ಬೆಂಗಳೂರು: ಯುಗಾದಿ ಹಬ್ಬ ಸಂಭ್ರಮಾಚರಣೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಹೌದು, ದಿನದಿಂದ ದಿನಕ್ಕೆ ಬೇಸಿಗೆಯ ಬಿಸಿಲಿನ ತಾಪಮಾನ ಹೆಚ್ಚಾಳವಾಗಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿ ಹೂಗಳ ಪೂರೈಕೆ ಕಡಿಮೆಯಾಗಿದ್ದು, ಹೂವುಗಳ ಬೆಲೆ ದುಬಾರಿಯಾಗಿದೆ.
ಇನ್ನೂ ಯುಗಾದಿ ಹಬ್ಬ ಕೆಲವೇ ದಿನಗಳು ಬಾಕಿದ್ದು, ಮತ್ತೊಂದೆಡೆ ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಕೌನ್ ಡೌನ್ ಶುರುವಾಗಿದೆ.ಗ್ರಾಹಕರು ಹೂಗಳ ಬೆಲೆ ಕೇಳಿ ಶಾಕ್ ಆಗುತ್ತಿದ್ದಾರೆ. 2 ಕೆಜಿ ಹೂವು ತೆಗೆದುಕೊಳ್ಳೋವರು. ಇಂದು ಒಂದು ಕೆಜಿ ತೆಗೆದುಕೊಳ್ಳುತ್ತಿದ್ದಾರೆ.
ಯಾವ ಹೂವಿಗೆ ಮಾರುಕಟ್ಟೆಯಲ್ಲಿ ಎಷ್ಟು ಬೆಲೆ ಇದೆ
ಗುಲಾಬಿ: 1 ಕೆಜಿ – 400 ರೂ.
ಸೇವಂತಿಗೆ: 1 ಕೆಜಿ – ರೂ. 250 -300,
ಮಲ್ಲಿಗೆ: 1 ಕೆಜಿ – 600 ರಿಂದ ರೂ. 900 ರೂ
ಕನಕಾಂಬರ: 1 kg -600 ರಿಂದ 800 ರೂ.,
ಸುಗಂಧರಾಜ: 1 kg – 160 ರೂ.,
ಚೆಂಡು ಹೂ: 1 kg – 80 ರಿಂದ 100 ರೂ