ಬೆಂಗಳೂರು:– ಇಂದು ರಂಜನ್ ಆಚರಣೆ ಹಿನ್ನೆಲೆ ಚಾಮರಾಜಪೇಟೆಯ ಈದ್ಗಾ ಮೈದಾನ ಫುಲ್ ಆಲರ್ಟ್ ಘೋಷಿಸಲಾಗಿದೆ.
ಬೆಳಗ್ಗಿನ ಜಾವ ೬:೩೦ ರಿಂದಲ್ಲೇ ಪೊಲೀಸರ ಸರ್ಪ ಕಾವಲಿನಲ್ಲಿ ಈದ್ಗಾ ಮೈದಾನ ಇದ್ದು, ನಮಾಝ್ ಮಾಡಲು ಸಾವಿರಾರು ಮುಸ್ಲಿಂ ಜನಗಳು ಅಲ್ಲಿ ಸೇರಲಿದ್ದಾರೆ. ಹೀಗಾಗಿ ಯಾವುದೆ ತೊಂದರೆಯಾಗದಂತೆ ನೋಡಿಕೊಳ್ಳಲು ಖಾಕಿ ಬಂದೋಬಸ್ತ್ ಕೈಗೊಂಡಿದೆ.
121ಟ್ರಾಫಿಕ್ ಪೊಲೀಸರು, 500ಕ್ಕೂ ಹೆಚ್ಚು ಪೊಲೀಸರು ನಿಯೋಜನೆ ಮಾಡಲಾಗಿದೆ. ೯ ಗಂಟೆಗೆ ನಮಾಜ್ ಪ್ರಾರಂಭ ಆಗಲಿದ್ದು, ಮೈದಾನದ ಸುತ್ತ ಪೊಲೀಸರು ಬ್ಯಾರಿಗೇಟ್ ಹಾಕಿದ್ದಾರೆ.
ಒಬ್ಬೊಬ್ಬರಾಗಿಯೇ ಮೈದಾನದ ಬಳಿ ಮುಸ್ಲಿಂರು ಸೇರಿಕೊಳ್ಳುತ್ತಿದ್ದಾರೆ. ಇನ್ನೂ ಈದ್ ಹಿನ್ನೆಲೆ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಜನರು ಸೇರುವ ಸಾಧ್ಯತೆಗಳಿವೆ. ಈ ಹಿನ್ನಲೆ ಸಂಚಾರ ದಟ್ಟಣೆಯಾಗದಂತೆ ಪೊಲೀಸರು ಎರಡು ಪ್ರಮುಖ ರಸ್ತೆಗಳಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಿದ್ದಾರೆ.
ಟೌನ್ ಹಾಲ್ ಟು ಮೈಸೂರು ರಸ್ತೆ ಕಡೆಗೆ ಮತ್ತು ಕೆಂಗೇರಿ ಟು ಮಾರ್ಕೆಟ್ ಬರುವ ರಸ್ತೆಯಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ ಏಳು ಗಂಟೆಯಿಂದ ಹನ್ನೆರಡು ಗಂಟೆಯವರೆಗೆ ಮಾತ್ರ ಈ ಬದಲಾವಣೆ ಇರಲಿದೆ.