ರಂಜಾನ್ ಹಬ್ಬದ ಪ್ರಯುಕ್ತ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಸಚಿವ ಜಮೀರ್ ಅಹ್ಮದ್ ಅವರು ಪ್ರಾರ್ಥನೆ ಸಲ್ಲಿಸಿದ್ದಾರೆ.
ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ ತಮ್ಮ ಮಗ ಹಾಗೂ ಸಿನಿಮಾ ನಟ ಜೈದ್ ಖಾನ್ ಅವರೊಂದಿಗೆ ಹಬ್ಬದ ನಮಾಜ್ ನಲ್ಲಿ ಭಾಗಿಯಾಗಿದರು. ಸಚಿವನಿಗೆ ಕೆಲ ಅಭಿಮಾನಿಗಳ ಜೊತೆ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ ಸಹ ಹಬ್ಬದ ಶುಭಾಷಯಗಳನ್ನು ಹೇಳಿದರು.
ಈ ಬಾರಿ ರಂಜಾನ್ ಹಬ್ಬ ಕಡು ಬೇಸಿಗೆಯಲ್ಲಿ ಬಂದಿರುವುದರಿಂದ ಈದ್ಗಾ ಮೈದಾನದಲ್ಲಿ ಜನ ನೆರಳಿರುವ ಕಡೆ ಸೇರಲು ಪ್ರಯತ್ನಿಸುತ್ತಿದ್ದಿದ್ದು ಸಾಮಾನ್ಯ ದೃಶ್ಯವಾಗಿತ್ತು.