ಕಳೆದ ಅಕ್ಟೋಬರ್ 7ರಂದು ಪ್ರಾರಂಭವಾದ ಇಸ್ರೇಲ್ ಮತ್ತು ಗಾಜಾ ನಡುವಿನ ಯುದ್ಧಕ್ಕೆ ಆರು ತಿಂಗಳು ಕಳೆದಿದೆ. ಘಟನೆಯಲ್ಲಿ ಇದುವರೆಗೂ 30 ಸಾವಿರಕ್ಕೂ ಅಧಿಕ ಸಾವುಗಳು ಸಂಭವಿಸಿವೆ.
ಅಕ್ಟೋಬರ್ 7ರ ಹಮಾಸ್ ದಾಳಿಯಲ್ಲಿ ಇಸ್ರೇಲ್ನ ಸುಮಾರು 1,200 ಪ್ರಜೆಗಳು ಮೃತಪಟ್ಟಿದ್ದು ಹಮಾಸ್ 250ಕ್ಕೂ ಅಧಿಕ ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.
ಗಾಜಾದ ಹಮಾಸ್ ಆರೋಗ್ಯ ಸಚಿವಾಲಯದ ಪ್ರಕಾರ, ಅಕ್ಟೋಬರ್ 7 ರ ಹಮಾಸ್ ದಾಳಿಗೆ ಇಸ್ರೇಲ್ ಪ್ಯಾಲೇಸ್ಟಿನಿಯನ್ ಭೂಪ್ರದೇಶದಲ್ಲಿ ಕನಿಷ್ಠ 33,175 ಜನರು ಸಾವನ್ನಪ್ಪಿದ್ದಾರೆ. ಈಜಿಪ್ಟ್ ಗಡಿಭಾಗದ ಸನಿಹದಲ್ಲಿರುವ ರಫಾ ನಗರದಲ್ಲಿ 1 ದಶಲಕ್ಷಕ್ಕೂ ಅಧಿಕ ಫೆಲೆಸ್ತೀನೀಯರು ಆಶ್ರಯ ಪಡೆದಿದ್ದು ಇದೀಗ ಈ ನಗರದ ಮೇಲೆ ದಾಳಿ ನಡೆಸಲು ಇಸ್ರೇಲ್ ಸಿದ್ಧತೆ ನಡೆಸುತ್ತಿರುವುದಾಗಿ ವರದಿಯಾಗಿದೆ.
ದಕ್ಷಿಣ ಇಸ್ರೇಲಿನಲ್ಲಿ ಹಮಾಸ್ ದಾಳಿಯು 1,170 ಇಸ್ರೇಲಿಗಳು ಮತ್ತು ವಿದೇಶಿಯರನ್ನು ಕೊಂದಿತು, ಅವರಲ್ಲಿ ಹೆಚ್ಚಿನವರು ನಾಗರಿಕರು, ಅಧಿಕೃತ ಇಸ್ರೇಲ್ ಪ್ರದೇಶದವರು ಎಂದು ತಿಳಿದು ಬಂದಿದೆ.
ಗಾಝಾದಲ್ಲಿ 6 ತಿಂಗಳಿಂದ ಮುಂದುವರಿದಿರುವ ಸಂಘರ್ಷವು ಇಸ್ರೇಲ್ನ ಅರ್ಥವ್ಯವಸ್ಥೆ ಹಾಗೂ ಮಿಲಿಟರಿ ವ್ಯವಸ್ಥೆಗೆ ಭಾರೀ ಹೊಡೆತ ನೀಡಿದೆ. ಇದೀಗ ಲೆಬನಾನ್ನಲ್ಲಿರುವ ಇರಾನ್ ಬೆಂಬಲಿತ ಹಿಜ್ಬುಲ್ಲಾಗಳಿಂದ ಹೆಚ್ಚಿನ ಅಪಾಯ ಎದುರಾಗಿರುವುದಾಗಿ ಇಸ್ರೇಲ್ನ ಭದ್ರತಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಮಧ್ಯೆ, ಎಪ್ರಿಲ್ 1ರಂದು ಸಿರಿಯಾ ರಾಜಧಾನಿ ದಮಾಸ್ಕಸ್ನಲ್ಲಿ ಇರಾನ್ ದೂತಾವಾಸ ಸಂಕೀರ್ಣದ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಇರಾನ್ನ ಸೇನಾಧಿಕಾರಿಗಳ ಹತ್ಯೆಗೆ ಇರಾನ್ ಪ್ರತೀಕಾರ ಕ್ರಮ ಕೈಗೊಳ್ಳುವ ಸಾಧ್ಯತೆಯ ಹಿನ್ನೆಲೆಯಲ್ಲಿ ಇಸ್ರೇಲ್ ಕಟ್ಟೆಚ್ಚರ ವಹಿಸಿದೆ.