ಬೆಂಗಳೂರು: ಲೋಕಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿ ಹೈಕಮಾಂಡ್ ಸಕ್ರೀಯವಾಗಿದ್ದು ಕಠಿಣ ಸ್ಪರ್ಧೆ ಇರುವ ಕ್ಷೇತ್ರದಲ್ಲಿ ತಂಡವೊಂದರಿಂದ ರಹಸ್ಯ ವರದಿ ಸಂಗ್ರಹಿಸಲು ಮುಂದಾಗಿದೆ.
ಕಳೆದ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಒಳ ಹೊಡೆತದಿಂದ ಹೆಚ್ಚು ನಷ್ಟವಾಗಿತ್ತು. ಒಬ್ಬರ ಕಾಲನ್ನ ಇನ್ನೊಬ್ಬರು ಎಳೆದು ಗೆಲ್ಲಬಹುದಾಗಿದ್ದ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿಗೆ ಸೋಲಾಗಿತ್ತು.
ವಿಧಾನಸಭಾ ಚುನಾವಣೆ ಆಗಿರುವ ತಪ್ಪು ಮತ್ತೆ ಮರುಕಳಿಸದಂತೆ ಮಾಡಲು ಅಸಮಾಧಾನ ಇರುವ 15 ಕ್ಷೇತ್ರಗಳಲ್ಲಿ ತಂಡ ರಹಸ್ಯ ವರದಿಯನ್ನು ಸಂಗ್ರಹಿಸಲಿದೆ. ನಾಮಪತ್ರ ಸಲ್ಲಿಕೆಗೂ ಮೊದಲೇ ಈ ತಂಡ ಈಗಾಗಲೇ ಫೀಲ್ಡ್ಗೆ ಇಳಿದು ಕೆಲಸ ಮಾಡುತ್ತಿದೆ.
ಅಡ್ಜೆಸ್ಟ್ಮೆಂಟ್ ಪಾಲಿಟಿಕ್ಸ್ಗೆ ಕಡಿವಾಣ ಹಾಕಲು ಪ್ಲಾನ್ ಮಾಡಿದ್ದು ಅನುಮಾನ ಇರುವ ನಾಯಕರ ಸುತ್ತ ಸ್ಪೆಷಲ್ ಟೀಂ ಕಣ್ಗಾವಲು ಇಡಲಿದೆ. ಅಸಮಾಧಾನ ಇರುವ ಕ್ಷೇತ್ರಗಳಲ್ಲೂ ಒಬ್ಬರು ರಹಸ್ಯವಾಗಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಪ್ರತಿದಿನ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನದಾಸ್ ಅಗರವಾಲ್ ಅವರಿಗೆ ಈ ವರದಿಯನ್ನ ನೀಡಲಾಗುತ್ತದೆ. ಈ ವರದಿಯನ್ನು ರಾಧಾ ಮೋಹನ್ ದಾಸ್ ಅವರು ಹೈಕಮಾಂಡ್ಗೆ ನೀಡಲಿದ್ದಾರೆ. ವೈಯುಕ್ತಿಕ ದ್ವೇಷ, ಪ್ರತಿಷ್ಠೆಗಳ ಬಡಿದಾಟ ಜಾಸ್ತಿಯದರೆ ಹೈಕಮಾಂಡ್ ನಾಯಕರೇ ನೇರವಾಗಿ ಎಚ್ಚರಿಕೆ ನೀಡಲಿದ್ದಾರೆ