ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಕುರಿತು ಕೇಳಿ ಬಂದಿರುವ ಅವಹೇಳನಕಾರಿ ಪದ ಬಳಕೆಗೆ ಇದೀಗ ಅಶ್ವಿನಿ ಪುನೀತ್ ರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲವರನ್ನು ಸಮಾನಾಗಿ ಸ್ವೀಕರಿಸಬೇಕು ಎಂದಿದ್ದಾರೆ.
ಗಜಪಡೆ ಹೆಸರಿನ ಟ್ವಿಟರ್ ಖಾತೆ ಮೂಲಕ ವ್ಯಕ್ತಿಯೋರ್ವ ಅಶ್ವಿನಿ ಅವರ ಬಗ್ಗೆ ತುಂಬಾನೇ ಕೀಳುಮಟ್ಟದ ಪದ ಬಳಕೆ ಮಾಡಿದ್ದ. ಇದು ದರ್ಶನ್ ಅಭಿಮಾನಿಯ ಖಾತೆ ಎಂದು ಹೇಳಲಾಗುತ್ತಿದೆ. ಈ ವಿಚಾರ ತನಿಖೆ ಬಳಿಕವೇ ಗೊತ್ತಾಗಬೇಕಿದೆ. ಈಗ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಈ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ.
‘ಪಾಸಿಟಿವ್ ಮತ್ತು ನೆಗೆಟಿವ್ನ ಹೇಗೆ ತೆಗೆದುಕೊಳ್ಳುತ್ತಿರಿ’ ಎಂದು ಅಶ್ವಿನಿ ಅವರಿಗೆ ಪ್ರಶ್ನೆ ಮಾಡಲಾಗಿದೆ. ಇದಕ್ಕೆ ಅವರು ನೇರ ಉತ್ತರ ನೀಡಿದ್ದಾರೆ. ‘ಬೇರೆ ಆಯ್ಕೆ ಇಲ್ಲ. ಜೀವನ ಸಾಗಲೇಬೇಕು. ಎರಡನ್ನೂ ಸಮಾನವಾಗಿ ಸ್ವೀಕರಿಸುತ್ತೇನೆ’ ಎಂದಿದ್ದಾರೆ. ಈ ಮೂಲಕ ಸಾಕಷ್ಟು ಚರ್ಚೆ ಆದ ಘಟನೆಗೆ ಪರೋಕ್ಷವಾಗಿ ಅವರು ಉತ್ತರಿಸಿದ್ದಾರೆ.
ಪಿಆರ್ಕೆ ಅಡಿಯಲ್ಲಿ ಸಿದ್ಧವಾಗುತ್ತಿದ್ದ ಸಿನಿಮಾಗಳಿಗೆ ಪುನೀತ್ ಅವರು ಕಥೆ ಕೇಳಿ ಫೈನಲ್ ಮಾಡುತ್ತಿದ್ದರು. ‘ಒ2’ ಚಿತ್ರದವರೆಗೂ ಅಪ್ಪು ಕಥೆಯನ್ನು ಕೇಳಿದ್ದರು. ಇನ್ಮುಂದೆ ನನ್ನ ಮತ್ತು ನನ್ನ ಟೀಮ್ ನಿರ್ಧಾರ ಇರುತ್ತದೆ’ ಎಂದು ಅವರು ಹೇಳಿದ್ದಾರೆ.
ಇವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದವರ ವಿರುದ್ಧ ಈಗಾಗಲೇ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಆರ್ಸಿಬಿ ಸೋಲಿಗೆ ಅಶ್ವಿನಿ ಅವರೇ ಕಾರಣ ಎಂದು ನಿಂದಿಸಿದ ಅನಾಮಿಕ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.