ಬಾಲಿವುಡ್ ನಟಿ, ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಮಹಾರಾಷ್ಟ್ರದ ಮಾಜಿ ಸಿಎಂ ಸುಶಿಲ್ ಕುಮಾರ್ ಶಿಂದೆ ಮೊಮ್ಮಗ ಶಿಖರ್ ಪಹರಿಯಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.
ಜಾನ್ವಿ ಹಾಗೂ ಶಿಖರ್ ಜೋಡಿ ಆಗಾಗ ಸಾರ್ವಜನಿಕವಾಗಿ ಸುತ್ತಾಟ ನಡೆಸುತ್ತಾರೆ. ಆದರೆ, ಇಷ್ಟು ದಿನ ಈ ವಿಚಾರದಲ್ಲಿ ಜಾನ್ವಿ ಮೌನ ತಾಳಿದ್ದ ಜಾನ್ವಿ ಇದೀಗ ಸಾರ್ವಜನಿಕವಾಗಿ ತಮ್ಮ ಪ್ರೀತಿಯನ್ನು ಹೇಳಿಕೊಂಡಿದ್ದಾರೆ.
ಶಿಖರ್ ಜೊತೆಗಿನ ಪ್ರೀತಿಯ ಬಗ್ಗೆ ಜಾನ್ವಿ ಕಪೂರ್ ಅವರ ಮೌನ ಅನೇಕರಿಗೆ ಬೇಸರ ತರಿಸಿತ್ತು. ಅವರು ಸಾರ್ವಜನಿಕವಾಗಿ ಈ ಬಗ್ಗೆ ಮಾತನಾಡಲಿ ಎಂದು ಎಲ್ಲರೂ ಅಂದುಕೊಂಡಿದ್ದರು. ಕೊನೆಗೂ ಜಾನ್ವಿ ಈ ಬಗ್ಗೆ ಮಾತನಾಡಿದ್ದಾರೆ.
ಇತ್ತೀಚೆಗೆ ಬೋನಿ ಕಪೂರ್ ನಿರ್ಮಾಣದ, ಅಜಯ್ ದೇವಗನ್ ನಟನೆಯ ‘ಮೈದಾನ್’ ಸಿನಿಮಾ ರಿಲೀಸ್ ಆಗಿದೆ. ಇದರ ಸ್ಪೆಷಲ್ ಶೋಗೆ ಜಾನ್ವಿ ಕಪೂರ್ ತೆರಳಿದ್ದರು. ಈ ವೇಳೆ ಜಾನ್ವಿ ಧರಿಸಿದ್ದ ಚೈನ್ ಗಮನ ಸೆಳೆದಿದೆ.
ಕತ್ತಿನಲ್ಲಿರುವ ಚೈನ್ ಮೇಲೆ ‘ಶಿಖು’ ಎಂದು ಬರೆದುಕೊಂಡಿದೆ. ಇದನ್ನು ನೋಡಿದ ಅನೇಕರು ಜಾನ್ವಿ ಪ್ರೀತಿ ವಿಚಾರ ಒಪ್ಪಿಕಂಡರು ಎಂದು ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ ಈ ಜೋಡಿ ಒಟ್ಟಾಗಿ ತಿರುಪತಿಗೆ ತೆರಳಿತ್ತು.
ಮಹಾರಾಷ್ಟ್ರ ಮಾಜಿ ಸಿಎಂ ಸುಶಿಲ್ ಕುಮಾರ್ ಶಿಂದೆ ಅವರ ಮೊಮ್ಮೊಗ ಶಿಖರ್ ಪಹಾರಿಯಾ. ಇಬ್ಬರೂ ಪ್ರೀತಿಯಲ್ಲಿ ಇದ್ದರು. ನಂತರ ಬ್ರೇಕಪ್ ಆಯಿತು. ಈಗ ಮತ್ತೆ ಪ್ಯಾಚಪ್ ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ಜಾನ್ವಿ ಶಿಖರ್ ತಾಯಿಯ ಜೊತೆ ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲದೆ ಜಾನ್ವಿ ತಂದೆ ಬೋನಿ ಕಪೂರ್ ಕೂಡ ಶಿಖರ್ ಜೊತೆ ಉತ್ತಮ ಬಾಂದವ್ಯ ಹೊಂದಿರುವುದಾಗಿ ಹೇಳಿದ್ದಾರೆ.