ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಟ ಲೂಸ್ ಮಾದ ಖ್ಯಾತಿಯ ಯೋಗಿ ಇದೀಗ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅರುಣ್ ವಿಜಯ್ ನಾಯಕನಾಗಿ ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ಯೋಗಿ ಪ್ರಮುಖ ಪಾತ್ರವೊಂದನ್ನು ಮಾಡಲಿದ್ದಾರೆ.
ಈ ಚಿತ್ರವನ್ನು ತಿರುಕುಮಾರನ್ ನಿರ್ದೇಶನ ಮಾಡುತ್ತಿದ್ದಾರೆ. ನಟ ಯೋಗಿ ತಮ್ಮ 50ನೇ ಚಿತ್ರದ ಮೂಲಕ ಸದ್ದು ಮಾಡುತ್ತಿದ್ದಾರೆ. ‘ರೋಸಿ’ ಸಿನಿಮಾದಲ್ಲಿ ಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಶ್ರೀನಗರ ಕಿಟ್ಟಿ ಬೆನ್ನಲ್ಲೇ ಇದೀಗ ಒರಟ ಪ್ರಶಾಂತ್ ಕೂಡ ‘ರೋಸಿ’ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ‘ರೋಸಿ’ ಚಿತ್ರದಲ್ಲಿ ಸಖತ್ ರಗಡ್ ಆಗಿ ಪ್ರಶಾಂತ್ ಕಾಣಿಸಿಕೊಂಡಿದ್ದಾರೆ.
ಒರಟ ಪ್ರಶಾಂತ್ ಮಾಡುತ್ತಿರುವ ಪಾತ್ರದ ಹೆಸರು ಸ್ವಾಮಿ ಅಣ್ಣ ಎಂದು. ಚಿತ್ರತಂಡ ಒರಟ ಪ್ರಶಾಂತ್ ಅವರ ಪಾತ್ರವನ್ನು ಪೋಸ್ಟರ್ ಮೂಲಕ ಪರಿಚಯಿಸಿದ್ದಾರೆ. ಇದರಲ್ಲಿ ಖಡಕ್ & ಮಾಸ್ ಪಾತ್ರದ ಮೂಲಕ ಅವರು ಗಮನ ಸೆಳೆದಿದ್ದಾರೆ. ಈ ಸಿನಿಮಾ ಬಗ್ಗೆ ಇರುವ ನಿರೀಕ್ಷೆ ಈಗ ಹೆಚ್ಚಾಗಿದೆ. ಒರಟನ ನಯಾ ಅವತಾರ ಫ್ಯಾನ್ಸ್ಗೆ ಖುಷಿ ಕೊಟ್ಟಿದೆ.
ಶೂನ್ಯ ನಿರ್ದೇಶನದಲ್ಲಿ ‘ರೋಸಿ’ ಚಿತ್ರ ರೆಡಿಯಾಗಲಿದ್ದು, ಇದು ಪಕ್ಕಾ ಗ್ಯಾಂಗ್ಸ್ಟರ್ ಸಿನಿಮಾವಾಗಿದೆ. ಒರಟ ಪ್ರಶಾಂತ್ ನಮ್ಮ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸ್ವಾಮಿ ಅಣ್ಣ ಎಂಬುದು ಅವರ ಪಾತ್ರದ ಹೆಸರು. ಈ ಸಿನಿಮಾದಲ್ಲಿ ಇನ್ನೂ ಎರಡು ಮುಖ್ಯ ಪಾತ್ರಗಳಿದ್ದು, ಸದ್ಯದಲ್ಲೇ ಈ ಬಗ್ಗೆ ಮಾಹಿತಿ ನೀಡುವುದಾಗಿ ನಿರ್ದೇಶಕರು ಹೇಳಿದ್ದಾರೆ.