ಬೆಂಗಳೂರು : ಯುಗಾದಿ ಹಬ್ಬಕ್ಕೆ ಸಾಲು ಸಾಲು ರಜೆಗಳು ಬರುವ ಹಿನ್ನೆಲೆ ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ತೆರಳಲು ಈಗಾಗಲೇ ಜನತೆ ಸಿದ್ದತೆ ಮಾಡಿಕೊಂಡಿದ್ದಾರೆ. ಹೀಗಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಲು ತಯಾರಿ ನಡೆಸಿದೆ.
ವಿಶೇಷ ಬಸ್ಗಳ ವ್ಯವಸ್ಥೆ :
ಬೆಂಗಳೂರಿನಿಂದ ದೂರದೂರುಗಳಿಗೆ ಪ್ರಯಾಣಿಸುವ ಜನರಿಗೆ ಸಾರಿಗೆ ಇಲಾಖೆಯ ನಾಲ್ಕು ನಿಗಮಗಳಿಂದ ಎರಡು ಸಾವಿರಕ್ಕು ಅಧಿಕ ಬಸ್ ವ್ಯವಸ್ಥೆಕಲ್ಪಿಸುತ್ತಿದೆ. ಕೆಎಸ್ಆರ್ಟಿಸಿ ವತಿಯಿಂದ 1.750 ಬಸ್ಗಳು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ವತಿಯಿಂದ 145 ಬಸ್ಸ್ಗಳು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ (KKRTC) ನಿಗಮ ವತಿಯಿಂದ 200 ಬಸ್ಸ್ಗಳು ಮತ್ತು ಬೃಹತ್ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವತಿಯಿಂದ 180 ಬಸ್ಸ್ಗಳನ್ನು ರಸ್ತೆಗಿಳಿಸಲು ತೀರ್ಮಾನಿದೆ.
ಯುಗಾದಿ ಹಬ್ಬಕ್ಕೆ ಊರಿಗೆ ಹೊರಡಲು ತಯಾರಿ ನಡೆಸಿರುವ ಜನರಿಗೆ ಬರೊಬ್ಬರಿ 5 ದಿನಗಳ ರಜೆ ಸಿಗಲಿದೆ. ಏ.7 ರಂದು ಭಾನುವಾರ, 9 ರಂದು ಮಂಗಳವಾರ ಯುಗಾದಿ ಹಬ್ಬ ಬರುವುದರಿಂದ ಏ.8ರಂದು ಸೋಮವಾರ ರಜೆ ಹಾಕಿ ಶನಿವಾರವೇ ಊರಿಗೆ ತೆರಳಲು ಜನರ ಸಿದ್ದತೆ ಮಾಡಿಕೊಂಡಿದ್ದಾರೆ. ಜೊತೆಗೆ ಒಂದು ದಿನ ಬಿಟ್ಟು ಗುರುವಾರ ರಂಜಾನ್ ರಜೆ ಬರುತ್ತೆ, 13 ರಂದು ಎರಡನೇ ಶನಿವಾರ ರಜೆ ಹಾಗೂ14 ರಂದು ಭಾನುವಾರ ರಜೆ ಇದೆ. ಏಪ್ರಿಲ್ 7ರಿಂದ ಏಪ್ರಿಲ್ 14ರ ವರೆಗೆ ಬರೊಬ್ಬರಿ 5 ರಜೆಗಳು ಸಿಗಲಿದೆ.
ಈ ನಡುವೆ ಕೆಲವರು ಹಬ್ಬದ ವಾರಪೂರ್ತಿ ಕಚೇರಿಗಳಿಗೆ ರಜೆ ಹಾಕಲು ಪ್ಲಾನ್ ಮಾಡಿದ್ದಾರೆ. ಇನ್ನು ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಶುರುವಾಗಿದ್ದು ಮಕ್ಕಳ ಜೊತೆ ಪ್ರವಾಸಕ್ಕೆ ತೆರಳು ಪೋಷಕರ ಪ್ಲಾನ್ ಮಾಡಿಕೊಂಡಿದ್ದಾರೆ.
ವಿಶೇಷ ಬಸ್ಗಳ ನಿಲ್ದಾಣ:
ಯುಗಾದಿ ಹಬ್ಬದ ಹಿನ್ನೆಲೆ ಪ್ರಯಾಣಿಕರಿಗೆ ಅನುಕೂಲವಾಗುವಂತೆ ನಗರದ ಕೆಂಪೇಗೌಡ ನಿಲ್ದಾಣ, ಸ್ಯಾಟಲೈಟ್ ನಿಲ್ದಾಣ, ಶಾಂತಿನಗರದಿಂದ ವಿಶೇಷ ಬಸ್ ಸೇವೆ ಕಲ್ಪಿಸಲಾಗಿದೆ.
ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ,
ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ ಸೇರಿ ಹಲವು ಸ್ಥಳಗಳಿಗೆ ಹೆಚ್ಚುವರಿ ಬಸ್
ನೆರೆರಾಜ್ಯ ಹೈದರಾಬಾದ್, ಚೆನ್ನೈ, ಗೋವಾ ಪಣಜಿ, ಶಿರಡಿ, ಎರ್ನಾಕುಲಂ ಗೆ ತೆರಳುವವರಿಗೂ ವಿಶೇಷ ಬಸ್ ಸೇವೆ ಕಲ್ಪಿಸಲು ಸಾರಿಗೆ ಇಲಾಖೆ ಸಜ್ಜಾಗಿದೆ.