಿಕೊಂಡಿತು.
ಡೆಲ್ಲಿ ಕ್ಯಾಪಿಟಲ್ಸ್ ಪರ ವೈಭವ್ ಅರೋರ ಮತ್ತು ವರುಣ್ ಚಕ್ರವರ್ತಿ ತಲಾ 3 ವಿಕೆಟ್ ಕಿತ್ತರೆ, ದುಬಾರಿ ಆಟಗಾರ ಮಿಚೆಲ್ ಸ್ಟಾರ್ಕ್ 2 ವಿಕೆಟ್ ಹಾಗೂ ಆಂಡ್ರೆ ರಸೆಲ್, ಸುನೀಲ್ ನರೇನ್ ತಲಾ ಒಂದೊಂದು ವಿಕೆಟ್ ಕಿತ್ತರು.
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕೆಕೆಆರ್ 7 ವಿಕೆಟ್ ನಷ್ಟಕ್ಕೆ 20 ಓವರ್ಗಳಲ್ಲಿ 272 ರನ್ ಬಾರಿಸಿತ್ತು. ಪಿಲ್ ಸಾಲ್ಟ್ 18 ರನ್, ಸುನೀಲ್ ನರೇನ್ 85 ರನ್ (39 ಎಸೆತ, 7 ಸಿಕ್ಸರ್, 7 ಬೌಂಡರಿ), ರಘು ವಂಶಿ 54 ರನ್ (27 ಎಸೆತ, 3 ಸಿಕ್ಸರ್, 5 ಬೌಂಡರಿ), ರಸೆಲ್ 41 ರನ್ (19 ಎಸೆತ, 3 ಸಿಕ್ಸರ್, 4 ಬೌಂಡರಿ), ರಿಂಕು ಸಿಂಗ್ 26 ರನ್ (8 ಎಸೆತ, 3 ಸಿಕ್ಸರ್, 1 ಬೌಂಡರಿ), ಶ್ರೇಯಸ್ ಅಯ್ಯರ್ 18 ರನ್, ವೆಂಕಟೇಶ್ ಅಯ್ಯರ್ 5 ರನ್, ರಮಣದೀಪ್ ಸಿಂಗ್ 2 ರನ್, ಮಿಚೆಲ್ ಸ್ಟಾರ್ಕ್ 1 ರನ್ ಗಳಿಸಿದರು. ಅಲ್ಲದೇ ತಂಡಕ್ಕೆ ಹೆಚ್ಚುವರಿ 22 ರನ್ಗಳು ತಂಡಕ್ಕೆ ಸೇರ್ಪಡೆಯಾಯಿತು.