ಬೆಂಗಳೂರು:- 2024 ರ ಲೋಕಸಭಾ ಚುನಾವಣೆಗೆ ದಿನಗಣನೆ ಹಿನ್ನೆಲೆ ಮತದಾರರನ್ನ ಸೆಳೆಯಲು ರಾಜಕೀಯ ಪಕ್ಷಗಳಿಂದ ಭರ್ಜರಿ ಪ್ರಚಾರ ನಡೆದಿದ್ದು, ಚುನಾವಣೆ ಗೆಲ್ಲಲು ಸಾರ್ವಜನಿಕರಿಗೆ ವಿವಿಧ ಗ್ಯಾರೆಂಟಿಗಳ ಆಶ್ವಾಸನೆ ನೀಡಿದ್ದಾರೆ.
ಆದ್ರೆ ಕಾಂಗ್ರೆಸ್ ಪಕ್ಷದ ವಾಗ್ದಾನ ವಿರುದ್ದ ಜನತೆ ಮಾತ್ರ ಕೆಂಡಕಾರಿದ್ದಾರೆ. 9ರಿಂದ 12ನೇ ತರಗತಿ ಮಕ್ಕಳಿಗೆ ಉಚಿತ ಮೊಬೈಲ್ ವಿತರಣೆ ಬಗ್ಗೆ ಕಾಂಗ್ರೆಸ್ ವಾಗ್ದಾನ ಮಾಡಿದ್ದು, ಈ ವಾಗ್ದಾನಾದ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.
ಇದು ಮಕ್ಕಳ ಭವಿಷ್ಯವನ್ನ ಹಾಳುಮಾಡುವ ವಾಗ್ದಾನ ಎಂದು ಟೀಕೆ ಮಾಡಿದ್ದು, ಈಗಾಗಲೇ ಮೊಬೈಲ್ ನಿಂದ ಮಕ್ಕಳ ಭವಿಷ್ಯ ಹಾಳಾಗ್ತಿದೆ, ಶಿಕ್ಷಣಕ್ಕೆ ಮಾರಕವಾದ ಪರಿಸ್ಥಿತಿ ಎದುರಾಗಿದೆ. ಇದರ ಬೆನ್ನಲ್ಲೆ ಕಲಿಕೆ ಹೆಸರಿನಲ್ಲಿ ಮೊಬೈಲ್ ಕೊಡುವ ಗ್ಯಾರೆಂಟಿ ಘೋಷಣೆ ಬೇಕಿತ್ತಾ ಎಂದು ಪ್ರಶ್ನೆ ಮಾಡಿದ್ದಾರೆ. ಬಿಟ್ಟಿ ಭಾಗ್ಯಗಳ ನಡುವೆ ಮೊಬೈಲ್ ಭಾಗ್ಯ ಓದುವ ಮಕ್ಕಳ ಭವಿಷ್ಯಕ್ಕೆ ಬೆಂಕಿ ಇಟ್ಟಂತೆ ಎಂದು ವ್ಯಾಪಕ ಟೀಕೆ ಮಾಡುತ್ತಿದ್ದಾರೆ.