ಬೆಂಗಳೂರು: ಸ್ವಾಭಿಮಾನದ ಕಹಳೆಯೂದಿ ಮಂಡ್ಯದ ಜನರ ಮನಸ್ಸು ಹೃದಯ ಗೆದ್ದಿದ್ದ ಸಂಸದೆ ಸುಮಲತಾ ಕೊನೆಗೂ ಕಮಲ ಮುಡಿದಿದ್ದಾರೆ. ಘಟಾನುಗಟಿ ನಾಯಕರು ಮಂಡ್ಯದ ಗೌಡ್ತಿಯನ್ನ ಬಿಜೆಪಿಗೆ ಬರಮಾಡಿಕೊಂಡ್ರು. ಈ ಮಧ್ಯೆ ಬೆಂಗಳೂರು ಗ್ರಾಮಾಂತರ ಅಖಾಡವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಮೈತ್ರಿನಾಯಕರು ಡಿಕರ ಬ್ರದರ್ಸ್ ಗೆ ಖೆಡ್ಡಾ ತೋಡಲು ಮಾಜಿ ಸಚಿವ ಅಶ್ವಥ್ ನಾರಾಯಣ ಮನೆಯಲ್ಲಿ ಸಭೆ ನಡೆಸಿ ರಣಕಹಳೆ ಮೊಳಗಿಸಿದ್ದಾರೆ, ಡಿಕೆ ನೋಟು, ಡಾಕ್ಟರ್ ಗೆ ಓಟು ಅನ್ನೋ ದಾಳ ಉರುಳಿಸಿ ಗೇಮ್ ಪ್ಲಾನ್ ಶುರುಮಾಡಿದ್ದಾರೆ….
2019 ರ ಲೋಕಸಭಾ ಮಂಡ್ಯ ಅಖಾಡದಲ್ಲಿ ಸ್ವಾಭಿಮಾಮದ ಕಹಳೆಯೂದಿ ಸಕ್ಕರೆ ನಾಡಿನ ಅಕ್ಕರೆಯ ಸಂಸದೆಯಾಗಿದ್ದ ಸಂಸದೆ ಸುಮಲತಾ. ವಿಧಾನಸಭಾ ಚುನಾವಣೆ ಸಮಯದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ರು ಆ ಮೈತ್ರಿ ಧರ್ಮದ ಹಿನ್ನೆಲೆ ಮಂಡ್ಯದ ಗೌಡ್ತಿಗೆ ಬಿಜೆಪಿ ಟಿಕೆಟ್ ಕೈತಪ್ಪಿತ್ತು. ಮೊನ್ನೆ ಮಂಡ್ಯದಲ್ಲಿ ಸಮಾವೇಶ ನಡೆಸಿ ಅಧಿಕೃತವಾಗಿ ಬಿಜೆಪಿ ಸೇರುವುದಾಗಿ ಘೋಷಿಸಿದ್ದ ಸುಮಲತಾ ಇಂದು ಬಿಜೆಪಿ ಕಛೇರಿ ಯಲ್ಲಿ ಘಟಾನುಘಟಿ ನಾಯಕಾರದ ಯಡಿಯೂರಪ್ಪ, ವಿಜಯೇಂದ್ರ, ಅಶೋಕ, ಸಿಟಿ ರವಿ ನೇತೃತ್ವದಲ್ಲಿ ಕಮಲ ಮುಡಿದಿದ್ದಾರೆ….
ಅಧಿಕೃತವಾಗಿ ಬಿಜೆಪಿ ಸೇರಿದ ಸಂಸದೆ ಸುಮಲತಾ ಮಂಡ್ಯದಲ್ಲಿ ಬಿಜೆಪಿ ಗಟ್ಟಿಗೊಳಿಸುವ ಶಪಥ ಮಾಡಿದ್ರು. ನಾನು ಪಾರ್ಲಿಮೆಂಟ್ ಗೆ ಹೋದಾಗ ಮಾರ್ಗದರ್ಶನ ಕೊಟ್ಟವರು ಬಿಜೆಪಿ ನಾಯಕರು,
ನನ್ನ ರಾಜಕೀಯದ ಪ್ರಭಾವಿ ನಾಯಕ ಮೋದಿ ಅವರು
ಇವೆಲ್ಲವನ್ನು ನೋಡಿ ಬಿಜೆಪಿ ಸೇರಬೇಕು ಅಂತ ತೀರ್ಮಾನ ಮಾಡಿದೆ. ನನಗೆ ನನ್ನ ಭವಿಷ್ಯದ ಬಗ್ಗೆ ಚಿಂತೆ ಇಲ್ಲ, ನನ್ನ ಜಿಲ್ಲೆ, ರಾಜ್ಯ, ಬಿಜೆಪಿ ಮುಖ್ಯ, ಮುಂದಿನ ದಿನಗಳಲ್ಲಿ ಎಲ್ಲರ ಮಾರ್ಗದರ್ಶನದಲ್ಲಿ ಕೆಲಸ ಮಾಡ್ತೀನಿ ಎಂದ್ರು ಸುಮಲತಾ….
