ಇಸ್ರೇಲ್ನ ಯಾವುದೇ ದೂತಾವಾಸಗಳು ಇನ್ನು ಮುಂದೆ ಸುರಕ್ಷಿತವಾಗಿರುವುದಿಲ್ಲ ಎಂದು ಇರಾನ್ನ ಉನ್ನತ ರಕ್ಷಣಾ ಸಲಹೆಗಾರ ರಹೀಮ್ ಸಫಾವಿ ಎಚ್ಚರಿಕೆ ನೀಡಿದ್ದಾರೆ.
ಕಳೆದ ವಾರ ದಮಾಸ್ಕಸ್ನಲ್ಲಿ ಇರಾನ್ ದೂತಾವಾಸದ ಮೇಲೆ ನಡೆದ ದಾಳಿಯಲ್ಲಿ ಇರಾನ್ ರೆವೊಲ್ಯುಷನರಿ ಗಾಡ್ರ್ಸ್ನ ಉನ್ನತ ಕಮಾಂಡರ್ಗಳ ಸಹಿತ 12 ಮಂದಿ ಸಾವನ್ನಪ್ಪಿದ್ದರು.
ಈ ದಾಳಿಯನ್ನು ಇಸ್ರೇಲ್ ನಡೆಸಿದೆ ಎಂದು ದೂಷಿಸಿರುವ ಇರಾನ್, ಇದಕ್ಕೆ ಪ್ರತೀಕಾರ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿತ್ತು.
ನಮಗೆ ಯಾರೆಲ್ಲಾ ಹಾನಿ ಮಾಡುತ್ತಾರೋ ಅಥವಾ ಹಾನಿ ಮಾಡಲು ಪ್ರಯತ್ನಿಸುತ್ತಾರೋ ಅವರಿಗೆ ನಾವು ಹಾನಿ ಮಾಡುತ್ತೇವೆ. ಈ ಸಿದ್ಧಾಂತವನ್ನು ನಾವು ಸದಾಕಾಲ ಪಾಲಿಸುತ್ತಿದ್ದೇವೆ’ ಎಂದು ರಹೀಮ್ ಸಫಾವಿ ಹೇಳಿದ್ದಾರೆ.
ಭಾನುವಾರ ರವಿವಾರ ಟೆಹ್ರಾನ್ನಲ್ಲಿ ನಡೆದ ಸಂಪುಟ ಸಭೆಯಲ್ಲಿ ಅವರು ಮಾತನಾಡಿದರು. ಇರಾನ್ನ ಪರಮೋಚ್ಛ ಮುಖಂಡ ಅಯತೊಲ್ಲ ಆಲಿ ಖಾಮಿನೈ ಅವರ ಮಿಲಿಟರಿ ಸಲಹೆಗಾರರಾಗಿರುವ ಸಫಾವಿ ಅವರ ಹೇಳಿಕೆಯು `ಇರಾನ್ನ ದೂತಾವಾಸಕ್ಕೆ ನಡೆದ ದಾಳಿಗೆ ಅದೇ ರೀತಿಯಲ್ಲಿ ಉತ್ತರಿಸುವ’ ಸೂಚನೆಯನ್ನು ನೀಡಿದೆ ಎಂದು ವಿಶ್ಲೇಷಿಸಲಾಗಿದೆ.
ಈ ಮಧ್ಯೆ, ಗಾಝಾದ ಖಾನ್ಯೂನಿಸ್ ನಗರದಿಂದ ತನ್ನ 98ನೇ ಪ್ಯಾರಾಟ್ರೂಪರ್ ಘಟಕವನ್ನು ಹಿಂದಕ್ಕೆ ಕರೆಸಿಕೊಳ್ಳುವುದಾಗಿ ಇಸ್ರೇಲ್ ಘೋಷಿಸಿತ್ತು. ಇರಾನ್ನ ಸಂಭಾವ್ಯ ಪ್ರತಿದಾಳಿಗೆ ನಡೆಸುತ್ತಿರುವ ಸನ್ನದ್ಧತೆಗೆ ಪೂರಕವಾಗಿ ಇಸ್ರೇಲ್ ಈ ಕ್ರಮ ಕೈಗೊಂಡಿರುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ವರದಿಯಲ್ಲಿ ಉಲ್ಲೇಖಿಸಿವೆ.