ಬೆಂಗಳೂರು:-ಗಂಡಸರು ಕೆಲಸದ ಅರ್ಜೆಂಟ್ನಲ್ಲಿ ಅಡ್ಡಾದಿಡ್ಡಿ ಬೈಕ್ ಓಡಿಸಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋದನ್ನು ನೋಡಿದ್ದೇವೆ.. ಆದ್ರೆ ಇಲ್ಲೊಬ್ಬ ಮಹಿಳೆ ಆಕೆಗೆ ಕ್ಯಾಮರಾದಲ್ಲಿ ಸೆರೆಯಾಗುತ್ತೆ ಅಂತ ಗೊತ್ತಿದೆಯೋ ಗೊತ್ತಿಲ್ಲವೋ, ಪದೇ ಪದೇ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಾಳೆ.. ಕ್ಯಾಮರಾದಲ್ಲಿ ಸೆರೆಯಾದಂತೆ ಆಕೆ ಬರೋಬ್ಬರಿ 270 ಸಲ ಟ್ರಾಪಿಕ್ ರೂಲ್ಸ್ ಬ್ರೇಕ್ ಮಾಡಿದ್ದಾಳೆ
ಅಚ್ಚರಿ ಸಂಗತಿ ಎಂದರೆ ಈ ಕಿಲಾಡಿ ಲೇಡಿಯ ಸ್ಕೂಟರ್ ಬೆಲೆ 25 ಸಾವಿರ ರೂಪಾಯಿ. ಆದರೆ ಆಕೆ ಕಟ್ಟಬೇಕಾದ ದಂಡ ₹1,36,000 ಲಕ್ಷ ರೂಪಾಯಿ. ಸಿಗ್ನಲ್ ಜಂಪ್, ಒನ್ ವೇಗಳಲ್ಲಿ ನುಗ್ಗಿ ಇತರರಿಗೆ ತೊಂದರೆ ನೀಡುವ ಈ ಲೇಡಿ ಈಗ ಸಂಚಾರಿ ಪೊಲೀಸರ ಕಣ್ಣಿಗೆ ಕೊನೆಗೂ ಸೆರೆಸಿಕ್ಕಿದ್ದಾಳೆ.
ಸದಾ ರೂಲ್ಸ್ ಬ್ರೇಕ್ ಮಾಡಿ ಸಂಚಾರಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿರುವ ಮಹಿಳೆ ಸುಧಾಮನಗರದಲ್ಲಿ ಕಾಣಿಸಿಕೊಂಡಿದ್ದಾಳೆ. ಕೂಡಲೇ ಆಕೆಯ ವಾಹನದ ಫೋಟೋವನ್ನ ಪೊಲೀಸರು Xನಲ್ಲಿ ಹಂಚಿಕೊಂಡಿದ್ದಲ್ಲದೆ, ಟ್ಯಾಗ್ ಮಾಡಿದ್ದಾರೆ. ಜೊತೆಗೆ ದಂಡ ವಸೂಲಿಗೆ ಮನವಿ ಮಾಡಿದ್ದಾರೆ.