ಹೆಲ್ತಿ ಬ್ರೇಕ್ ಫಾಸ್ಟ್ ಗೆ ರಾಗಿ ಪೂರಿ ಬೆಸ್ಟ್ ತಿಂಡಿ ಎಂದರೆ ತಪ್ಪಾಗಲಾರದು. ಡಿಫರೆಂಟ್ ಆಗಿ ಇರುವುದರ ಜೊತೆಗೆ ಮನೆಮಂದಿಯ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬಹುದು. ಇನ್ನೂ ರಾಗಿ ಪೂರಿಗೆ ಬೆಸ್ಟ್ ಕಾಂಬಿನೇಷನ್ ಅಂದರೆ ಆಲೂಗಡ್ಡೆ ಸಾಗು. ಈ ಎರಡರ ಕಾಂಬಿನೇಷನ್ ನಾಲಿಗೆಗೆ ಸಿಕ್ಕಾಪಟ್ಟೆ ರುಚಿ ನೀಡುತ್ತದೆ. ಹಾಗಾದ್ರೆ ರಾಗಿ ಹಿಟ್ಟಿನಲ್ಲಿ ಪೂರಿ ಹಾಗೂ ಆಲೂಗಡ್ಡೆ ಸಾಗು ಮಾಡುವುದು ಹೇಗೆಂದು ನೋಡೋಣ.
ರಾಗಿಹಿಟ್ಟಿನ ಪೂರಿ ಮಾಡಲು ಬೇಕಾಗುವ ಸಾಮಾಗ್ರಿಗಳು;-
ರಾಗಿಹಿಟ್ಟು – ಅರ್ಧ ಕಪ್
ಗೋಧಿಹಿಟ್ಟು – ಅರ್ಧ ಕಪ್
ಸಣ್ಣ ರವೆ – ಕಾಲು ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಕರಿಯಲು ಅಗತ್ಯವಿರುವಷ್ಟು
ರಾಗಿಹಿಟ್ಟಿನ ಪೂರಿ ಮಾಡುವ ವಿಧಾನ
ಮೊದಲಿಗೆ ಒಂದು ಅಗಲವಾದ ಬೌಲ್ ತೆಗೆದುಕೊಂಡು ಅರ್ಧ ಕಪ್ ರಾಗಿಹಿಟ್ಟು, ಅರ್ಧ ಕಪ್ ಗೋಧಿಹಿಟ್ಟು, ಕಾಲು ಕಪ್ ಸಣ್ಣ ರವ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಎಲ್ಲವನ್ನು ಮಿಕ್ಸಿ ಮಾಡಿಕೊಳ್ಳಬೇಕು.
ಇದಕ್ಕೆ ಸ್ವಲ್ಪ ಸ್ವಲ್ಪ ನೀರನ್ನು ಬೆರೆಸುತ್ತಾ ಚೆನ್ನಾಗಿ ಮಿಕ್ಸ್ ಮಾಡಿ ಪೂರಿ ಹಿಟ್ಟಿನ ಹದಕ್ಕೆ ಮಿಶ್ರಣ ರೆಡಿ ಮಾಡಿಕೊಳ್ಳಬೇಕು. ಪೂರಿ ಹಿಟ್ಟಿನ ಮೇಲೆ 1 ಟೀ ಸ್ಪೂನ್ ಎಣ್ಣೆ ಸವರಿ ತಟ್ಟೆ ಮುಚ್ಚಿ 10 ನಿಮಿಷಗಳ ಕಾಲ ಬಿಡಬೇಕು.
10 ನಿಮಿಷದ ಬಳಿಕ ರಾಗಿ ಪೂರಿಹಿಟ್ಟನ್ನು ಮತ್ತೊಮ್ಮೆ ಚೆನ್ನಾಗಿ ಮೃದುವಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಹಿಟ್ಟನ್ನು ಸ್ವಲ್ಪ ಸ್ವಲ್ಪ ತೆಗೆದುಕೊಂಡು ಉಂಡೆ ಮಾಡಿ ಗೋಧಿಹಿಟ್ಟು ಸ್ವಲ್ಪ ಹಾಕಿಕೊಂಡು ಲಟ್ಟಿಸಿಕೊಳ್ಳಬೇಕು.
