ಹೂಸಕೋಟೆ:- ತಾಲ್ಲೂಕಿನ ಇತಿಹಾಸದಲ್ಲಿಯೇ ಮೊದಲ ಬಾರಿಗೆ 99 ಅಡಿಯ ಶ್ರೀ ಭದ್ರಕಾಳಮ್ಮ ದೇವಿಯ ಸೌಮ್ಯರೂಪ ವಿಗ್ರಹಕ್ಕೆ ಭೂಮಿ ಪೂಜೆ ನೆರವೇರಿಸಿದ ದೇವಾಲಯದ ಪ್ರಧಾನ ಅರ್ಚಕರಾದ ಶ್ರೀ ಕೆಬಿ ನಾಗರಾಜ ಶಾಸ್ತ್ರಿಗಳು.
ಹೊಸಕೋಟೆ ತಾಲ್ಲೂಕಿನ ಕಾಳಪ್ಪನಹಳ್ಳಿ ಗ್ರಾಮದ ಶ್ರೀ ಭದ್ರಕಾಳಿ, ಶ್ರೀ ಚೌಡೇಶ್ವರಿ ಮತ್ತು ಶ್ರೀ ಪ್ರತ್ಯಂಗಿರಾ ದೇವಿ ದೇವಾಲಯದ ಆವರಣದಲ್ಲಿ ಶ್ರೀ ಭದ್ರಕಾಳಮ್ಮನವರ ಸೌಮ್ಯ ರೂಪ 99 ಅಡಿ ವಿಗ್ರಹ ನಿರ್ಮಾಣಕ್ಕೆ 7 ವರ್ಷಗಳ ಸಂಕಲ್ಪವಿದ್ದು ಇಂದು ಇದು ನೆರವೇರಿದೆ. 7 ವರ್ಷಗಳ ಹಿಂದೆ ದೇವಿ ವಿಗ್ರಹ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲು ನಿರ್ಧಾರ ಮಾಡಿದ್ದು ಅಂದು ಅ ಸ್ಥಳದಲ್ಲಿ ಪ್ರತ್ಯಂಗಿರಾ ದೇವಿ ವಿಗ್ರಹ ಪ್ರತಿಷ್ಠಾಪನೆಯಾಯಿತು ಆದರೆ ಈಗ 99 ಅಡಿಯ ವಿಗ್ರಹಕ್ಕೆ ಸಂಕಲ್ಪವಾಗಿದೆ. ಇನ್ನೂ ಮೊದಲಿಗೆ ಪುಟ್ಟ ದೇವಾಲಯವಾಗಿದ್ದು ಈಗ ಬೃಹತ್ ಅಕಾರವಾಗಿ ಬೆಳೆದು ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಿಂದ ಹೆಚ್ಚಿನ ಭಕ್ತರನ್ನು ಒಳಗೊಂಡು ಭಕ್ತರು ಬೇಡಿದ ವರಗಳನ್ನು ನೀಡುತ್ತಾ ಬಂದಿದ್ದಾಳೆ.
ದೇವಿಯ ತೀರ್ಥ ಸ್ನಾನ ಮಾಡಿ 9 ದಿನಗಳ ಕಾಲ ಪೂಜೆ ಮಾಡಿ ಬೂದ ಕುಂಬಳಕಾಯಿ ದೀಪ ಹಚ್ಚಿದರೆ ಭಕ್ತರು ಬೇಡಿದ ವರಗಳನ್ನು ಕಲ್ಪಿಸುತ್ತಾಳೆ ಎಂಬುದು ಭಕ್ತರ ನಂಬಿಕೆಯಾಗಿದೆ.
ಇದೇ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿ ವಿವಿಧ ಹೋಮ ಸೇರಿದಂತೆ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು.