ಡಾ. ರಾಜ್ ಕುಮಾರ್ ಕುಟುಂಬದ ಕುಡಿ ಯುವರಾಜಕುಮಾರ್ ಹೊಸ ಸಿನಿಮಾದ ಮಹತ್ವದ ವಿಷಯಗಳು ಇಂದು ಅನಾವರಣಗೊಳ್ಳಲಿವೆ. ಕಳೆದ ಒಂದು ವರ್ಷದಿಂದ ಯುವನ ಸಿನಿಮಾದ ಕುರಿತು ನಾನಾ ಸುದ್ದಿಗಳು ಹರಿದಾಡಿತ್ತು. ಇಂದು ಸಂಜೆ ಅದಕ್ಕೆಲ್ಲಾ ತೆರೆ ಬೀಳಲಿದೆ.
ಕಳೆದ ಒಂದು ವರ್ಷದಿಂದ ಸಿನಿಮಾದ ಕುರಿತು ಯಾವುದೇ ಅಧಿಕೃತ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿರಲಿಲ್ಲ. ಇಂದು ಸಂಜೆ 6.55ಕ್ಕೆ ಹತ್ತು ಇವತ್ತು ಹಲವು ವಿಚಾರಗಳನ್ನು ಚಿತ್ರತಂಡ ಹಂಚಿಕೊಳ್ಳಲಿದೆ.
ದೊಡ್ಮನೆ ಕುಟುಂಬದ ಕುಡಿ ಯುವರಾಜಕುಮಾರ್ ನಟನೆಯ ಹೊಸ ಸಿನಿಮಾದ ಮುಹೂರ್ತ ಇಂದು ಸಂಜೆ 5.45 ಗಂಟೆಗೆ ಸುಬ್ರಮಣ್ಯ ದೇವಸ್ಥಾನದಲ್ಲಿ ಸಿಂಪಲ್ ಆಗಿ ನಡೆಯಲಿದೆ. ಆದರೆ, ಟೀಸರ್ ರಿಲೀಸ್ ಮಾತ್ರ ಅದ್ಧೂರಿಯಾಗಿ ಮಾಡುವುದಾಗಿ ಡಾ.ರಾಜ್ ಕುಟುಂಬದ ಅಭಿಮಾನಿಗಳು ಸದಸ್ಯರು ತಿಳಿಸಿದ್ದಾರೆ. ಹೊಸ ಸಿನಿಮಾದ ಮುಹೂರ್ತದ ನಂತರ ಟೀಸರ್ ರಿಲೀಸ್ ಮಾಡುವ ಪ್ಲ್ಯಾನ್ ಮಾಡಿದ್ದು, ಬೆಂಗಳೂರಿನ ಜೆ.ಪಿ ನಗರದ ಸಿದ್ದಲಿಂಗೇಶ್ವರ ಚಿತ್ರಮಂದಿರದಲ್ಲಿ ಸಂಜೆ 6.55ಕ್ಕೆ ಟೀಸರ್ ಬಿಡುಗಡೆಯಾಗಲಿದೆ. ಜೊತೆಗೆ ಸಿನಿಮಾದ ಟೈಟಲ್ ಕೂಡ ಅನೌನ್ಸ್ ಆಗಲಿದ್ದು, ಕುರುಬರಹಳ್ಳಿಯ ಡಾ.ರಾಜ್ ಪ್ರತಿಮೆಯ ಮುಂದೆಯೇ ಟೀಸರ್ ತೋರಿಸಲಾಗುತ್ತಿದೆ.
ಈ ಹಿಂದೆ ಸಿನಿಮಾದ ಟೀಸರ್ ಮತ್ತು ಟೈಟಲ್ ಲಾಂಚ್ ಅನ್ನು ಪುನೀತ್ ರಾಜ್ ಕುಮಾರ್ ಅವರ ಹುಟ್ಟು ಹಬ್ಬದಂದು ರಿಲೀಸ್ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಅಪ್ಪು ಹುಟ್ಟುಹಬ್ಬ 15 ದಿನ ಬಾಕಿ ಇರುವಾಗಲೇ ನಾಳೆಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಕಾರಣ ಅಂದು ಪುನೀತ್ ಪತ್ನಿ ಅಶ್ವಿನಿ ಅವರು ಲಭ್ಯವಿಲ್ಲ ಎನ್ನುವ ಮಾಹಿತಿಯೂ ಹರಿದಾಡುತ್ತಿದೆ. ಈ ಕಾರಣದಿಂದಾಗಿ ಮಾರ್ಚ್ 3ಕ್ಕೆ ಮುಹೂರ್ತ, ಟೈಟಲ್ ಮತ್ತು ಟೀಸರ್ ಲಾಂಚ್ ಮಾಡಲು ಸಂಸ್ಥೆ ಮುಂದಾಗಿದೆ.
ಈ ಸಿನಿಮಾ ಮೂಲಕ ಪುನೀತ್ ರಾಜಕುಮಾರ್ ಅವರ ಉತ್ತರಾಧಿಕಾರಿ ಎಂದೇ ಬಿಂಬಿಸಲಾಗುತ್ತಿರುವ ಯುವರಾಜಕುಮಾರ್ ಅಧಿಕೃತವಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ಬ್ಯಾನರ್ ನಲ್ಲಿ ಸಿನಿಮಾ ಮೂಡಿ ಬರಲಿದೆ. ಪುನೀತ್ ರಾಜಕುಮಾರ್ ಜೊತೆ ಒಳ್ಳೆಯ ಬಾಂಧವ್ಯ ಹಾಗೂ ಅವರ ಎರಡು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಸಂತೋಷ್ ಆನಂದ್ ರಾಮ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದರೆ, ನುರಿತ ತಂತ್ರಜ್ಞರ ತಂಡವೇ ಸಿನಿಮಾದಲ್ಲಿದೆ.