ಪ್ರಕರಣದ ಮೊದಲ ಆರೋಪಿ ಮಹಾದೇವ ಬೈರಗೊಂಡ, ಗೋಪಾಲ್ ಹಳ್ಳೂರ್, ಮಲ್ಲಿಕಾರ್ಜುನ್ ಅಸೋಡೆ, ಮೂವರು ಪೊಲೀಸ್ ಪೇದೆಗಳು ಸೇರಿದಂತೆ 16 ಆರೋಪಿಗಳು ಹಾಜರಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 17 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ವಿಜಯಪುರ(ಮಾ.01): ಜಿಲ್ಲೆಯ ಚಡಚಣ ತಾಲೂಕಿನ ಕೊಂಕಣಗಾಂವ ಗ್ರಾಮದಲ್ಲಿ ನಡೆದಿದ್ದ ಧರ್ಮರಾಜ್ ಚಡಚಣ ನಕಲಿ ಎನ್ಕೌಂಟರ್ ಹಾಗೂ ಗಂಗಾಧರ ಚಡಚಣ ನಿಗೂಢ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೀಮಾತೀರದ ಮಹಾದೇವ ಬೈರಗೊಂಡ ಸೇರಿದಂತೆ ಎಲ್ಲ ಆರೋಪಿಗಳು ಸೋಮವಾರ ಜಿಲ್ಲಾ ನ್ಯಾಯಾಲಯಕ್ಕೆ ಆಗಮಿಸಿ ವಿಚಾರಣೆ ಎದುರಿಸಿದರು. ಈ ವೇಳೆ ನ್ಯಾಯಾಲಯವು ಏ.10 ವಿಚಾರಣೆ ಮುಂದೂಡಿದೆ.
ಪ್ರಕರಣದ ಮೊದಲ ಆರೋಪಿ ಮಹಾದೇವ ಬೈರಗೊಂಡ, ಗೋಪಾಲ್ ಹಳ್ಳೂರ್, ಮಲ್ಲಿಕಾರ್ಜುನ್ ಅಸೋಡೆ, ಮೂವರು ಪೊಲೀಸ್ ಪೇದೆಗಳು ಸೇರಿದಂತೆ 16 ಆರೋಪಿಗಳು ಹಾಜರಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 17 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. 6ನೇ ಆರೋಪಿ ಬಾಬು ಕಚನಾಳರ್ ಊಫ್ರ್ ಮೆಂಬರ್ ಮಹಾದೇವ ಬೈರಗೊಂಡನ ಮೇಲೆ ನಡೆದ ಚಡಚಣ ಗ್ಯಾಂಗ್ ದಾಳಿ ಮಾಡಿದ ವೇಳೆ ಸಾವನ್ನಪ್ಪಿದ ಕಾರಣ 16 ಆರೋಪಿಗಳು ಜಿಲ್ಲಾ 1ನೇ ಹೆಚ್ಚುವರಿ ನ್ಯಾಯಾಲಯಕ್ಕೆ ಹಾಜರಾದರು.
Vijayapura: ಭೀಮಾತೀರದ ಹಂತಕರಿಗೆ ಆತಂಕ ದೂರ: 40 ವರ್ಷದ ಗ್ಯಾಂಗ್ ವಾರ್ ಅಂತ್ಯ
ಬಿಗಿ ಭದ್ರತೆ:
ಧರ್ಮರಾಜ್ ಚಡಚಣ ಹಾಗೂ ಗಂಗಾಧರ ಚಡಚಣ ಹತ್ಯೆ ಪ್ರಕರಣದ ಮೊದಲ ಆರೋಪಿ ಮಹಾದೇವ ಬೈರಗೊಂಡ ಕೋರ್ಚ್ಗೆ ಹಾಜರಾದ ಹಿನ್ನೆಲೆಯಲ್ಲಿ ವಿಜಯಪುರ ಪೊಲೀಸ್ ಅಧಿಕಾರಿಗಳು ಬಿಗಿ ಪೊಲೀಸ್ ಬಂದೋಬಸ್್ತ ಏರ್ಪಡಿಸಿದ್ದರು. ಕೋರ್ಚ್ ಆವರಣಕ್ಕೆ ಪ್ರವೇಶಿಸುವವರ ಮೇಲೆ ನಿಗಾ ಇಟ್ಟಿದ್ದರು. ಯಾವುದೇ ಅನಾಹುತಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಇನ್ನು ಕೋರ್ಚ್ ಆವರಣದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಲಾಗಿತ್ತು.