ಸ್ಟೌವ್ ಮೇಲೆ ಬಾಣಲಿ ಇಟ್ಟು ಬಾಣಲಿಗೆ ಕರಿಯಲು ಅಗತ್ಯವಿರುವಷ್ಟು ಎಣ್ಣೆ ಹಾಕಿಕೊಳ್ಳಬೇಕು. ಎಣ್ಣೆ ಕಾದ ಬಳಿಕ ರಾಗಿ ಪೂರಿಯನ್ನು ಎರಡೂ ಕಡೆ ಕರಿಯಬೇಕು. ಕರಿದ ಪೂರಿಯನ್ನು ಸರ್ವಿಂಗ್ ಪ್ಲೇಟ್ ನಲ್ಲಿ ಇಟ್ಟರೆ ಬಿಸಿಬಿಸಿ ಹೆಲ್ತಿ ರಾಗಿ ಪೂರಿ ತಿನ್ನಲು ರೆಡಿಯಾಗುತ್ತದೆ.
ಆಲೂಗಡ್ಡೆ ಸಾಗುಗೆ ಬೇಕಾಗುವ ಸಾಮಾಗ್ರಿಗಳು
ಆಲೂಗಡ್ಡೆ – 2
ಹಸಿಮೆಣಸಿನಕಾಯಿ – 3
ಈರುಳ್ಳಿ – 2
ಟೊಮೆಟೋ -1
ಕೊತ್ತಂಬರಿಸೊಪ್ಪು – ಸ್ವಲ್ಪ
ಅರಿಶಿಣಪುಡಿ – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 2 ಟೀ ಸ್ಪೂನ್
ಜೀರಿಗೆ – 1 ಟೀ ಸ್ಪೂನ್
ಸಾಸಿವೆ – 1 ಟೀ ಸ್ಪೂನ್
ಕರಿಬೇವು – ಸ್ವಲ್ಪ
ದನಿಯಾಪುಡಿ – ಅರ್ಧ ಟೀ ಸ್ಪೂನ್
ನಂತರ ಇದಕ್ಕೆ ಸಣ್ಣಗೆ ಹಚ್ಚಿರುವ ಟೊಮೆಟೋವನ್ನು ಸೇರಿಸಿ ಸ್ವಲ್ಪ ಉಪ್ಪು, ಅರ್ಧ ಟೀ ಸ್ಪೂನ್ ದನಿಯಾಪುಡಿ ಹಾಕಿ ಟೊಮೆಟೋ ಮೆತ್ತಗೆ ಆಗುವವರೆಗೂ ಬೇಯಿಸಿಕೊಳ್ಳಬೇಕು. ನಂತರ ಇದಕ್ಕೆ ಮ್ಯಾಶ್ ಮಾಡಿರುವ ಆಲೂಗಡ್ಡೆಯನ್ನು ಸೇರಿಸಿ ಮಿಕ್ಸ್ ಮಾಡಿ ಸ್ವಲ್ಪ ನೀರನ್ನು ಹಾಕಿ ಕುದಿಸಿಕೊಳ್ಳಬೇಕು.
5 ನಿಮಿಷ ಸಾಗುವನ್ನು ಕುದಿಸಿ ಕೊನೆಯಲ್ಲಿ ಸಣ್ಣದಾಗಿ ಹಚ್ಚಿರುವ ಕೊತ್ತಂಬರಿಸೊಪ್ಪನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. ಸ್ಟೌವ್ ಆಫ್ ಮಾಡಿ ಆಲೂಗಡ್ಡೆ ಸಾಗುವನ್ನು ಬೌಲ್ ಗೆ ತೆಗೆದುಕೊಂಡರೆ ಹೆಲ್ತಿ ರಾಗಿ ಪೂರಿ ಜೊತೆಗೆ ಬೆಸ್ಟ್ ಕಾಂಬಿನೇಷನ್ ತಿನ್ನಲು ರೆಡಿ ಇರುತ್ತದೆ.