ಬೆಂಗಳೂರು: ಸರ್ಕಾರಿ ನೌಕರರ ಸಂಬಳ ಏರಿಕೆ ಬೆನ್ನೆಲ್ಲೇ ಕೆಪಿಟಿಸಿಎಲ್ ನೌಕರರು ಸಿಡಿದೆದ್ದಿದ್ದು, ಪೇ ಸ್ಕೇಲ್ ಜಾರಿಗಾಗಿ ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರಿನ ಕಾವೇರಿ ಭವನ ಮುಂಭಾಗ ಮಧ್ಯಾಹ್ನವಾಗ್ತಿದ್ದಂತೆ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದಾರೆ. ಶೇ. 25 ರಷ್ಟು ಸಂಬಳ ಏರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಐದು ವರ್ಷಕ್ಕೊಮ್ಮೆ ಸಂಬಳ ಏರಿಕೆ ಆಗಬೇಕು. ಸದ್ಯ ಕೆಪಿಟಿಸಿಎಲ್ ನಿಂದ ಸಂಬಳ ಏರಿಕೆ ಆಗಿಲ್ಲ.
ಸರ್ಕಾರಿ ಅಧಿಕಾರಿಗಳಿಗೆ ನೌಕರರಿಗೆ ಸರ್ಕಾರ ಸಂಬಳ ಏರಿಕೆ ಮಾಡಿದೆ. ಆದ್ರೆ ಕೆಪಿಟಿಸಿಎಲ್ ನೌಕರರಿಗೆ ಸಂಬಳ ಏರಿಲ್ಲ. ಹೀಗಾಗಿ ನೌಕರರು ಕೆಲಸ ಸ್ಥಗಿತಗೊಳಿಸಿ ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. ಇನ್ನೂ ಇದೇ ವೇಳೆ KPTCL ನೌಕರರ ಸಂಘದ ಕಾರ್ಯದರ್ಶಿ ಬಲರಾಮ್ ಪ್ರತಿಕ್ರಿಯೆ ನೀಡಿ, ನಮಗೆ ವೇತನ ಹೆಚ್ಚಳ ಆಗಬೇಕು, ಅದುವರೆಗೂ ಹೋರಾಟ ಮಾಡ್ತೇವೆ. ಎಲ್ಲರಿಗೂ ಬೇಕಾದ ಹಾಗೆ ವೇತನ ಹೆಚ್ಚಳ ಮಾಡಿಕೊಡಲಾಗ್ತಿದೆ. ನಮಗೆ 22% ವೇತನ ಹೆಚ್ಚಳ ಮಾಡಬೇಕು ಅಂತ ಮನವಿ ಮಾಡಿದ್ದೇವೆ ನಿರ್ದೇಶಕರಿಗೆ ಈ ಬಗ್ಗೆ ಬರೆದು ಕೊಟ್ಟು ಮನವಿ ಮಾಡಿದ್ದೇವೆ ಎಂದು ಹೇಳಿದ್ದಾರೆ.