ಇತ್ತೀಚಿಗೆ ಭೀಮಾತೀರದ ಎರಡು ಪ್ರಬಲ ಗ್ಯಾಂಗ್ಗಳಾದ ಬೈರಗೊಂಡ ಗ್ಯಾಂಗ್ ಹಾಗೂ ಚಡಚಣ ಗ್ಯಾಂಗಿನ ನಡುವೆ ಎಡಿಜಿಪಿ ಅಲೋಕ್ಕುಮಾರ್ ರಾಜಿ ಸಂಧಾನ ನಡೆಸಿದ್ದರು. ಈ ಸಂಧಾನಕ್ಕು ಮೊದಲು ಕೋರ್ಚ್ಗೆ ಹಾಜರಾಗಲು ನಡಗುತ್ತಲೆ ಬರುತ್ತಿದ್ದ ಮಹಾದೇವ ಈ ಬಾರಿ ಯಾವ ಆತಂಕವೂ ಇಲ್ಲದೇ ಕೋರ್ಚ್ಗೆ ಹಾಜರಾಗಿದ್ದಾನೆ.
ಏನಿದು ಪ್ರಕರಣ?:
ಭೀಮಾತೀರದಲ್ಲಿ ಹಲವಾರು ದಶಕಗಳಿಂದ ಚಡಚಣ ಹಾಗೂ ಬೈರಗೊಂಡ ಕುಟುಂಬಗಳ ನಡುವೆ ವೈರತ್ವ ಬೆಳೆದುಕೊಂಡು ಬಂದಿದೆ. ಇನ್ನು ಕಳೆದ 2017ರ ಅಕ್ಟೋಬರ್ 30ರಂದು ಚಡಚಣ ಮಲ್ಲಿಕಾರ್ಜುನ ಮಕ್ಕಳಾದ ಧರ್ಮರಾಜ್ ಮೇಲೆ ಆಗಿನ ಚಡಚಣ ಪಿಎಸ್ಐ ಶಸ್ತ್ರಾಸ್ತ್ರ ತಪಾಸಣೆ ನೆಪದಲ್ಲಿ ಹೋಗಿ ಗುಂಡು ಹಾರಿಸಿದ್ದರು ಎಂದು ದೂರು ದಾಖಲಾಗಿತ್ತು. ಇತ್ತ ಆತನ ಸಹೋದರ ಗಂಗಾಧರ ಚಡಚಣ ನಿಗೂಢವಾಗಿ ನಾಪತ್ತೆಯಾಗಿದ್ದ.
ಈ ಎರಡು ಪ್ರಕರಣಗಳನ್ನು ಧರ್ಮರಾಜ್ ನಕಲಿ ಎನ್ಕೌಂಟರ್ ಹಾಗೂ ಗಂಗಾಧರ ನಿಗೂಢ ಹತ್ಯೆ ಎಂದು ಪರಿಗಣಿಸಿ ಸಿಐಡಿ ಕೂಡ ತನಿಖೆ ನಡೆಸಿ ಕೋರ್ಚ್ಗೆ ಚಾಜ್ರ್ಶೀಟ್ ಸಲ್ಲಿಕೆ ಮಾಡಿತ್ತು. ಆರೋಪಿ ಮಹಾದೇವ ಬೈರಗೊಂಡ ಮೇಲೆ ಕನ್ನಾಳ ಕ್ರಾಸ್ ಬಳಿ ಚಡಚಣ ಗ್ಯಾಂಗ್ ಹುಡುಗರು ದಾಳಿ ಮಾಡುವ ಮೂಲಕ ಧರ್ಮರಾಜ್ ಚಡಚಣ, ಗಂಗಾಧರ ಚಡಚಣ ಹತ್ಯೆ ಪ್ರತೀಕಾರಕ್ಕೆ ಯತ್ನಿಸಿದ್ದರು. ಹೀಗಾಗಿ ಬೈರಗೊಂಡ ಕೋರ್ಚ್ಗೆ ಹಾಜರಾಗುವ ವೇಳೆ ಮತ್ತೆ ಚಡಚಣ ಗ್ಯಾಂಗ್ ಅಟ್ಯಾಕ್ ಮಾಡುವ ಭೀತಿ ಇತ್ತು. ಆದರೆ, ಇತ್ತೀಚೆಗೆ ಸ್ವತಃ ಎಡಿಜಿಪಿ ಅಲೋಕ್ಕುಮಾರ್ ಚಡಚಣ ಗ್ಯಾಂಗಿನ ವಿಮಲಾಬಾಯಿ ಹಾಗೂ ಬೈರಗೊಂಡನ ಗ್ಯಾಂಗ್ನ ರಾಜಿ ಸಂಧಾನ ಮಾಡಿಸಿದ್ದಾರೆ.