ಸಿಎಂ ಸಿದ್ದರಾಮಯ್ಯ ರಾಜಧಾನಿಯಲ್ಲಿ 2ನೇದಿನವೂ ಕಾಂಗ್ರೆಸ್ ಅಭ್ಯರ್ಥಿಗಳ ಪರ ಭರ್ಜರಿ ರೋಡ್ ಶೋ ನಡೆಸಿದ್ರು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕೈ ಅಭ್ಯರ್ಥಿ ಸೌಮ್ಯ ರೆಡ್ಡಿಪರ ಕ್ಯಾಂಪೇನ್ ಮಾಡಿದ್ರು. ಜಯನಗರದ ರಾಗಿಗುಡ್ಡ 1st ಬ್ಲಾಕ್ ನಿಂದ ಆರಂಭವಾದ ರೋಡ್ ಶೋ ಕಾರ್ಪೊರೇಷನ್ ಕಾಲೋನಿ, ಅರಸು ಕಾಲೋನಿ,
ಗುಂಡಪ್ಪ ಲೇಔಟ್, ಲಿಡ್ ಕರ್ ಹೊಸೂರು ರೋಡ್ಮೂಲಕ ಈಜೀಪುರ ಬಸ್ ಸ್ಟಾಂಡ್ ನಲ್ಲಿರೋಡ್ ಶೋ ಅಂತ್ಯವಾಯ್ತು. ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಬೆಂಗಳೂರಿನ ಬಿಜೆಪಿ ಸಂಸದರು, ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ರು. ಪ್ರಧಾನಿ ಮೋದಿ ಕಳೆದ 10 ವರ್ಷಗಳಲ್ಲಿ ಹೇಳಿದ ಯಾವುದನ್ನೂ ಜಾರಿ ಮಾಡಿಲ್ಲ, ಕಪ್ಪು ಹಣ ತರಲಿಲ್ಲ,
ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸಲಿಲ್ಲ, ಪೆಟ್ರೋಲ್, ಡೀಸೆಲ್, ಗ್ಯಾಸ್ ಹೆಚ್ಚಾಗ್ತಾನೆ ಇದೆ ಹಿಂದುತ್ವ ಅಂತ ಜನರಲ್ಲಿ ಕೋಮುದ್ವೇಶ ಸೃಷ್ಟಿಮಾಡ್ತಿದ್ದಾರೆ. ರಾಜ್ಯದ ಸಂಸದರು ಏನು ಕೆಲಸ ಮಾಡಿಲ್ಲ ನಮ್ಮನ್ನು ನೋಡಬೇಡಿ ಮೋದಿ ಮುಖ ನೋಡಿ ಓಟು ಹಾಕಿ ಅಂತ ಬೇಡ್ತಿದ್ದಾರೆ. ನೀವ್ಯಾರು ಬಿಜೆಪಿಗೆ ಓಟು ಹಾಕಬಾರದು ಕಾಂಗ್ರೆಸ್ ಗೆ ಓಟು ಹಾಕು ದೇಶವನ್ನು ಉಳಿಸಿ ಅಂತ ಕರೆ ನೀಡಿದ್ರು ಸಿಎಂ.