ನಾವು ಹೇಳುತ್ತಿರುವ ಈ ಮನೆಮದ್ದುಗಳನ್ನು ಅನುಸರಿಸುವುದರಿಂದ ಹಲ್ಲುಗಳ ಮೇಲಿನ ಹಳದಿ ಕೊಳೆ ಮಾಯವಾಗಿ ಬಿಳಿಯಾಗುತ್ತದೆ.
ಹಲ್ಲುಗಳಲ್ಲಿನ ಕುಳಿಗಳ ಜೊತೆಗೆ ಕೆಟ್ಟ ವಾಸನೆಯನ್ನು ಸಹ ಈ ಮನೆಮದ್ದುಗಳಿಂದ ನಿವಾರಸಿಬಹುದು.
ಹಲ್ಲುಗಳ ಮೇಲಿನ ಹಳದಿ ಕಲೆ ನಿವಾರಿಸಲು ಬೇವು ಉತ್ತಮ ಮಾರ್ಗವಾಗಿದೆ. ಈ ನೈಸರ್ಗಿಕ ಮೂಲಿಕೆಯನ್ನು ಹಲವು ವಿಧಗಳಲ್ಲಿ ಬಳಸಬಹುದು. ಬೇವು ನಿಮ್ಮ ಹಲ್ಲುಗಳಿಗೆ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಇದು ಉರಿಯೂತ, ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಆದ್ದರಿಂದ ಬಿಳಿ ಹೊಳೆಯುವ ಹಲ್ಲುಗಳನ್ನು ಪಡೆಯಲು ಹಳದಿ ಹಲ್ಲಿಗೆ ಬೇವನ್ನು ಬಳಸುವ ಕೆಲವು ವಿಧಾನಗಳು ಇಲ್ಲಿವೆ:
ಕಹಿಯಾದ ಬೇವಿನ ಎಲೆಗಳು ನಿಮ್ಮ ಒಸಡುಗಳಿಂದ ಪ್ಲೇಕ್ ಅನ್ನು ತೆಗೆದುಹಾಕಬಹುದು. ಈ ಬೇವು ಬಾಯಿಯ ದುರ್ವಾಸನೆಯನ್ನು ನಿವಾರಿಸಲು ಸಹ ಸಹಾಯ ಮಾಡುತ್ತದೆ. ಆದ್ದರಿಂದ ನೀವು ಈ ಬೇವಿನ ಎಲೆಗಳ ಪೇಸ್ಟ್ ಅನ್ನು ತಯಾರಿಸಿ, ಇದರಿಂದ ಹಲ್ಲುಗಳನ್ನು ಬ್ರಷ್ ಮಾಡಬಹುದು.
ಬೇವಿನ ತೊಗಟೆ: ಆರೋಗ್ಯಕರ ಹಲ್ಲುಗಳಿಗೆ ಬೇವಿನ ತೊಗಟೆಯನ್ನು ಜಗಿಯಿರಿ. ಇದು ಹಲ್ಲಿನ ಕಾಯಿಲೆಯ ವಿರುದ್ಧ ಹೋರಾಡುವುದು. ಇಂದು ಸಾಮಾನ್ಯ ಹಲ್ಲಿನ ಸಮಸ್ಯೆಯಾಗಿರುವ ಕುಳಿಗಳನ್ನು ತಡೆಯುತ್ತದೆ. ಈ ಬೇವಿನ ತೊಗಟೆ ಹಲ್ಲುಗಳ ಹಳದಿ ಕಲೆ ತೊಲಗಿಸಿ ಹೊಳೆಯುವಂತೆ ಮಾಡುತ್ತದೆ.
ಬೇವಿನ ಪುಡಿ: ಹಲ್ಲಿನ ಆರೋಗ್ಯಕ್ಕಾಗಿ ಭಾರತದಲ್ಲಿ ಬಳಸಲಾಗುವ ಅತ್ಯಂತ ಹಳೆಯ ವಿಧಾನಗಳಲ್ಲಿ ಇದು ಒಂದಾಗಿದೆ. ಒಸಡಿನ ಕಾಯಿಲೆಯನ್ನು ತಡೆಗಟ್ಟಲು ಮತ್ತು ನಿಮ್ಮ ಹಲ್ಲುಗಳನ್ನು ಬಿಳಿಯಾಗಿಸಲು ಬೇವಿನ ಪುಡಿಯಿಂದ ಹಲ್ಲುಜ್ಜಬೇಕು, ಇದು ಹಲ್ಲುಗಳನ್ನು ಸ್ವಚ್ಛಗೊಳಿಸಬಹುದು.
ಬೇವಿನ ಪುಡಿಯನ್ನು ಸಾಂಪ್ರದಾಯಿಕವಾಗಿ ಒಣಗಿದ ಬೇವಿನ ಎಲೆಗಳನ್ನು ರುಬ್ಬುವ ಮೂಲಕ ತಯಾರಿಸಲಾಗುತ್ತದೆ. ಒಂದು ಚಮಚ ಬೇವಿನ ಪುಡಿಯನ್ನು ಒಂದು ಚಮಚ ಅಡಿಗೆ ಸೋಡಾ ಮತ್ತು ನೀರಿನೊಂದಿಗೆ ಮಿಶ್ರಣ ಮಾಡಿದರೆ ಬೇವಿನ ಟೂತ್ ಪೇಸ್ಟ್ ಸಿದ್ಧವಾಗುತ್ತದೆ. ಹೊಳೆಯುವ ಮತ್ತು ಸ್ವಚ್ಛವಾದ ಹಲ್ಲುಗಳನ್ನು ಪಡೆಯಲು ಈ ಮನೆಯಲ್ಲಿ ತಯಾರಿಸಿದ ಟೂತ್ ಪೇಸ್ಟ್ ನಿಂದ ಬ್ರಷ್ ಮಾಡಿ.