ಸಾಕಷ್ಟು ಮಂದಿ ಬೆಳಿಗ್ಗೆ ಎದ್ದ ತಕ್ಷಣ, ಹಲ್ಲು ಶುಚಿ ಮಾಡದೆ, ಟೀ, ತಿಂಡಿ ತಿನ್ನುವ ಅಭ್ಯಾಸ ಇರುತ್ತದೆ. ಆದರೆ ಈ ಅಭ್ಯಾಸ ಇದ್ರೆ ಇಂದೇ ಬಿಟ್ಟುಬಿಡಿ.
ಬೆಳಗ್ಗೆ ಎದ್ದು ಮೊದಲು ಹಲ್ಲುಜ್ಜುವ ಅಭ್ಯಾಸ ಮಾಡಿಕೊಳ್ಳಿ. ನಿಮ್ಮ ಹಲ್ಲುಗಳನ್ನು ಉಜ್ಜದಿರುವುದು ಮಾರಣಾಂತಿಕ ಕಾಯಿಲೆಯಾದ ಕ್ಯಾನ್ಸರ್ ತರಿಸಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ
ನಿಮ್ಮ ಬಾಯಿ ಆರೋಗ್ಯ ಕಾಪಾಡಿಕೊಳ್ಳದಿದ್ದರೆ ಹೃದ್ರೋಗ ಹಾಗೂ ಮಧುಮೇಹದಂಥಹ ಕಾಯಿಲೆಗಳು ಬರುತ್ತವೆ ಎಂದು ಈಗಾಗಲೇ ವೈದ್ಯರು ಹಲವು ಬಾರಿ ಎಚ್ಚರಿಕೆ ನೀಡಿದ್ದಾರೆ. ಇದೀಗ ಹಲ್ಲುಗಳನ್ನು ಉಜ್ಜದೇ ಬಾಯಿ ಆರೋಗ್ಯ ಕಡೆಗಣಿಸಿದರೆ ಕರುಳಿನ ಕ್ಯಾನ್ಸರ್ ಬರಬಹುದು ಎಂಬ ಆಘಾತಕಾರಿ ಅಂಶ ಹೊರಬದ್ದಿದೆ
ನೇಚರ್ ನಿಯತಕಾಲಿಕದಲ್ಲಿ ಪ್ರಕಟವಾದ ಹೊಸ ಅಧ್ಯಯನದಲ್ಲಿ, ಸುಮಾರು 50 ಪ್ರತಿಶತದಷ್ಟು ಕರುಳಿನ ಕ್ಯಾನ್ಸರ್ ಪ್ರಕರಣಗಳಲ್ಲಿ ಬಾಯಿಯಲ್ಲಿ ಕಂಡುಬರುವ ನಿರ್ದಿಷ್ಟ ಸೂಕ್ಷ್ಮಜೀವಿಯೇ ಇದಕ್ಕೆ ಕಾರಣ ಎಂಬುದನ್ನು ಬಹಿರಂಗಪಡಿಸಲಾಗಿದೆ
ಬಾಯಿಯಲ್ಲಿ ಕಂಡುಬರುವ ಸೂಕ್ಷ್ಮಜೀವಿಗಳು ಕೆಳ ಕರುಳಿಗೆ ಸಂಚರಿಸಿ ಹೊಟ್ಟೆಯಲ್ಲಿನ ಎಲ್ಲಾ ರೀತಿಯ ಆಸಿಡಿಕ್ ವಾತಾವರಣದಲ್ಲೂ ಜೀವಂತಾಗಿಯೇ ಇದ್ದು ನಂತರ ಕೊಲೊರೆಕ್ಟಲ್ ಟ್ಯೂಮರ್ಗಳಲ್ಲಿ ಬೆಳೆದು ಕ್ಯಾನ್ಸರ್ ಉಂಟುಮಾಡುತ್ತವೆ ಎಂದು ಯುಎಸ್ನ ಫ್ರೆಡ್ ಹಚಿನ್ಸನ್ ಕ್ಯಾನ್ಸರ್ ಸೆಂಟರ್ನ ವಿಜ್ಞಾನಿಗಳು ಹೇಳಿದ್ದಾರೆ.
ಸಂಶೋಧನೆಯ ಭಾಗವಾಗಿ ಅವರು ಕರುಳಿನ ಕ್ಯಾನ್ಸರ್ನ 200 ಪ್ರಕರಣಗಳನ್ನು ಪರೀಕ್ಷೆಗೊಳಪಡಿಸಿದಾಗ, ಅದರಲ್ಲಿ ಅರ್ಧದಷ್ಟು ಕ್ಯಾನ್ಸರ್ ಕೇಸ್ಗಳು ಬಾಯಿನಲ್ಲಿ ಕಂಡುಬಂದ ಸೂಕ್ಷ್ಮಜೀವಿಯಿಂದಲೇ ಉಂಟಾಗಿರುವುದು ಪತ್ತೆಯಾಗಿದೆ