ಬೆಂಗಳೂರು: ಲೋಕ ಸಮರಕ್ಕೆ ಕೌಂಟ್ ಡೌನ್ ಶುರುವಾಗಿದ್ದು ಚುನಾವಣಾ ಸಂದರ್ಭದಲ್ಲಿ ಕಾರ್ಯನಿರ್ವಹಿಸಲು ಪೂರೈಸಬೇಕು ಎಂದು ಆಶಾ ಕಾರ್ಯಕರ್ತೆಯರು ಬೇಡಿಕೆ ಇಟ್ಟಿದ್ದಾರೆ ಚುನಾವಣೆ ದಿನ ಚುನಾವಣಾ ಕೇಂದ್ರದ ಬಳಿ ಕಾರ್ಯನಿರ್ವಹಿಸಲು ಆಶಾ ಕಾರ್ಯಕರ್ತೆಯರಿಗೆ ಸೂಚನೆ ಈ ಹಿನ್ನೆಲೆಯಲ್ಲಿ ಕೆಲವೊಂದಿಷ್ಟು ಬೇಡಿಕೆಗಳನ್ನ ಇಟ್ಟಿರುವ ಆಶಾ ಕಾರ್ಯಕರ್ತೆಯರು
ಚುನಾವಣಾ ಸಂದರ್ಭದಲ್ಲಿ ಕಾರ್ಯನಿರ್ವಹಿಸಲು ಆಶಾ ಕಾರ್ಯಕರ್ತೆಯರ ಬೇಡಿಕೆಗಳೇನು…!?
ಸರಿಯಾದ ಸಮಯದಲ್ಲಿ ನಿಗದಿತ ವೇತನ ನೀಡಬೇಕು, ಕಳೆದ ಬಾರಿಯ ಗೌರವಧನವನ್ನ ಆದಷ್ಟು ಬೇಗ ಆಶಾಗಳಿಗೆ ತಲುಪಿಸಬೇಕು 700ರೂ ಇರುವ ಗೌರವಧನವನ್ನ 1000ರೂಪಾಯಿಗೆ ಹೆಚ್ಚಿಸಬೇಕು ಆಶಾ ಕಾರ್ಯಕರ್ತೆಯರಿಗೆ ಸ್ಥಳಿಯ ಎಲೆಕ್ಷನ್ ಬೂತ್ ಗಳಲ್ಲಿ ಕೆಲಸ ನಿಯೋಜನೆ ಮಾಡಬೇಕು
ಬೇರೆ ಊರೂ ಅಥವಾ ಜಿಲ್ಲೆಗಳಲ್ಲಿ ನಿಯೋಜನೆ ಮಾಡಬಾರದು ಆಶಾ ಕಾರ್ಯಕರ್ತೆಯರ ಓಡಾಟಕ್ಕೆ ಬಸ್ ಅಥವಾ ಇತರೆ ವಾಹನಗಳ ಸೌಲಭ್ಯ ಒದಗಿಸಬೇಕು ಉಚಿತ ಆಹಾರ, ನೀರು ಪೂರೈಕೆ ಮಾಡಬೇಕು ಎಂದು ಡಿಮ್ಯಾಮಡ್ ಮಾಡಿದ್ದಾರೆ. ಈ ಬಗ್ಗೆ ಸರ್ಕಾರ ಏನ್ ಕ್ರಮ ವಹಿಸುತ್ತೆ ಕಾದು ನೋಡಬೇಕಿದೆ.