ಇದೇ ವೇಳೆ ಮಾತನಾಡಿದ ರಾಜ್ಯಾಧ್ಯಕ್ಷ ವಿಜಯೇಂದ್ರ ರಾಜ್ಯದಲ್ಲಿ ಬಿಜೆಪಿ ಪರವಾದ ವಾತಾವರಣ ನಿರ್ಮಾಣವಾಗಿದೆ. ಸಂಸದೆ ಸುಮಲತಾ ಅಂಬರೀಶ್ ಅವರನ್ನು ಸಂತೋಷದಿಂದ ಪಕ್ಷಕ್ಕೆ ಸ್ವಾಗತ ಮಾಡ್ತೀನಿ,
ಸುಮಲತಾ ಮಂಡ್ಯ ಜಿಲ್ಲೆಯಲ್ಲಿ ತಮ್ಮದೇ ಆದ ಪ್ರಭಾವ, ಜನಪ್ರಿಯತೆ ಹೊಂದಿದ್ದಾರೆ. ಸುಮಲತಾ ಅವರು ಪಕ್ಷಕ್ಕೆ ಬಂದಿದ್ದು ರಾಜ್ಯಕ್ಕೆ ದೊಡ್ಡ ಶಕ್ತಿ ಬಂದಿದೆ ಪಕ್ಷದಲ್ಲಿ ಉತ್ತಮ ಜವಾಬ್ದಾರಿ ಕೊಟ್ಟು, ಒಳ್ಳೆಯ ರೀತಿ ನಡೆಸ್ಕೊತೀವಿ ಎಂದ್ರು ವಿಜಯೇಂದ್ರ….
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ಮೈತ್ರಿ ನಾಯಕರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಶತಾಯಗತಾಯ ಡಿಕೆ ಬ್ರದರ್ಸ್ ನ ಸೋಲಿಸಲೇಬೇಕೆಂದು ರಣತಂತ್ರ ರೂಪಿಸ್ತಿದ್ದಾರೆ.
ಮಾಜಿ ಸಚಿವ ಡಾ. ಅಶ್ವಥ್ ನಾರಾಯಣ ಅವರ ನಿವಾಸದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ- ಅಶ್ವಥ್ ನಾರಾಯಣ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಿದ್ರು. ಸಭೆಯಲ್ಲಿ ಮಾಜಿ ಸಚಿವರಾದ ಮುನಿರತ್ನ, ಸಿಪಿ ಯೋಗೇಶ್ವರ್, ಶಾಸಕರಾದ ಕೃಷ್ಣಪ್ಪ , ಅಭ್ಯರ್ಥಿ ಡಾ.ಮಂಜುನಾಥ್ ಸೇರಿ ಹಲವರು ಭಾಗಿಯಾಗಿದ್ರು. 4 ಗಂಟೆಗಳ ಕಾಲ ನಡೆದ ಸಭೆಯಲ್ಲಿ ಡಿಕೆ ಬ್ರದರ್ಸ್ ಸೋಲಿಸಲು ಚಕ್ರವ್ಯೂಹ ರಚಿಸಿದ್ದಾರೆ ಮೈತ್ರಿ ನಾಯಕರು.
ಸಭೆ ನಂತರ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಡಿಕೆ ಬ್ರದರ್ಸ್ ವಿರುದ್ಧ ಆಕ್ರೋಶ ಹೊರಹಾಕಿದ್ರು. ನಮ್ಮ ಅಭ್ಯರ್ಥಿ ಚುನಾವಣೆಯಲ್ಲಿ ಗೆಲ್ಲಬೇಕು ಬೆಂಗಳೂರು ಗ್ರಾಮಾಂತರದಲ್ಲಿ ದೊಡ್ಡಮಟ್ಟದ ಸಂಚಲನ ಶುರುವಾಗಿದೆ. ಜನರೇ ಸ್ವಯಂ ಪ್ರೇರಣೆಯಿಂದ ಜನ ಡಾ.ಮಂಜುನಾಥ್ ಗೆ ಬೆಂಬಲ ವ್ಯಕ್ತಪಡಿಸ್ತಿದ್ದಾರೆ, ಡಿಕೆ ನೋಟು, ಡಾಕ್ಟರ್ ಗೆ ಓಟು ಅನ್ನೋದೇ ನಮ್ಮ ಸ್ಟ್ರಾಟರ್ಜಿ. ಅವರ ದುಡ್ಡಿನ ಮೇಲೆ ನಮ್ಮ ಹೋರಾಟ ಡಾ.ಮಂಜುನಾಥ್ ಅವರ ಬಗ್ಗೆ ಇರುವ ಒಳ್ಳೆಯ ಭಾವನೆಯೇ ನಮ್ಮ ಶಕ್ತಿ. ನಮ್ಮ ಪಕ್ಷದಲ್ಲಿ ಗೆದ್ದವರನ್ನೇ ಕೊಂಡುಕೊಂಡಿದ್ದಾರೆ ಡಿಕೆ ಬ್ರದರ್ಸ್ ಅವರ ದುಡ್ಡಿನ ಮದ ಇಳಿಸೋಕೆ, ಡಾಕ್ಟರ್ ಅನ್ನೊ ಅಂಕುಶ ಇಟ್ಕೊಂಡಿದ್ದೀವಿ. ರಾಮನಗರದಲ್ಲಿ ಯಾರಾದ್ರು ಒಬ್ಬರು 50 ಮತ ಇಟ್ಕೊಂಡಿದ್ದೀವಿ ಅಂದ್ರೆ, ಅಣ್ಣ- ತಮ್ಮ ಇಬ್ಬರೂ ಹೋಗಿ ಹಣ ಕೊಟ್ಟು ಕಾಲಿಗೆ ಬೀಳ್ತಿದ್ದಾರೆ ಅಂತ ಡಿಕೆ ಬ್ರದರ್ಸ್ ವಿರುದ್ಧ ವ್ಯಂಗ್ಯವಾಡಿದ್ರು ಕುಮಾರಸ್ವಾಮಿ…
ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಅಶ್ವಥ್ ನಾರಾಯಣ ಬೆಂಗಳೂರು ಗ್ರಾಮಾಂತರ ಗೆಲ್ಲಬೇಕು ಅನ್ನೋದೇ ನಮ್ಮ ಉದ್ದೇಶ. ಇದು ದೇಶ ಹಾಗೂ ಮೋದಿ ಚುನಾವಣೆ ಸಿದ್ದರಾಮಯ್ಯ, ಡಿಕೆ ಸುರೇಶ್, ಡಿಕೆ ಶಿವಕುಮಾರ್ ಚುನಾವಣೆ ಅಲ್ಲ.
ಕುಕ್ಕರ್ ಕೂಗ್ತಾ ಇದೆ, ಸೀರೆ ಹಂಚಿಕೆ ಆಗ್ತಾ ಇದೆ
ಮುಖಂಡರಿಗೆ ಹಣ ಕೊಡ್ತಾ ಇದ್ದಾರೆ. ಮಂಜುನಾಥ್ ಅಂತವರು ಗೆಲ್ಲಬೇಕು, ಕನಕಪುರ ಬಂಡೆ ಕರಗುತ್ತದೆ ನೋಡ್ತಿರಿ ಅಂತ ಸವಾಲು ಹಾಕಿದ್ದಾರೆ ಅಶ್ವಥ್ ನಾರಾಯಣ.ಡಾ.ಮಂಜುನಾಥ್ ಮಾತನಾಡಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜನರ ಹೃದಯ ಡಾ.ಮಂಜುನಾಥ್ ಹಾಗೂ ಬಿಜೆಪಿ ಪಕ್ಷಕ್ಕೆ ಮತ ಹಾಕಬೇಕು ಅಂತ ಮಿಡಿಯುತ್ತಿದೆ ಎಂದ್ರು….