ರಾಜ್ಯಕ್ಕೆ ಬಿಸಿಲಿನ ಶಾಖ ಹೆಚ್ಚಾಗುತ್ತಿದ್ದು, ಜನರು ಕಂಗಾಲಾಗುತ್ತಿದ್ದಾರೆ. ರಣ ಬಿಸಿಲಿನ ಮಧ್ಯೆ ಜನರಿಗೆ ನೀರಿನ ಹಾಹಾಕಾರ ಕೂಡ ಉಂಟಾಗಿದೆ. ಇದರ ಮಧ್ಯೆ ಈಗ ಕಾಲರಾ ಆತಂಕ ಜನರನ್ನು ಕಾಡುತ್ತಿದೆ.ನಗರದಲ್ಲಿ ಕಾಲರಾ ಸೋಂಕು ಹರಡುತ್ತಿದ್ದಂತೆಯೇ ಈ ವಿಷಯಕ್ಕೆ ಸಂಬಂಧಿಸಿದಂತೆ ಹೋಟೆಲ್ ಮತ್ತು ಬೀದಿಬದಿ ವ್ಯಾಪಾರಿಗಳ ನಡುವೆ ವಾಕ್ಸಮರ ಪ್ರಾರಂಭವಾಗಿದೆ. ಇದರ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್..
ಯೆಸ್., ಕೆಲವು ದಿನಗಳ ಹಿಂದಷ್ಟೇ ಪಾನಿಪುರಿ ತಿಂದು ಮಕ್ಕಳ ಆರೋಗ್ಯ ಹದಗೆಟ್ಟ ಪ್ರಕರಣ ನಡೆದಿತ್ತು. ನಗರದಲ್ಲಿ ಅಧಿಕೃತವಲ್ಲದ ಸಾವಿರಾರು ಬೀದಿ ಬದಿ ವ್ಯಾಪಾರಿಗಳು ಅಂಗಡಿ ನಡೆಸುತ್ತಿದ್ದಾರೆ. ಬೀದಿಬದಿಯಲ್ಲಿ ಸಿಲಿಂಡರ್ ಇಟ್ಟು ಕೊಳ್ಳುವುದು ಸುರಕ್ಷತೆಯೂ ಅಲ್ಲ. ಸ್ವಚ್ಛತೆಯಿಲ್ಲದ ಸ್ಥಳದಲ್ಲಿ ಆಹಾರ ತಯಾರಿಸುವುದರಿಂದ ಕಾಲರಾ ಬಹುಬೇಗ ಹರಡಬಹುದು ಎಂದು ಹೊಟೆಲ್ ಮಾಲಿಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಆರೋಪಿಸಿದ್ದಾರೆ.
ಜೊತೆಗೆ, ನಗರದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ನಿಗಾ ವಹಿಸುವುದು ಪಾಲಿಕೆ ಹಾಗೂ ಆರೋಗ್ಯ ಇಲಾಖೆ ಜವಾಬ್ದಾರಿಯಾಗಿದ್ದು, ಈ ಕೂಡಲೇ ಬೀದಿ ಬದಿಯಲ್ಲಿ ತಿಂಡಿ ತಿನಿಸುಗಳನ್ನು ಮಾರಾಟ ಮಾಡುತ್ತಿರುವ ಅಂಗಡಿಗಳನ್ನು ಮುಚ್ಚಿಸಸಬೇಕೆಂದು ಅವರು ಆಗ್ರಹಿಸದ್ದಾರೆ.
ಬೀದಿ ಬದಿ ವ್ಯಾಪಾರಿಗಳು ಸ್ವಚ್ಛತೆಯ ಬಗ್ಗೆ ಗಮನ ಹರಿಸುವುದಿಲ್ಲ ಇದರಿಂದಲೇ ಕಾಲರಾ ಹರಡುತ್ತಿದೆ ಎಂದು ಹೋಟೆಲ್ ಮಾಲಿಕರು ಆರೋಪಿಸಿದ್ದರೆ, ಅದನ್ನು ಕೇಳಲು ನೀವ್ಯಾರು.ನಿಮ್ಮಲ್ಲಿಯೂ ಸಹ ಕೊಳಕು ಊಟ ತಿಂಡಿ ಸರಬರಾಜು ಮಾಡುತ್ತಿಲ್ಲವೇ ಎಂದು ಬೀದಿ ಬದಿ ವ್ಯಾಪಾರಿಗಳು ತಿರುಗೇಟು ನೀಡಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ , ಹೋಟೆಲ್ ಮಾಲೀಕರು ತಾನು ಕಳ್ಳ ಪರರ ನಂಬ ಎನ್ನುವಂತೆ ವರ್ತಿಸುತ್ತಿದ್ದಾರೆ. ಇರೋ ಬರೋ ಎಲ್ಲಾ ಗ್ರೇವಿಗೆ ಕಲರ್ ಹಾಕಿ ಕ್ಯಾನ್ಸರ್ ಹರಡಲು ಪ್ರಮುಖ ಕಾರಣವಾಗಿರುವ ಹೋಟೆಲ್ ಮಾಲಿಕರು ತಮ್ಮಲ್ಲೇ ಹುಳುವಿಟ್ಟು ಕೊಂಡು ನಮ್ಮತ್ತ ಬೊಟ್ಟು ಮಾಡುತ್ತಿದ್ದಾರೆ. ಬೀದಿ ಬದಿ ವ್ಯಾಪಾರಿಗಳಿಂದ ಕಾಲರಾ ಹರಡಿದರೆ ಅದನ್ನು ನೋಡಿಕೊಳ್ಳಲು ಆರೋಗ್ಯ ಇಲಾಖೆಯ ಅಧಿಕಾರಿಗಳಿದ್ದಾರೆ. ನಮ್ಮ ಬಗ್ಗೆ ಮಾತನಾಡಲು ಅವರು ಯಾರು ಎಂದು ಕಿಡಿಕಾರಿದ್ದಾರೆ.
ಒಟ್ಟಾರೆ, ಇಗಾಗಲೇ ಜನರು ನೀರಿನ ಬಗ್ಗೆ ಗಮನ ಕೊಡಬೇಕಾ! ಇಲ್ಲ ರಾಜ್ಯದಲ್ಲಿ ಕಾಲರಾ ಖಾಯಿಲೆ ಹೆಚ್ಚಾಗುತ್ತಿದ್ದು ಇದರ ಬಗ್ಗೆ ಯೋಚನೆ ಮಾಡಬೇಕ ಎಂದು ಕಂಫ್ಯೂಸ್ ಆಗಿದ್ರೆ, ಇದರ ನಡುವೆ ಹೋಟೆಲ್ ಮತ್ತು ಬೀದಿ ಬದಿ ವ್ಯಾಪಾರಿಗಳ ನಡುವೆ ನಾನಾ ನೀನ ಎಂದು ಸಮರ ಶುರುವಾಗಿದೆ. ಈ ಸಮರ ಎಲ್ಲಿ ಹೋಗಿ ತಲುಪುತ್ತದೆ ಎಂದು ಕಾದು ನೋಡಬೇಕಿದೆ..