ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ನಟಿ ಬೃಂದಾ ಆಚಾರ್ಯ ಸ್ಟೈಲಿಶ್ ಆಗಿ ಫೋಟೋ ಶೂಟ್ ಮಾಡಿಸಿದ್ದು ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಟಿ ಹಳದಿ ಮೈ ಹಾಗೂ ಹಸಿರು ಬಾರ್ಡರ್ ನ ರೇಷ್ಮೆ ಸೀರೆಯುಟ್ಟು ಸ್ಟೈಲಿಷ್ ಜ್ಯೂಯಲ್ಸ್ ತೊಟ್ಟು ಕ್ಯಾಮರಾಗೆ ಸಖತ್ತಾಗೆ ಪೋಸ್ ಕೊಟ್ಟಿದ್ದಾರೆ.
ಬೃಂದಾ ಆಚಾರ್ಯ ನೆನಪಿರಲಿ ಪ್ರೇಮ್ ನಟನೆಯ ಪ್ರೇಮಂ ಪೂಜ್ಯಂ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟವರು.
ಬೃಂದಾ ಆಚಾರ್ಯ ಈ ವರ್ಷ ತೆರೆ ಕಂಡ ಸುಪ್ರಜಾ ಕೌಸಲ್ಯ ರಾಮ ಸಿನಿಮಾದಲ್ಲಿ ಶಿವಾಣಿ ಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.
ಸದ್ಯ ನಿರೂಪ್ ಬಂಡಾರಿ ನಟನೆಯ ಹೊಸ ಸಿನಿಮಾಗೆ ಬೃಂದಾ ನಾಯಕಿಯಾಗಿದ್ದಾರೆ. ಈ ಸಿನಿಮಾದಲ್ಲಿ ಬೃಂದಾ ಸೋಷಿಯಲ್ ಮೀಡಿಯಾ ಇನ್ಫ್ಯೂಲೆಷನರ್ ಪಾತ್ರ ಮಾಡಲಿದ್ದಾರೆ.
ಬೃಂದಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದೀಕ್ಷಿತ್ ಶೆಟ್ಟಿ ನಟನೆಯ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಸಿನಿಮಾಗೆ ಬೃಂದಾ ನಾಯಕಿ.
ರಾಮಾ ರಾಮಾ ರೇ ಖ್ಯಾತಿಯ ಸತ್ಯಪ್ರಕಾಶ್ ನಟಿಸಿ, ನಿರ್ದೇಶಿಸುತ್ತಿರುವ ಎಕ್ಸ್ & ವೈ ಸಿನಿಮಾದಲ್ಲೂ ಬೃಂದಾ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಶ್ರೇಯಸ್ ಮಂಜು ನಟನೆಯ, ಎಸ್. ನಾರಾಯಣ್ ನಿರ್ದೇಶನದ ಒಂದ್ಸಲ ಮೀಟ್ ಮಾಡೋಣ ಸಿನಿಮಾದಲ್ಲಿ ಬೃಂದಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.