ನಿಂಬೆ ಗಿಡ ತುಂಬಾ ಚೆಂದ, ನಿಂಬೆ ಹಣ್ಣು ತುಂಬಾ ರುಚಿ!” ಎಂದು ಹಾಡಿಕೊಳ್ಳುತ್ತಾ ಈ ಪರಿ ಬೇಸಿಗೆಗೆ ಗಂಟಲೊಣಗಿ ನಿಂಬೆ ಪಾನಕ ಮಾಡುತ್ತಿದ್ದೆ. ಈ ಕೊರೊನಾ ವೈರಸ್ಸಿನಿಂದ ಗೃಹ ಬಂಧಿಗಳಾಗಿ (ಮನೆ) ತಿಂಡಿ-ಊಟ, ಜೂಸುಗಳ ಭಾರಾಟೆಯಲ್ಲಿ ಗಂಟೆಗಟ್ಟಲೆ ಅಡುಗೆ ಮನೆಯಲ್ಲೇ ನಮ್ಮಂತ ಗೃಹಿಣಿಯರಿಗೆ ಲಾಕ್ ಡೌನ್ ಆಗಿ ಬಿಡುವ ಪರಿಸ್ಥಿತಿ!
ನಿಂಬೆ ಪಾನಕದ ಹುಳಿ ಮಧುರ ರುಚಿ ನಾಲಗೆಗೆ ಏರುತ್ತಿದ್ದಂತೆ ಈ ನಿಂಬೆಯ ಬಗ್ಗೆ ತಲೆಯಲ್ಲಿ ಹುಳ ಕೊರೆಯಲಾರಂಭಿಸಿತು. ಕಳೆಕಳೆಯಾಗಿ ಹೊಳೆಯುವ ಹಳದಿ ಸುಂದರಿ ನಿಂಬೆ ತರಕಾರಿ ಕೆಟಗರಿಯಲ್ಲಿ ಬಂದರೂ ತನ್ನ ಹೆಸರಿನ ಪಕ್ಕ ”ಹಣ್ಣು” ಎನ್ನುವ ಸರ್ ನೇಮ್ ಇಟ್ಟಕೊಂಡು ಹಣ್ಣುಗಳ ಜೊತೆಯಲ್ಲೂ ಗುರುತಿಸಿಕೊಂಡು ಬುದ್ಧಿವಂತಿಕೆ ಮೆರೆದಿದೆ
ಫ್ರಿಡ್ಜ್ನಲ್ಲಿ ನಿಂಬೆ ಹಣ್ಣು ಇಡಬಹುದೇ?
ಫ್ರಿಡ್ಜ್ನಲ್ಲಿ ನಿಂಬೆ ಹಣ್ಣುಗಳು ತಾಜಾವಾಗಿರುವ ಕಾರಣ ಇದನ್ನು ಅದರಲ್ಲಿ ಸಂಗ್ರಹಿಸಿಡಬಹುದು. ನಿಂಬೆಗಳು ಒಂದೆರೆಡು ಇದ್ದು, ಬೇಗ ಬಳಸುತ್ತೀರಿ ಎಂದರೆ ಅದನ್ನು ಅಲ್ಲಿ ಇಡುವ ಅವಶ್ಯಕತೆ ಇರುವುದಿಲ್ಲ. ಇಲ್ಲಾ ತುಂಬಾ ಹಣ್ಣಿದೆ ಅಂದಾಗ ನೀವು ಅದನ್ನು ಅಲ್ಲಿ ಸಂಗ್ರಹಿಸಬಹುದು.
ಫ್ರಿಡ್ಜ್ನಲ್ಲಿ ಇಟ್ಟ ನಿಂಬೆಹಣ್ಣು ಸ್ವಲ್ಪ ಗಟ್ಟಿಯಾಗಬಹುದು, ಆ ವೇಳೆ ನಿಮಗೆ ಹಣ್ಣನ್ನು ಹಿಂಡುವುದು ಕಷ್ಟವಾಗಬಹುದು. ಹೀಗಾಗಿ ಇದಕ್ಕೆ ನೀವು ಈ ಟಿಪ್ ಅನ್ನು ಉಪಯೋಗಿಸಿಕೊಳ್ಳಬಹುದು.
ನಿಂಬೆಹಣ್ಣನ್ನು ಹಿಂಡುವ ಮುನ್ನ ಫ್ರಿಡ್ಜ್ನಿಂದ ಹೊರತೆಗೆದು ಸ್ವಲ್ಪ ಹೊತ್ತು ಹೊರಗಿಡಿ. ಹೀಗೆ ಹೊರಗಿಟ್ಟಲ್ಲಿ ನಿಂಬೆ ಹಣ್ಣು ಸ್ವಲ್ಪ ಬೆಚ್ಚಗಾಗುತ್ತದೆ ಮತ್ತು ಮೃದುವಾಗುತ್ತದೆ. ಇದರಿಂದ ಸುಲಭವಾಗಿ ರಸ ಹೊರತೆಗೆಯಬಹುದು.
ನೀವು ಸರಳವಾಗಿ ಫ್ರಿಡ್ಜ್ ನಲ್ಲಿ ಇಡಬಹುದು. ಒಂದು ಬಾಕ್ಸಿನಲ್ಲಿಡಬಹುದು ಇಲ್ಲಾ ಹಾಗೆಯೇ ಪೇಪರ್ನಲ್ಲಿ ಸುತ್ತಿ ಫ್ರಿಡ್ಜ್ ಶೆಲ್ಫ್ನಲ್ಲಿಡಬಹುದು